ಬಿಗ್‌ಬಾಸ್ ಕನ್ನಡ ಸೀಸನ್ 13 ನೋಡ್ತಾ ನೋಡ್ತಾ ಒಂದು ವೀಕೆಂಡ್ ಅಂತ್ಯಕ್ಕೆ ಬಂದಿದೆ. ವಾರದ ಕಥೆ ಕಿಚ್ಚನ ಜೊತೆ ನೋಡೋಕೆ ವೀಕ್ಷಕರು ರೆಡಿಯಾಗಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ಕೂಡ ನಡೀತಿದೆ. ಮೊದಲ ವಾರ ಮನೆಯಿಂದ ಹೊರ ಹೋಗಲು 9 ಜನ ನಾಮಿನೇಟ್ ಆಗಿದ್ದಾರೆ. ಭಾರೀ ಸದ್ದು ಗದ್ದಲ ಮಾಡುತ್ತಿರುವ ಮಂಜ ಹಾಗೂ ಓಂ ಪ್ರಕಾಶ್ ರಾವ್ ಕೂಡ ಪಟ್ಟಿಯಲ್ಲಿದ್ದಾರೆ.

ಕಿರಣ್, ಪ್ರಥಮಾ, ಸೌಂದರ್ಯ, ಆಸಿಯಾ, ವೈಷ್ಣವಿ, ಧನುಷ್, ಅವಿನಾಶ್ ಇನ್ನುಳಿಗ 7 ಮಂದಿ ಎನ್ನುವುದು ಗೊತ್ತಾಗ್ತಿದೆ. ನೆಚ್ಚಿನ ಸ್ಪರ್ಧಿಯನ್ನು ಉಳಿಸಲು JioHotStar app download ಮಾಡಿ, vote ಮಾಡಿವಂತೆ ಬಿಗ್‌ಬಾಸ್ ಆಯೋಜಕರು ಸೂಚಿಸಿದ್ದಾರೆ. ಒಬ್ಬರಿಗೆ ದಿನಕ್ಕೆ 1 ವೋಟ್ ಮಾಡಲು ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ. ಮೇಲ್ನೋಟಕ್ಕೆ ವೈಷ್ಣವಿ ಹಾಗೂ ಅವಿನಾಶ್ ಡೇಂಜರ್‌ ಜೋನ್‌ನಲ್ಲಿದ್ದಾರೆ. ಅವರಿಬ್ಬರು ಬಿಗ್‌ಬಾಸ್ ಮನೆಯಲ್ಲಿ ಬಹಳ ಸೈಲೆಂಟ್ ಆಗಿಬಿಟ್ಟಿದ್ದಾರೆ.

ಧನುಷ್ ಬಹುತೇಕ ಸೇಫ್ ಆಗುವ ಸುಳಿವು ಸಿಕ್ಕಿದೆ. ಅವರು ವೀಕ್ಷಕರ ಗಮನ ಸೆಳೆಯುವಲ್ಲಿ ಸಕ್ಸಸ್ ಕಂಡಿದ್ದಾರೆ. ಸೌಂದರ್ಯ, ಆಸಿಯಾ, ಓಂ ಪ್ರಕಾಶ್ ರಾವ್ ಹಾಗೂ ಮಂಜುನಾಥ್ ಸದ್ಯಕ್ಕೆ ಹೊರಗೆ ಬರಲ್ಲ. ಕಾರಣ ಇವರೇ ಸದ್ಯಕ್ಕೆ ವೀಕ್ಷಕರಿಗೆ ಒಳ್ಳೆ ಮನರಂಜನೆ ಕೊಡುತ್ತಿದ್ದಾರೆ. ಮೊದಲ ವಾರ ಎಲಿಮಿನೇಷನ್ ಇರುತ್ತಾ ಎನ್ನುವ ಅನುಮಾನ ಕೂಡ ಮೂಡಿದೆ.

ಒಟ್ಟು 16 ಮಂದಿ ಸ್ಪರ್ಧಿಗಳು ಈ ಬಾರಿ ಬಿಗ್‌ಬಾಸ್ ಕನ್ನಡ ಶೋ ಮನೆ ಸೇರಿದ್ದಾರೆ. ಅಗ್ನಿ ಪರೀಕ್ಷೆಯಲ್ಲಿ ಗೆದ್ದ ನಾಲ್ವರು ಕಾಮನ್‌ಮ್ಯಾನ್‌ಗಳ ಜೊತೆ 12 ಮಂದಿ ಸೆಲೆಬ್ರೆಟಿಗಳು ಈ ಬಾರಿ ದೊಡ್ಮನೆ ಸೇರಿದ್ದಾರೆ. ಕೆಲವರು ಇನ್ನು ಫ್ಲೈಟ್‌ನಲ್ಲೇ ಕಾಲ ಕಳೆಯುವಂತಾಗಿದೆ. 9 ಜನ ನಾಮಿನೇಟ್ ಆಗಿದ್ದರೂ ಎಲಿಮಿನೇಷನ್ ಇರುತ್ತಾ ಎನ್ನುವ ಕುತೂಹಲ ಮೂಡಿದೆ. ನಾನಾ ಕಾರಣ ಕೊಟ್ಟು ಕೆಲವೊಮ್ಮೆ ಎಲಿಮಿನೇಷನ್ ಕ್ಯಾನ್ಸಲ್ ಮಾಡುತ್ತಾರೆ. ಸ್ಪರ್ಧಿಗಳು ಮನೆಗೆ ಹೊಂದಿಕೊಳ್ಳಲು ಮತ್ತಷ್ಟು ಸಮಯ ಬೇಕು ಎನ್ನುವ ಕಾರಣಕ್ಕೂ ಮೊದಲ ವಾರ ಎಲಿಮಿನೇಷನ್ ಮಾಡದೇ ಇರುವ ಸಾಧ್ಯತೆಯಿದೆ.