ಕಿಚ್ಚನ ವಾರದ ಕಥೆ ಶುರುವಾಗಿದೆ. ಅಂದ್ರೆ ಈ ವಾರ ಮತ್ತೊಬ್ಬರು ದೊಡ್ಮನೆಯಿಂದ ಹೊರ ಬರುವ ಸಮಯ ಬಂದಿದೆ. ಈಗಾಗಲೇ ಭಾನುವಾರದ ಎಪಿಸೋಡ್ ಶೂಟ್ ಆಗಿದ್ದು ಎಲಿಮಿನೇಷನ್ ಸಹ ನಡೆದು ಹೋಗಿದೆ ಎನ್ನಲಾಗ್ತಿದೆ. 'ಅಗ್ನಿಪರೀಕ್ಷೆ' ಗೆದ್ದು ಬಂದಿದ್ದ ಕಾಮನ್ ಮ್ಯಾನ್ ಲಿಖಿತ್ ಗೋಂದಿ ಮನೆಯಿಂದ ಹೊರ ಬಂದಿದ್ದಾರೆ ಎಂದು ಗುಲ್ಲಾಗಿದೆ. ಈ ಬಗ್ಗೆ ಅಧಿಕೃತವ ಮಾಹಿತಿ ಲಭ್ಯವಿಲ್ಲ.
ಶನಿವಾರದ ಎಪಿಸೋಡ್‌ನಲ್ಲಿ ಲಿಖಿತ್‌ಗೆ ಕಿಚ್ಚ ಸರಿಯಾಗಿ ಕ್ಲಾಸ್ ತಗೊಂಡಿದ್ದರು. ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿರುವ ಪ್ರಶಾಂತ್ ಅವರನ್ನು 'ಇಡ್ಲಿ-ಮಸಿ' ಎಂದು ಕರೆದಿದ್ದರು. ಪ್ರಶಾಂತ್ ಮೈಬಣ್ಣದ ಬಗ್ಗೆ ಹೀಗೆ ಮಾತನಾಡಿ ಚರ್ಚೆಗೆ ಗ್ರಾಸವಾಗಿದ್ದರು. ಇಬ್ಬರ ನಡುವೆ ಈ ಬಗ್ಗೆ ಜಗಳವಾಗಿತ್ತು. ಪಂಚಾಯ್ತಿಯಲ್ಲಿ ಸುದೀಪ್ ವಿಚಾರ ಪ್ರಸ್ತಾಪಿಸಿ ಬುದ್ಧಿ ಹೇಳಿದ್ದರು. ವರ್ಣಬೇಧ, ಜಾತಿಬೇಧ ಸರಿಯಲ್ಲ ಎಂದಿದ್ದರು. 'ಇಡ್ಲಿ-ಮಸಿ' ಅಂದ್ರೆ ಅರ್ಥವೇ ಬೇರೆ, ನಾನು ಆ ಅರ್ಥದಲ್ಲಿ ಹೇಳಲಿಲ್ಲ. ನಾನು ಹೇಳಿದ ಅರ್ಥವೇ ಬೇರೆ ಎಂದು ಲಿಖಿತ್ ಹೇಳಿದ್ದರು.
ನೀವು ಹೇಳಿದ್ದು ಬೇರೆಯ ಅರ್ಥದಲ್ಲಿ ಅಂದ್ರೆ ಅದು ಆ ಸಮಯದಲ್ಲೇ ಹೇಳಬಹುದಿತ್ತಲ್ಲ. ಅಲ್ಲೇ ಸ್ಪಷ್ಟನೆ ಕೊಡಬಹುದಿತ್ತಲ್ಲ ಎಂದರು. ಬಿಗ್‌ಬಾಸ್ ಮನೆಯಲ್ಲಿ ತಮ್ಮ ಚೇಷ್ಟೆಗಳಿಂದ ಸುದ್ದಿ ಆಗಿದ್ದ ಲಿಖಿತ್ ಕೊನೆಗೂ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗ್ತಿದೆ. ನಿಜಾನಾ, ಸುಳ್ಳಾ ಶೀಘ್ರದಲ್ಲೇ ಗೊತ್ತಾಗಲಿದೆ. 'ಅಗ್ನಿಪರೀಕ್ಷೆ'ಯಲ್ಲಿ ಜಡ್ಜ್‌ಗಳ ಮನಗೆದ್ದು ಲಿಖಿತ್ 11ನೇ ಸ್ಪರ್ಧಿಯಾಗಿ ಮನೆ ಒಳಗೆ ಹೋಗಿದ್ದರು.
ಮಂಜು ಜೊತೆ ಸೇರಿ ಕ್ಯಾಪ್ಟನ್ಸಿ ಆಟದಲ್ಲಿ ಲಿಖಿತ್ ಎಡವಟ್ಟು ಮಾಡಿದ್ದರು. ಆಸಿಯಾ ಜೊತೆಗಿನ ಕಿರಿಕ್‌ನಿಂದ ಕೂಡ ಅವರು ಗಮನ ಸೆಳೆದಿದ್ದರು. ಮಂಜ ಹಾಗೂ ಲಿಖಿತ್‌ಗೆ ಆಸಿಯಾ ಆವಾಜ್ ಹಾಕಿದ್ದು ಗೊತ್ತೇಯಿದೆ. ಕೆಎಲ್ಇ ಸೊಸೈಟಿಯ ಡಿಗ್ರಿ ಕಾಲೇಜಿನಲ್ಲಿ ಓದಿಕೊಂಡಿರುವ ಲಿಖಿತ್ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಕೂಡ ಚಿರಪರಿಚಿತರಾಗಿದ್ದಾರೆ. ತಂದೆ ಜೊತೆ ಸೇರಿ ವ್ಲಾಗ್ ವೀಡಿಯೋಗಳನ್ನು ಮಾಡಿ ಸದ್ದು ಮಾಡಿದ್ದಾರೆ. ಅಷ್ಟೇ ಅಲ್ಲ ಲಿಖಿತ್ 100 ಕಿ.ಮೀ ಅಲ್ಟ್ರಾ-ರನ್ನರ್. ಇದೀಗ ನಾಲ್ಕು ವಾರಕ್ಕೆ ಬಿಗ್‌ಬಾಸ್ ಜರ್ನಿ ಮುಗಿಸಿದ್ರಾ ?