ಬಿಗ್‌ಬಾಸ್ ಕನ್ನಡ ಸೀಸನ್ 13 ಸದ್ಯ ಎರಡನೇ ವಾರಾಂತ್ಯಕ್ಕೆ ಬಂದು ನಿಂತಿದೆ. 16 ಮಂದಿ ಸ್ಪರ್ಧಿಗಳಲ್ಲಿ ಇಬ್ಬರೂ ಹೊರ ಬಂದಿದ್ದಾರೆ. ಮೊದಲ ವಾರವೇ ಪ್ರಥಮಾ ಪ್ರಸಾದ್ ಎಲಿಮಿನೇಟ್ ಆಗಿದ್ದರು. ಆರೋಗ್ಯ ಸಮಸ್ಯೆ ಹಿನ್ನೆಲೆ ಓಂಪ್ರಕಾಶ್ ರಾವ್ ಬಿಗ್‌ಬಾಸ್ ಜರ್ನಿ ಮುಗಿಸಿದ್ದರು. ಇನ್ನು ಎರಡನೇ ವಾರ ಕೆಲವರ ಆಟದ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು. ಅವರಿಗೆಲ್ಲಾ ಕಿಚ್ಚ ಕ್ಲಾಸ್ ತಗೊಳ್ಳೋ ಟೈಂ ಬಂದಿದೆ.
ವಾರದ ಕಥೆ ಕಿಚ್ಚನ ಜೊತೆ ವೀಕೆಂಡ್ ಎಪಿಸೋಡ್ ಹತ್ತಿರವಾಗಿದೆ. ಸದ್ಯ ಪ್ರೋಮೊ ರಿಲೀಸ್ ಆಗಿ ಸದ್ದು ಮಾಡ್ತಿದೆ. "ತಪ್ಪು ಮಾಡಿದ್ರೆ ಕ್ಷಮೆ ಇರುತ್ತೆ, ತಪ್ಪನ್ನೇ ಮಾಡ್ತಿದ್ರೆ ಕಿಚ್ಚನ ಕ್ಲಾಸ್ ಇರುತ್ತೆ" ಎಂದು ಕ್ಯಾಪ್ಷನ್ ಕೊಟ್ಟು ಕಲರ್ಸ್ ಕನ್ನಡ ಪ್ರೊಮೊ ಬಿಟ್ಟಿದೆ. ಮನೆಯಲ್ಲಿ ಕೆಲವರು ಬಿಗ್‌ಬಾಸ್ ಆದೇಶವನ್ನೇ ತಿರಸ್ಕರಿಸಿದ್ದರು. ಅಂತಹವರಿಗೆ ಸುದೀಪ್ ಚಾಟಿ ಬೀಸುವುದು ಪಕ್ಕಾ ಆಗಿದೆ.
ಈ ಮನೆಯಲ್ಲಿ ಕೆಲವರು ಅವಕಾಶ ಕೊಟ್ಟಂತ ವೇದಿಕೆಗೆ ಗೌರವ ಕೊಟ್ತಿದ್ದಾರಾ, ಮಾತುಗಳು ಅವಶ್ಯಕತೆ ಮಿತಿ ಮೀರುತ್ತಿದ್ಯಾ? ಎಂದು ಸುದೀಪ್ ಹೇಳಿರುವುದು ಪ್ರೋಮೊದಲ್ಲಿ ನೋಡಬಹುದು. ಕೆಲವರು ಹ್ಯುಮ್ಯಾನಿಟಿ ತೋರಿಸೋದ್ರಲ್ಲಿ ಕಾಪಾಡೋದ್ರಲ್ಲಿ ತಪ್ಪಾಗ್ತಿದ್ಯಾ, ತಾನು ಮಾಡಿದ್ದೇ ಸರಿ ಎನ್ನುವ ಮುಠ್ಠಾಳತನದ ಕಲ್ಪನೆ ತಲೆಗೇರುತ್ತಿದ್ಯಾ ? ಎಂದು ಸುದೀಪ್ ಖಾರವಾಗಿ ಮಾತನಾಡಿರುವುದನ್ನು ನೋಡಬಹುದು.
ಕಾಮನ್‌ಮ್ಯಾನ್ ಆಗಿ ಬಿಗ್‌ಬಾಸ್ ಮನೆ ಸೇರಿರುವವರು ಅತಿಯಾಗಿ ಆಡ್ತಿದ್ದಾರೆ. ಅವರಿಗೆ ತಕ್ಕ ಬುದ್ದಿ ಕಲಿಸಬೇಕು ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ವೀಕೆಂಡ್ ಕಾರ್ಯಕ್ರಮದಲ್ಲಿ ಕಿಚ್ಚ ಯಾವ ಯಾವ ವಿಚಾರಗಳ ಬಗ್ಗೆ ಮಾತನಾಡಬೇಕು ಎಂದು ಕಲರ್ಸ್ ಕನ್ನಡ ವೀಕ್ಷಕರನ್ನು ಕೇಳಿತ್ತು. ಕಾಮನ್‌ಮ್ಯಾನ್ ಆಗಿ ಬಂದಿರುವವರಿಗೆ ತಿಳಿ ಹೇಳಬೇಕು, ಮಂಜು ಆಟೋಟೋಪಕ್ಕೆ ಬ್ರೇಕ್ ಹಾಕಬೇಕು ಹೀಗೆ ಸಾಕಷ್ಟು ವಿಷಯಗಳನ್ನು ವೀಕ್ಷಕರು ಕಾಮೆಂಟ್ ಮಾಡಿ ತಿಳಿಸಿದ್ದಾರೆ.
ಇನ್ನು ಬಿಗ್‌ಬಾಸ್ ಸೀಸನ್ 13ರಲ್ಲಿ ಸಂಗೀತಾ ಭಟ್ ಮೊದಲ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಈ ವಾರ ಕಿಚ್ಚನ ಚಪ್ಪಾಳೆ ಯಾರಿಗೆ ಸಿಗುತ್ತದೆ ಎನ್ನುವ ಕುತೂಹಲ ಕೂಡ ಮೂಡಿದೆ. ಯಾರಿಗೆ ಕಳಪೆ ಪಟ್ಟ ಸಿಗುತ್ತೋ ಕಾದು ನೋಡಬೇಕಿದೆ.
ತಪ್ಪು ಮಾಡಿದ್ರೆ ಕ್ಷಮೆ ಇರುತ್ತೆ, ತಪ್ಪನ್ನೇ ಮಾಡ್ತಿದ್ರೆ ಕಿಚ್ಚನ ಕ್ಲಾಸ್ ಇರುತ್ತೆ!
— Colors Kannada (@ColorsKannada) September 19, 2026
ಬಿಗ್ ಬಾಸ್ - ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKPromo pic.twitter.com/EhMopum7PZ