ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಮೂರನೇ ಬಿಗ್ ಶಾಕ್ ಎದುರಾಗಿದೆ. ಗೆದ್ದೆ ಗೆಲ್ತಾರೆ ಎಂದುಕೊಂಡಿದ್ದ ಸ್ಪರ್ಧಿಯೇ ಮನೆಯಿಂದ ಹೊರ ಬಂದಿದ್ದಾರೆ ಎನ್ನಲಾಗ್ತಿದೆ. ಬಿಗ್ ಬಾಸ್ ಮನೆಯಲ್ಲಿ 'ಎಮರ್ಜೆನ್ಸಿ ಎಕ್ಸಿಟ್' ಆಗಿದೆ. ವಾರ ಮನೆಯಿಂದ ಹೊರ ಬರುವುದಕ್ಕೆ ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು.
'ಎಮರ್ಜೆನ್ಸಿ ಎಕ್ಸಿಟ್' ಬಗ್ಗೆ ಭಾನುವಾರ ಸುದೀಪ್ ಸುಳಿವು ಕೊಟ್ಟಿದ್ದರು. ಇದೀಗ ಹೊಸ ಪ್ರೋಮೊ ಬಂದಿದ್ದು ಇವತ್ತು(ಗುರುವಾರ) ಒಬ್ಬರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎಂದು ಪ್ರೋಮೊದಲ್ಲಿ ತೋರಿಸಲಾಗಿದೆ. ಯಾರನ್ನು ಮನೆಯಿಂದ ಹೊರ ಕಳುಹಿಸಲು ಬಯಸುತ್ತೀರಾ, ಕಾರಣ ಏನು ಎಂದು ಹೇಳಿ ಪಂಚಿಂಗ್ ಬ್ಯಾಗ್ ಕೆಳಗೆ ಅವರನ್ನು ನಿಲ್ಲಿಸಿ ಹೇಳುವಂತೆ ಬಿಗ್‌ಬಾಸ್ ಸ್ಪರ್ಧಿಗಳಿಗೆ ಸೂಚನೆ ಕೊಟ್ಟಿದ್ದಾರೆ.
ಬಿಗ್‌ಬಾಸ್ ಆದೇಶದಂತೆ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ಕೆಲವರು ಮನೆಯಿಂದ ಹೊರ ಹೋಗಲು ಇಷ್ಟವಿಲ್ಲದೇ ಗೋಳಾಡಿದ್ದಾರೆ. ಮತ್ತೆ ಕೆಲವರು ಆಪ್ತರು ಎಲಿಮಿನೇಟ್ ಆಗ್ತಾರಾ ಎಂದು ಅತ್ತಿದ್ದಾರೆ. ಒಬ್ಬರಲ್ಲ ಮೂವರು ಎಮರ್ಜೆನ್ಸಿ ಎಕ್ಸಿಟ್ ಆಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಪ್ರೋಮೊ ಹಿನ್ನೆಲೆ ಧ್ವನಿಯಲ್ಲಿ ಒಬ್ಬರು ಎಲಿಮಿನೇಷನ್ ಆಗ್ತಾರೆ ಎಂದು ಸ್ಪಷ್ಟವಾಗಿ ಹೇಳಿರುವುದು ಗೊತ್ತಾಗ್ತಿದೆ.
ತಾಂಡವ್ ಬಿಗ್‌ಬಾಸ್ ಮನೆಯಿಂದ ಎಮರ್ಜೆನ್ಸಿ ಎಕ್ಸಿಟ್ ಆಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಕಿರುತೆರೆ ನಟ ತಾಂಡವ್ ಬಿಗ್‌ಬಾಸ್ ಫಿನಾಲೆವರೆಗೂ ಹೋಗ್ತಾರೆ ಎಂದೇ ಕೆಲವರು ಭಾವಿಸಿದ್ದರು. ಆದರೆ ಇಷ್ಟು ಬೇಗ ಬಿಗ್‌ಬಾಸ್ ಜರ್ನಿ ಮುಗಿಸಿದ್ರಾ? ಎಂದು ಅಚ್ಚರಿ ಮೂಡಿದೆ. ಶೀಘ್ರದಲ್ಲೇ ವೈಲ್ಡ್‌ಕಾರ್ಡ್ ಎಂಟ್ರಿ ಕೂಡ ನಡೆಯಲಿದೆ. ಯಾರು ಎಮರ್ಜೆನ್ಸಿ ಎಕ್ಸಿಟ್ ಆಗಿದ್ದಾರೆ ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ.
ಬಿಗ್ ಬಾಸ್ ಮನೆಯಲ್ಲಿ EMERGENCY EXIT!
— Colors Kannada (@ColorsKannada) September 24, 2026
ಬಿಗ್ ಬಾಸ್ | ಸೋಮ - ಶುಕ್ರ ರಾತ್ರಿ 9:30 | ಶನಿ - ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ - https://t.co/96hibtGUwq#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKPromo pic.twitter.com/tXQKTyDSKr