ಈ ಬಾರಿ ಬಿಗ್‌ಬಾಸ್ ಕನ್ನಡ ಸೀಸನ್‌ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡ್ತಿದ್ದಾರೆ. ಮೂರನೇ ವಾರದ ನಡುವೆಯೇ ಪ್ರಬಲ ಸ್ಪರ್ಧಿ ತಾಂಡವ್ ರಾಮ್ ಎಮರ್ಜೆನ್ಸಿ ಎಕ್ಸಿಟ್ ಆಗಿದ್ದಾರೆ. ಈ ಆಘಾತದಿಂದ ಹೊರಬರುವ ಮುನ್ನ ಮನೆ ಮಂದಿಗೆ ಮತ್ತೊಂದು ಆಘಾತ ಎದುರಾಗಿದೆ. ವೀಕೆಂಡ್ ಮತ್ತಿಬ್ಬರು ಎಮರ್ಜೆನ್ಸಿ ಎಕ್ಸಿಟ್ ಆಗ್ತಿದ್ದಾರೆ.
ಒಂದು ದಿನ ಮೊದ್ಲೆ 'ವಾರದ ಕತೆ ಕಿಚ್ಚನ ಜೊತೆ' ಪ್ರೋಮೊ ಬಂದಿದೆ. ಶನಿವಾರ, ಭಾನುವಾರ 3 ಗಂಟೆಗಳ ಕಾಲ ಕಿಚ್ಚನ ಪಂಚಾಯ್ತಿ ನಡೆಯಲಿದೆ. ಈಗಾಗಲೇ ತಾಂಡವ್ ರಾಮ್ ಎಮರ್ಜೆನ್ಸಿ ಎಕ್ಸಿಟ್ ಆಗಿದ್ದಾರೆ. ಮುಂದೆ ಎಕ್ಸಿಟ್ ಆಗುವ ಮತ್ತಿಬ್ಬರು ಯಾರು ಎಂದು ಹೇಳಿ ಪ್ರೋಮೊ ಬಿಟ್ಟಿದ್ದಾರೆ. ಇದನ್ನು ಕೇಳಿ ಮನೆಮಂದಿ ಅಚ್ಚರಿಗೊಂಡಿದ್ದಾರೆ. ತಾಂಡವ್ ರಾಮ್ ವಾರದ ಮಧ್ಯೆ ಮನೆಯಿಂದ ಹೊರ ಹೋಗಿದ್ದಾರೆ. ಹಾಗಾಗಿ ಈ ವೀಕೆಂಡ್ ಎಲಿಮಿನೇಷನ್ ಇರಲ್ಲ ಎಂದು ಭಾವಿಸಿದ್ದವರಿಗೆ ಬಿಗ್‌ಬಾಸ್ ಶಾಕ್ ಕೊಟ್ಟಿದ್ದಾರೆ.
ವೀಕೆಂಡ್‌ನಲ್ಲಿ ಇಬ್ಬರನ್ನು ಎಮರ್ಜೆನ್ಸಿ ಎಕ್ಸಿಟ್ ಮಾಡೋಕೆ ಕಿಚ್ಚ ಸುದೀಪ್ ವೇದಿಕೆಗೆ ಬರಲಿದ್ದಾರೆ. ಎಮರ್ಜೆನ್ಸಿ ಎಕ್ಸಿಟ್ ಜೊತೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೂಡ ಇರಬಹುದು ಎಂದು ವೀಕ್ಷಕರು ನಿರೀಕ್ಷೆ ಮಾಡುತ್ತಿದ್ದಾರೆ. ಕಿರುತೆರೆ ಹಾಸ್ಯನಟ ಪ್ರಶಾಂತ್ ಗೌಡ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾರೆ ಎನ್ನಲಾಗ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಮಾಹಿತಿ ಹೊರ ಬೀಳಲಿದೆ.
ಇನ್ನು ತಾಂಡವ್ ರಾಮ್ ಮನೆಯಿಂದ ಹೊರ ಬಂದಿದ್ದು ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ. ನಾವೆಲ್ಲಾ ವೋಟ್ ಮಾಡಿದ್ದೀವಿ, ಅದು ಹೇಗೆ ಅವ್ರು ಹೊರ ಬರ್ತಾರೆ. ಅವರನ್ನು ಸೀಕ್ರೆಟ್ ರೂಮ್‌ಗೆ ಕಳ್ಸಿದ್ದಾರಾ? ಮತ್ತೆ ತಾಂಡವ್ ಮನೆ ಒಳಗೆ ಬರ್ತಾರಾ ಎಂದು ಎದುರು ನೋಡುತ್ತಿದ್ದಾರೆ.
ಬಿಗ್ ಬಾಸ್ - ವಾರದ ಕತೆ ಕಿಚ್ಚನ ಜೊತೆ | ಶನಿ - ಭಾನು ರಾತ್ರಿ 8:00
— Colors Kannada (@ColorsKannada) September 25, 2026
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ - https://t.co/96hibtGUwq#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKPromo pic.twitter.com/MJJVReSvfe