ಈ ಬಾರಿ ಬಿಗ್‌ಬಾಸ್ ಕನ್ನಡ ಸೀಸನ್ ಬಹಳ ವಿಭಿನ್ನವಾಗಿದೆ. ಬಹಳ ವರ್ಷಗಳ ನಂತರ ಕಾಮನ್‌ಮ್ಯಾನ್‌ಗಳು ದೊಡ್ಮನೆ ಒಳಗೆ ಹೋಗಿದ್ದಾರೆ. ಅದಕ್ಕಾಗಿ ಅಗ್ನಿಪರೀಕ್ಷೆ ನಡೆಸಲಾಗಿತ್ತು. ಇನ್ನು ಆರಂಭದಲ್ಲೇ ವಿಮಾನದ ಟಾಸ್ಕ್ ಇತ್ತು. ಇದೀಗ ಎಮರ್ಜೆನ್ಸಿ ಎಕ್ಸಿಟ್ ಎಂದು ಹೇಳಿ ಮನೆ ಮಂದಿಗೆ ಕಿಚ್ಚ ಸುದೀಪ್ ಶಾಕ್ ಕೊಟ್ಟಿದ್ದಾರೆ.
ಸ್ಪರ್ಧಿಗಳೆಲ್ಲಾ ಮಲಗಿದ್ದಾಗ ಸೈರನ್ ಕೂಗಿದೆ. ಏನಾಯ್ತು ಎಂದು ಎಲ್ಲವೂ ಎದ್ದುಬಿದ್ದು ನೋಡುತ್ತಿದ್ದಂತೆ ಕಿಚ್ಚನ ಧ್ವನಿ ಕೇಳಿದೆ. "ಈ ಒಂದು ಪ್ರಯಾಣದಲ್ಲಿ ಒಂದು ಎಮರ್ಜೆನ್ಸಿ ಬಂದಿದೆ. ಈ ವಾರ ಮನೆಯಲ್ಲಿ ಯಾರೂ ಉಳಿಯುವ ಗ್ಯಾರಂಟಿ ಇಲ್ಲ.. ಪ್ರತಿ ಸ್ಪರ್ಧಿಗಳನ್ನು ನಾವೇ ನಾಮಿನೇಟ್ ಮಾಡ್ತಿದ್ದೀವಿ.. ಈ ವಾರ ಯಾವಾಗ ಏನ್ ಬೇಕಾದ್ರೂ ಆಗ್ಬಹುದು. ಗೆಟ್ ರೆಡಿ ಫಾರ್ ಎಮರ್ಜೆನ್ಸಿ ಎಕ್ಸಿಟ್" ಎಂದು ಸುದೀಪ್ ಹೇಳಿರುವ ಪ್ರೋಮೊ ವೈರಲ್ ಆಗ್ತಿದೆ.
ಈ ವಾರ ಮನೆಯ ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಹಾಗಾಗಿ ಯಾರು ಎಲಿಮಿನೇಟ್ ಆಗ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಪ್ರಥಮಾ ಪ್ರಸಾದ್ ಮೊದಲ ವಾರವೇ ಆಟ ಮುಗಿಸಿದ್ದರು. ಓಂಪ್ರಕಾಶ್ ರಾವ್ ಅನಾರೋಗ್ಯದ ಕಾರಣಕ್ಕೆ ಹೊರ ಬಂದರು. ಮಂಜ ಹಾಗೂ ಕಿರಣ್ ಕೂಡ ಹೊರ ಬಂದಿದ್ದಾರೆ. ಅವರಿಬ್ಬರು ಸೀಕ್ರೆಟ್ ರೂಮ್ ಒಳಗೆ ಹೋಗಲಿದ್ದಾರೆ. ಹಾಗಾಗಿ 16 ಜನರಲ್ಲಿ 12 ಮಂದಿ ಮಾತ್ರ ಸದ್ಯ ಮನೆ ಒಳಗೆ ಉಳಿದುಕೊಂಡಂತಾಗಿದೆ.
ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಎನ್ನುವುದರ ಜೊತೆಗೆ ಹಾಸ್ಯನಟ ಪ್ರಶಾಂತ್ ಗೌಡ ವೈಲ್ಡ್ ಕಾರ್ಡ್ ಎಂಟ್ರಿ ಪಡೆಯುತ್ತಾರೆ ಎನ್ನಲಾಗ್ತಿದೆ. ವೈಷ್ಣವಿ ಈ ವಾರ ಬಿಗ್‌ಬಾಸ್ ಜರ್ನಿ ಮುಗಿಸಬಹುದು ಎಂದು ಕೆಲವರು ಭಾವಿಸುತ್ತಿದ್ದಾರೆ.
ಈ ವಾರ ಮನೆಯಲ್ಲಿ EMERGENCY EXIT!
— Colors Kannada (@ColorsKannada) September 21, 2026
ಬಿಗ್ ಬಾಸ್ | ಸೋಮ - ಶುಕ್ರ ರಾತ್ರಿ 9:30 | ಶನಿ - ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ - https://t.co/96hibtGUwq#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKPromo #CK24x7 pic.twitter.com/QzpTGAKZKK