ಬಿಗ್‌ಬಾಸ್ ಕನ್ನಡ ಸೀಸನ್ 13 ಗ್ರ್ಯಾಂಡ್ ಓಪನಿಂಗ್ ಪಡೆದು ವೀಕ್ಷಕರ ಗಮನ ಸೆಳೆದಿದೆ. ಈ ಬಾರಿ ಅಗ್ನಿ ಪರೀಕ್ಷೆ ಎದುರಿಸಿ ಕಾಮನ್‌ಮನ್ ಕೂಡ ದೊಡ್ಮನೆ ಒಳಗೆ ಹೋಗಿದ್ದಾರೆ. ನಿಧಾನವಾಗಿ ಸ್ಪರ್ಧಿಗಳ ನಡುವೆ ಮಾತಿಗೆ ಮಾತು ಬೆಳೆದು ಮನೆಯಲ್ಲಿ ಗಲಾಟೆ ಗದ್ದಲ ಶುರುವಾಗಿದೆ. 3ನೇ ದಿನ ಗಗನ್ ಚಿನ್ನಪ್ಪ ಮತ್ತು ಮಂಜ ನಡುವೆ ಮಾತಿಗೆ ಮಾತು ಬೆಳೆದಿದೆ.
ಕಲರ್ಸ್ ಕನ್ನಡ ವಾಹಿನಿ ಹೊಸ ಪ್ರೋಮೊ ಬಿಡುಗಡೆ ಮಾಡಿದ್ದು ಹೊಸ ಟಾಸ್ಕ್ ಸ್ಪರ್ಧಿಗಳ ನಡುವೆ ಪೈಪೋಟಿಗೆ ಕಾರಣವಾಗಿದೆ. ಆರು ಜನರ ಎರಡು ತಂಡಗಳಾಗಿ ಸ್ಪರ್ಧಿಗಳು ಟಾಸ್ಕ್ ಎದುರಿಸಿದ್ದಾರೆ. ವಿಮಾನದಲ್ಲಿ ಇದ್ದಾಗ ಗಗನ್ ಹಾಗೂ ಮಂಜನ ನಡುವೆ ವಾಕ್ಸಮರ ನಡೆದಿತ್ತು. ಇದೀಗ ಟಾಸ್ಕ್ ವೇಳೆ ಅದು ಮುಂದುವರೆದಿದೆ. ಎರಡು ತಂಡಗಳ ಎದುರು ತಿನ್ನಲು ಕಷ್ಟ ಎನಿಸುವ ಒಂದಷ್ಟು ಆಹಾರ ಪದಾರ್ಥಗಳನ್ನು ಇಡಲಾಗಿದೆ. ಯಾರು ಅದನ್ನು ತಿಂದು ಮುಗಿಸುತ್ತಾರೆ ಎನ್ನುವ ಟಾಸ್ಕ್ ಕೊಡಲಾಗಿದೆ.
ಜಗದೀಶ್ ಹಾಗೂ ಓಂ ಪ್ರಕಾಶ್ ರಾವ್ ಟಾಸ್ಕ್ ಸ್ವೀಕರಿಸಿದ್ದಾರೆ. ಟಾಸ್ಕ್ ಮುಗಿದ ಮೇಲೆ 'ಬಡ್ದು ಬಾಯಿಗೆ ಹಾಕ್ಕೊಂಡು ಹೋಗ್ತೀನಿ' ಎಂದು ಮಂಜು ಡೈಲಾಗ್ ಹೊಡೆದಿದ್ದಾರೆ. ಟಾಸ್ಕ್ ಮುಗಿದ ಬಳಿಕ ಅಧಿಕ ಪ್ರಸಂಗ ಬೇಡ ಎಂದು ಗಗನ್ ಹೇಳಿದ್ದಕ್ಕೆ ಮಂಜ ಗರಂ ಆಗಿ ತಿರುಗೇಟು ಕೊಟ್ಟಿರುವುದನ್ನು ನೋಡಬಹುದು.
ಇನ್ನು ಡೈಮಂಡ್ ಹುಡುಕಾಟದಲ್ಲಿ ಸೋಲುಂಡ ಆಸಿಯಾ ವಿಮಾನದಲ್ಲೇ ಉಳಿಯುವಂತಾಗಿದೆ. ಒಟ್ಟು 16 ಮಂದಿ ಈ ಬಾರಿ ಬಿಗ್‌ಬಾಸ್ ಮನೆ ಒಳಗೆ ಸೇರಿದ್ದಾರೆ. ಮನೆಯ ಸೆಟ್ ಕೂಡ ಬಹಳ ವಿಭಿನ್ನವಾಗಿದೆ.