ಬಿಗ್‌ಬಾಸ್ ಮನೆಯಲ್ಲಿ ವಾರದ ಪಂಚಾಯ್ತಿ ನಡೀತಿದೆ. ಈ ವಾರ ಯಾರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಈಗಾಗಲೇ ಭಾನುವಾರದ ಎಪಿಸೋಡ್ ಚಿತ್ರೀಕರಣ ಸಹ ಮುಗಿದಿದೆ. ಮೊದಲ ವಾರ ಪ್ರಥಮಾ ಪ್ರಸಾದ್ ಎಲಿಮಿನೇಟ್ ಆಗಿದ್ದರು. ಎರಡನೇ ವಾರದ ಆರಂಭದಲ್ಲೇ ಅನಾರೋಗ್ಯದಿಂದ ಓಂ ಪ್ರಕಾಶ್ ರಾವ್ ಹೊರ ಬಂದಿದ್ದರು. ಮತ್ತೆ ಮನೆ ಒಳಗೆ ಹೋಗಲ್ಲ ಎಂದು ಅವರು ತಿಳಿಸಿದ್ದಾರೆ.

ಈ ವಾರ ಯಾವುದೇ ಎಲಿಮಿನೇಷನ್ ಇಲ್ಲ ಎನ್ನಲಾಗ್ತಿದೆ. ಭಾನುವಾರ(ಸೆಪ್ಟೆಂಬರ್ 20) ಅಲ್ಲದಿದ್ದರೆ ಸೋಮವಾರ ಒಬ್ಬರು ಬಿಗ್‌ಬಾಸ್ ಜರ್ನಿ ಮುಗಿಸಬಹುದು ಎಂದು ಕೆಲವರು ಅಂದಾಜಿಸುತ್ತಿದ್ದಾರೆ. ಮುಂದಿನ ವಾರ ಕೂಡ ಎಲಿಮಿನೇಷನ್ ಅನುಮಾನ ಎನ್ನುವ ವಾದವೂ ಇದೆ.

ಇನ್ನು ಎರಡನೇ ವಾರ ಎಲಿಮಿನೇಷನ್ ಮುನ್ನ ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆ ಚರ್ಚೆ ಶುರುವಾಗಿದೆ. ಹೌದು ಬಿಗ್‌ಬಾಸ್ ಮನೆಗೆ 16 ಸ್ಪರ್ಧಿಗಳು ಹೋಗಿದ್ದರು. ಇಬ್ಬರು ಹೊರ ಬಂದು 14 ಜನ ಮಾತ್ರ ಉಳಿದುಕೊಂಡಿದ್ದಾರೆ. ಶೀಘ್ರದಲ್ಲೇ ಮತ್ತೊಬ್ಬರು ಮನೆ ಒಳಗೆ ಎಂಟ್ರಿ ಕೊಡಲಿದ್ದಾರೆ. ಇದೆಲ್ಲದರ ನಡುವೆ ಅಗ್ನಿ ಪರೀಕ್ಷೆ ಎದುರಿಸಿ ಮನೆ ಒಳಗೆ ಹೋಗಲು ಅವಕಾಶ ಪಡೆದ ನಾಲ್ಕು ಜನರ ಬಗ್ಗೆ ಭಾರೀ ಚರ್ಚೆ ನಡೀತಿದೆ. ಕಿರಣ್, ಮಂಜು, ಧನುಷ್ ಹಾಗೂ ಲಿಖಿತ್ ಪದೇ ಪದೆ ತಪ್ಪು ಮಾಡ್ತಿದ್ದಾರೆ. ಇದು ವೀಕ್ಷಕರ ಬೇಸರಕ್ಕೆ ಕಾರಣವಾಗ್ತಿದೆ. ಇನ್ಮುಂದೆ ಕಾಮನ್ ಮ್ಯಾನ್ ಆಯ್ಕೆ ಮಾಡುವ ಅಗ್ನಿಪರೀಕ್ಷೆ ಪ್ರಕ್ರಿಯೆಯೇ ಬೇಡ ಎಂದು ಸುದೀಪ್ ವೇದಿಕೆಯಲ್ಲಿ ಹೇಳಿದ್ದಾರೆ.

ಕಾಮನ್‌ಮ್ಯಾನ್ ಆಗಿ ಬಂದಿರುವ ಮಂಜುಗೆ ಸುದೀಪ್ ತಕ್ಕ ಪಾಠ ಕಲಿಸಿದ್ದಾರೆ. ರೌಡಿ ರೀತಿ ನಡೆದುಕೊಳ್ಳುತ್ತಿದ್ದ ಆತನಿಗೆ ಮೂಗುದಾರ ಹಾಕಿದ್ದಾರೆ. ಬೇರೆ ಸ್ಪರ್ಧಿಗ: ಯೋಗ್ಯತೆ ಬಗ್ಗೆ ಮಾತನಾಡುತ್ತಿದ್ದ ಮಂಜನಿಗೆ "ನಿನ್ನ ಯೋಗ್ಯತೆ ಎಷ್ಟು?" ಎಂದು ಸುದೀಪ್ ಕೇಳಿದ್ರು. "ಯೋಗ್ಯತೆಯೇ ಇಲ್ಲದ ವ್ಯಕ್ತಿ ಇನ್ನೊಬ್ಬರ ಯೋಗ್ಯತೆ ಹೇಗೆ ಅಳೆಯಬಲ್ಲ" ಎಂದು ಬಿಸಿ ಮುಟ್ಟಿಸಿದರು.

ವೇದಿಕೆಯಲ್ಲಿದ್ದ ಸುದೀಪ್ ಅವರನ್ನು "ಅಣ್ಣ" ಎಂದು ಮಂಜ ಕರೆದಾಗ "ನನ್ನ ತಮ್ಮನಾಗಲು ಬೆಲೆ ಇರಬೇಕು" ಎಂದು ಸರಿಯಾಗಿ ತರಾಟೆಗೆ ತೆಗೆದುಕೊಂಡರು. ಕಿರಣ್ ಶಾಸ್ತ್ರಿಗೆ ಕೂಡ ಸುದೀಪ್ ತಿರುಗೇಟು ನೀಡಿದ್ರು. ಅವಾಚ್ಯ ಪದಗಳನ್ನು ಬಳಸಿದ್ದ ಶಾಸ್ತ್ರಿಗೆ ಕಿಚ್ಚ ಸುದೀಪ್ ಕ್ಲಾಸ್ ತಗೊಂಡ್ರು. ಇನ್ನು ಅಗ್ನಿಪರೀಕ್ಷೆ ಖೋಟಾದಲ್ಲಿ ಮನೆ ಪ್ರವೇಶಿಸಿರುವ ನಾಲ್ವರನ್ನು ಭಾನುವಾರ ಬೇರೆ ಕೋಣೆಯಲ್ಲಿ ಇರಿಸುತ್ತಾರೆ ಎನ್ನಲಾಗ್ತಿದೆ.