ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಹೊಸ ಸೀಸನ್ ವೀಕ್ಷಕರನ್ನು ರಂಜಿಸ್ತಿದೆ. ಈಗಾಗಲೇ ಸೀಸನ್ 13ರ ಸ್ಪರ್ಧಿಗಳು ದೊಡ್ಮನೆ ಒಳಗೆ ಒಂದು ವಾರ ಪೂರೈಸಿದ್ದಾರೆ. ವಿಮಾನ ಏರಿ ಒಳಗೆ ಹೋಗಿದ್ದವರು ಅಲ್ಲಿಂದ ಮನೆಯೊಳಗೆ ಹೋಗಲು ಸರ್ಕಸ್ ಮಾಡುವಂತಾಗಿದೆ. ಇದೀಗ ಎಲ್ಲರೂ ವಿಮಾನದಿಂದ ಮನೆ ಒಳಗೆ ಎಂಟ್ರಿ ಕೊಟ್ಟಿದ್ದು ಅಸಲಿ ಆಟ ಶುರುವಾಗ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ.
ಕಿರಣ್, ಪ್ರಥಮಾ, ಸೌಂದರ್ಯ, ಆಸಿಯಾ, ವೈಷ್ಣವಿ, ಧನುಷ್, ಅವಿನಾಶ್, ಮಂಜ ಹಾಗೂ ಓಂ ಪ್ರಕಾಶ್ ರಾವ್ ಮೊದಲ ವಾರ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿದ್ದರು. ವೈಷ್ಣವಿ ಹಾಗೂ ಅವಿನಾಶ್ ಇಬ್ಬರಲ್ಲಿ ಒಬ್ಬರು ದೊಡ್ಮನೆ ಜರ್ನಿ ಮುಗಿಸ್ತಾರೆ ಎಂದು ಕೆಲವರು ಭಾವಿಸಿದ್ದರು. ಸದ್ಯ ಸೀಸನ್ 13ರಲ್ಲಿ ಕಿಚ್ಚನ ಮೊದಲ ಪಂಚಾಯ್ತಿ ಆರಂಭವಾಗಿದೆ. ಈ ನಡುವೆ ಎಲಿಮಿನೇಷನ್ ಯಾರಾಗ್ತಾರೆ ಎನ್ನುವ ಕುತೂಹಲ ಮೂಡಿದೆ. ಹಿರಿಯ ನಟಿ ವಿನಯ ಪ್ರಸಾದ್ ಪುತ್ರಿ ಪ್ರಥಮಾ ಪ್ರಸಾದ್ ಎಲಿಮಿನೇಟ್ ಆಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಮೊದಲ ಪಂಚಾಯ್ತಿಯಲ್ಲಿ ಕಿಚ್ಚ ಕೆಲವರಿಗೆ ಕ್ಲಾಸ್ ತಗೊಂಡಿದ್ರು. ನಾಮಿನೇಷನ್ ಬಗ್ಗೆ ಚರ್ಚಿಸುವವರ ಕಿವಿ ಹಿಂಡಿದ್ದರು. ತಾಂಡವ್‌ಗೆ ಸುದೀಪ್ ಸರಿಯಾಗಿ ಬಿಸಿ ಮುಟ್ಟಿಸಿದ್ದಾರೆ.