ಬಿಗ್‌ಬಾಸ್ ಕನ್ನಡ ಸೀಸನ್ 13 ಸದ್ಯ ಮೂರು ವಾರಗಳನ್ನು ಪೂರೈಸಿದೆ. ಅಚ್ಚರಿ ಎಂದರೆ ಈಗಾಗಲೇ 3 ಮಂದಿ ಬಿಗ್‌ಬಾಸ್ ಜರ್ನಿ ಮುಗಿಸಿದ್ದಾರೆ. ಪ್ರಥಮಾ ಪ್ರಸಾದ್ ಮೊದಲ ವಾರ ಎಲಿಮಿನೇಟ್ ಆಗಿದ್ದರು. ಎರಡನೇ ವಾರದ ಮಧ್ಯೆ ಓಂ ಪ್ರಕಾಶ್ ರಾವ್ ಹೊರಬಂದಿದ್ದರು. ಮೂರನೇ ವಾರದ ನಡುವೆ ತಾಂಡವ್ ಎಮರ್ಜೆನ್ಸಿ ಎಕ್ಸಿಟ್ ಆಗಿದ್ದರು. ಇದೀಗ ವಾರದ ಕೊನೆಗೆ ಮತ್ತಿಬ್ಬರು ಹೊರಗೆ ಬಂದಿದ್ದಾರೆ.
ಸಾಮಾನ್ಯವಾಗಿ ಬಿಗ್‌ಬಾಸ್ ಮನೆಯಲ್ಲಿ ಭಾನುವಾರ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತೆ. ಆದರೆ ಈ ವಾರ ಶನಿವಾರವೇ ಇಬ್ಬರನ್ನು ಸುದೀಪ್ ಮನೆಯಿಂದ ಹೊರಗೆ ಕಳುಹಿಸಿದ್ದಾರೆ. ಅದರಲ್ಲೂ ತಾಂಡವ್ ರಾಮ್ ಬಳಿಕ ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದ ಅವಿನಾಶ್ ಕೂಡ ಬಿಗ್‌ಬಾಸ್ ಆಟ ಮುಗಿಸಿ ಹೊರ ಬಂದಿದ್ದಾರೆ. ಈ ವಾರ ಸಂಗೀತಾ ಬಿಟ್ಟು ಎಲ್ಲರೂ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿದ್ದರು. ಅದರಲ್ಲಿ ಅವಿನಾಶ್ ಹಾಗೂ ವೈಷ್ಣವಿ ಕೌಂಡಿನ್ಯ ಬಿಗ್‌ಬಾಸ್ ಜರ್ನಿ ಮುಗಿದಿದೆ.
ಮತಗಳ ಆಧಾರದಲ್ಲಿ ಎಲಿಮಿನೇಷನ್ ನಡೀತು. ಅದಕ್ಕಾಗಿ ಸಣ್ಣ ಆಕ್ಟಿವಿಟಿ ಕೊಟ್ಟಿದ್ದರು. ಯಾರು ಮನೆಯಿಂದ ಹೊರ ಬರ್ತಾರೆ ಎನ್ನುವುದು ಆ ಆಕ್ಟಿವಿಟಿ ಮೂಲಕ ಗೊತ್ತಾಗಿತ್ತು. ಇನ್ನು ಎಮರ್ಜೆನ್ಸಿ ಎಕ್ಸಿಟ್ ಆಗಿದ್ದ ತಾಂಡವ್ ರಾಮ್ ಮತ್ತೆ ವಾಪಸ್ ಬಂದಿದ್ದಾರೆ. ತಾಂಡವ್ ಮನೆಯಿಂದ ಹೊರ ಬಂದಿದ್ದು ವೀಕ್ಷಕರ ಬೇಸರಕ್ಕೆ ಕಾರಣವಾಗಿತ್ತು. ಅವರನ್ನು ಮತ್ತೆ ಕರೆಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಮಾಡಿ ಮನವಿ ಮಾಡುತ್ತಲೇ ಇದ್ದರು. ಕೊನೆಗೂ ತಾಂಡವ್ ವಾಪಸ್ ಆಗಿದ್ದಾರೆ.
ಈ ಬಾರಿ 16 ಮಂದಿ ಸ್ಪರ್ಧಿಗಳಾಗಿ ಬಿಗ್‌ಬಾಸ್ ಮನೆ ಒಳಗೆ ಹೋಗಿದ್ದರು. ಅದರಲ್ಲಿ ನಾಲ್ವರು ಹೊರ ಬಂದಂತೆ ಆಗಿದೆ. ಈಗ ಉಳಿದಿರುವುದು 12 ಮಂದಿ ಮಾತ್ರ. ಈ ವಾರ ವೈಲ್ಡ್ ಕಾರ್ಡ್ ಎಂಟ್ರಿ ಆಗುತ್ತೆ ಎನ್ನಲಾಗ್ತಿದೆ. ಇನ್ನು 3 ದಿನಗಳ ಮಟ್ಟಿಗೆ ಬಿಗ್‌ಬಾಸ್ ಮಾಜಿ ಸ್ಪರ್ಧಿ ಕಿಶನ್ ಕೂಡ ಮನೆ ಒಳಗೆ ಹೋಗ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.