ವಾರದ ನಡುವೆ ಬಿಗ್‌ಬಾಸ್ ಮನೆಯಿಂದ ಮತ್ತೊಬ್ಬರು ಹೊರ ಬಂದಿದ್ದಾರೆ. ತಾಂಡವ್ ರಾಮ್ 'ಎಮರ್ಜೆನ್ಸಿ ಎಕ್ಸಿಟ್' ಆಗಿದ್ದಾರೆ. ಆದರೆ ಇದನ್ನು ಬಹುತೇಕರು ಒಪ್ಪಲು ಸಿದ್ಧರಿಲ್ಲ. ಇಷ್ಟು ಬೇಗ ತಾಂಡವ್ ಹೊರ ಬರಬೇಕಾದ ಸ್ಪರ್ಧಿ ಅಲ್ಲವೇ ಅಲ್ಲ. ಏನೋ ಗಿಮಿಕ್ ಇದರಲ್ಲಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಎಪಿಸೋಡ್‌ನಲ್ಲಿ ತಾಂಡವ್ ಎವಿಕ್ಟ್ ಕಾರ್ಡನ್ನು ತೋರಿಸಿದನ್ನು ಮಾತ್ರ ಪ್ರಸಾರ ಮಾಡಿದ್ದಾರೆ. ಬಳಿಕ ಅವರು ಮನೆಯಿಂದ ಹೊರ ಬಂದ ದೃಶ್ಯಗಳು ತೋರಿಸಿಲ್ಲ. ಹಾಗಾಗಿ ಕೆಲವರಿಗೆ ಅನುಮಾನ ಮೂಡಿದೆ. ಅಪ್ಪಿ ತಪ್ಪಿ ತಾಂಡವ್ ಸೀಕ್ರೆಟ್ ರೂಮ್‌ಗೆ ಹೋಗ್ತಾರಾ ? ಎನ್ನುವ ಗೊಂದಲ ಅಭಿಮಾನಿಗಳಲ್ಲಿದೆ. ಆದರೆ ಕಲರ್ಸ್ ಕನ್ನಡ ವಾಹಿನಿ ತಾಂಡವ್ ಎಮರ್ಜೆನ್ಸಿ ಎಕ್ಸಿಟ್ ಆಗಿದ್ದಾರೆ ಎಂದು ಪೋಸ್ಟರ್ ಸಮೇತ ಪೋಸ್ಟ್ ಮಾಡಿದ್ದಾರೆ. ಹಾಗಾಗಿ ಇದು ನಿಜವೇ ಎನ್ನುವಂತಾಗಿದೆ. ಇದನ್ನೆಲ್ಲಾ ಮೀರಿ ಏನಾದರೂ ಸರ್‌ಪ್ರೈಸ್ ಕಾದಿದ್ಯಾ? ಎನ್ನುವುದು ಮುಂದೆ ಗೊತ್ತಾಗಲಿದೆ.
ಫಿನಾಲೆವರೆಗೆ ತಾಂಡವ್ ರಾಮ್ ಹೋಗ್ತಾರೆ ಎಂದೇ ಅಭಿಮಾನಿಗಳು ಭಾವಿಸಿದ್ದರು. ಒಳ್ಳೆ ಎಂಟರ್‌ಟೈನರ್ ಆಗಿದ್ದರು. ವ್ಯಕ್ತಿತ್ವದ ಆಟಕ್ಕೆ ಸೂಕ್ತ ವ್ಯಕ್ತಿ ಎನ್ನುತ್ತಿದ್ದರು. ನಾವೆಲ್ಲಾ ವೋಟ್ ಮಾಡಿದ್ದೀವಿ ಅದು ಹೇಗೆ ತಾಂಡವ್ ಹೊರ ಬರೋಕೆ ಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ತಾಂಡವ್ ಯಾವುದಾದರೂ ಹೊಸ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವ ಕಾರಣಕ್ಕೆ ಹೊರ ಬಂದಿರಬಹುದು ಎನ್ನುವ ವಾದ ಕೆಲವರದ್ದು. ಒಟ್ಟಾರೆ 3 ವಾರ ಪೂರೈಸುವ ಮುನ್ನ ಪ್ರಬಲ ಸ್ಪರ್ಧಿ ಮನೆಯಿಂದ ಹೊರ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.
ಬಿಗ್‌ಬಾಸ್ ಸ್ಕ್ರಿಪ್ಟೆಡ್ ಶೋ.. ತಾಂಡವ್ ಮನೆಯಿಂದ ಹೊರಗೆ ಕಳುಹಿಸಿದ್ದನ್ನು ನಾವು ಒಪ್ಪಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಮುಂದಿನ ವಾರ ಅವ್ರು ಮತ್ತೆ ಮನೆ ಒಳಗೆ ಹೋದ್ರು ಹೋಗಬಹುದು ಎಂದು ಊಹಿಸುತ್ತಿದ್ದಾರೆ. ಮೊದಲ ವಾರ ಪ್ರಥಮಾ ಪ್ರಸಾದ್ ಎಲಿಮಿನೇಟ್ ಆಗಿದ್ದರು. ಎರಡನೇ ವಾರದ ನಡುವೆ ಆರೋಗ್ಯ ಸಮಸ್ಯೆಯಿಂದ ಓಂ ಪ್ರಕಾಶ್ ರಾವ್ ಹೊರ ಬಂದಿದ್ದರು. ಇದೀಗ ತಾಂಡವ್ ಕೂಡ ಎಕ್ಸಿಟ್ ಆಗಿ ಮನೆ ಮಂದಿ ಸಂಖ್ಯೆ 13ಕ್ಕೆ ಇಳಿದಿದೆ. ಶೀಘ್ರದಲ್ಲೇ ವೈಲ್ಡ್ ಕಾರ್ಡ್ ಎಂಟ್ರಿ ಆಗಲಿದೆ.
ಬಿಗ್ ಬಾಸ್ 13ರಲ್ಲಿ Emergency exit ಆದ passenger - ತಾಂಡವ್ ರಾಮ್
— Colors Kannada (@ColorsKannada) September 24, 2026
ಬಿಗ್ ಬಾಸ್ | ಸೋಮ - ಶುಕ್ರ ರಾತ್ರಿ 9:30 | ಶನಿ - ಭಾನು ರಾತ್ರಿ 9:00#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKEngage pic.twitter.com/QyFNq9FTY0