ಬಿಗ್‌ಬಾಸ್ ಮನೆಯಲ್ಲಿ ಕಿರಿಕ್ ತಾರಕಕ್ಕೇರಿದೆ. ಮಂಜು ಆರ್ಭಟ ಎಲ್ಲೆ ಮೀರಿದೆ. ಅಶ್ಲೀಲ ಪದಗಳನ್ನು ಬಳಸಿ ಆತನ ಇತರೆ ಸ್ಪರ್ಧಿಗಳನ್ನು ಬೈಯುತ್ತಿರುವುದು ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ. ಇದೆಲ್ಲದರ ನಡುವೆ ವೀಕೆಂಡ ಪಂಚಾಯ್ತಿ ಸಮಯ ಬಂದಿದೆ. ಪಂಚಾಯ್ತಿಯಲ್ಲಿ ಕಿಚ್ಚ ಯಾರಿಗೆಲ್ಲಾ ಮಾತಿನ ಪೆಟ್ಟು ಕೊಡ್ತಾರೆ ಕಾದು ನೋಡಬೇಕಿದೆ.

ಮಂಜು ಬಿಗ್‌ಬಾಸ್ ಆಟಕ್ಕೆ ಲಾಯಕ್ಕಿಲ್ಲ. ಬೀದಿ ರೌಡಿ ತರ ಆಡುತ್ತಿದ್ದಾನೆ ಎಂದು ಕೆಲವರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಮಂಜುನ ಹೊರಗೆ ಕಳಿಸುವುದು ಬೇಡ, ಲಾಯರ್ ಜಗದೀಶ್ ಅವರನ್ನು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಒಳಗೆ ಕಳ್ಸಿ, ಅವ್ರೇ ಮಂಜುಗೆ ಸರಿಯಾಗಿ ಪಾಠ ಕಲಿಸ್ತಾರೆ ಎಂದು ಬಿಗ್‌ಬಾಸ್‌ಗೆ ಕೆಲವರು ಸಲಹೆ ನೀಡುತ್ತಿದ್ದಾರೆ.

ಮಂಜು ವಿಚಾರದಲ್ಲಿ ಸುದೀಪ್ ಒಂದು ನಿರ್ಧಾರ ತೆಗೆದುಕೊಳ್ಳಬೇಕು. ಕೂಡಲೇ ಮನೆಯಿಂದ ಹೊರಗಡೆ ಕಳಿಸ್ಬೇಕು ಎನ್ನುವುದು ಸಾಕಷ್ಟು ಜನರ ಮನವಿ. ಇದೆಲ್ಲದರ ನಡುವೆ ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಎನ್ನುವ ಕುತೂಹಲ ಮೂಡಿದೆ. ಗಗನ್ ನಾನು ಬಿಗ್‌ಬಾಸ್ ಮನೆಯಲ್ಲಿ ಇರೋಕೆ ಇಷ್ಟಪಡ್ತಿಲ್ಲ ಎಂದು ಹೇಳಿದ್ದು ಗೊತ್ತೇಯಿದೆ. ಈ ವಾರ ದೊಡ್ಮನೆ ಒಳಗೆ ಸದ್ದು ಮಾಡಿದ್ದು ಗಂಧರ್ವ ಹಾಗೂ ರಾಕ್ಷಸರ ನಡುವಿನ ಟಾಸ್ಕ್.. ಇದೇ ಟಾಸ್ಕ್‌ ಸ್ಪರ್ಧಿಗಳ ನಡುವೆ ಕಚ್ಚಾಟಕ್ಕೆ ಕಾರಣವಾಗಿತ್ತು.

ಸೋನಿಕಾ ಗೌಡ, ಮಂಜು, ಗಾನವಿ, ಯಶಸ್, ತಾಂಡವ್, ಧನುಷ್ ಈ ವಾರ ಬಿಗ್‌ಬಾಸ್ ಮನೆಯಿಂದ ಹೊರ ಬರೋಕೆ ನಾಮಿನೇಟ್ ಆಗಿದ್ದಾರೆ. ಇಷ್ಟು ಜನರಲ್ಲಿ ಯಾರಿಗೆ ಬಿಗ್‌ಬಾಸ್ ಜರ್ನಿ ಮುಗಿದು ಹೊರ ಬರ್ತಾರೆ ಎನ್ನುವ ಕುತೂಹಲ ವೀಕ್ಷಕರಲ್ಲಿದೆ. ಸದ್ಯ ಪ್ರೋಮೊ ಹೊರಬಂದು ಸಖತ್ ಸದ್ದು ಮಾಡ್ತಿದೆ.