ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಸೌಂದರ್ಯ ಶೆಟ್ಟಿ ತಮ್ಮ ಅದ್ಭುತ ಆಟದ ಮೂಲಕ ಗಮನ ಸೆಳೆದಿದ್ದಾರೆ. ಟಾಸ್ಕ್‌ಗಳಲ್ಲಿ ಕೂಡ ಚೆನ್ನಾಗಿ ಹಾಡುತ್ತಿದ್ದಾರೆ. ಮಸ್ತ್ ಮನರಂಜನೆ ಕೊಡುತ್ತಿದ್ದಾರೆ. ಮೂಲತಃ ಮಂಗಳೂರಿನವರಾದರೂ ಸೌಂದರ್ಯ ಶೆಟ್ಟಿ ಸದ್ಯ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ ಶೋನಲ್ಲಿ ಕೂಡ ಸ್ಪರ್ಧೀಸಿದ್ದರು. ಸದ್ಯ ಸೌಂದರ್ಯ ಬಿಗ್‌ಬಾಸ್ ಮನೆಯಲ್ಲಿ ಕನಕದಾಸರ ಕೀರ್ತನೆ ಹಾಡಿ ಭೇಷ್ ಎನಿಸಿಕೊಂಡಿದ್ದಾರೆ.

ಇತ್ತೀಚೆಗೆ ದೊಡ್ಮನೆ ಒಳಗೆ ಕನ್ನಡ ರಾಜ್ಯೋತ್ಸವ ಆಚರಿಸಲಾಗಿತ್ತು. ನಾಡಗೀತೆಯನ್ನು ಕೂಡ ಪ್ಲೇ ಮಾಡಿದ್ದರು. ಸ್ಪರ್ಧಿಗಳೆಲ್ಲಾ ಗೌರವ ಸೂಚಿಸಿದ್ದರು. ಈ ವೇಳೆ ಬಹುತೇಕರು ನಾಡಗೀತೆಗೆ ದನಿಗೂಡಿಸಿದ್ದರು. ಆದರೆ ಆಸಿಯಾ, ಸೋನಿಕಾ ಗೌಡ ಹಾಗೂ ಗಗನ್ ಹಾಡಿರಲಿಲ್ಲ. ಅರೇ ಕರ್ನಾಟಕದಲ್ಲಿ ಹುಟ್ಟಿ ಬೆಳೆದವರಿಗೆ ನಾಡಗೀತೆ ಹಾಡಲು ಗೊತ್ತಿಲ್ವಾ ಎಂದು ಕೆಲವರು ಟ್ರೋಲ್ ಮಾಡಿದ್ದರು. ಸೌಂದರ್ಯ ಶೆಟ್ಟಿ ನೋಡಿ ಕಲಿರಿ ಎಂದು ಬುದ್ಧಿ ಹೇಳಿದ್ದರು.

ನಾಡಗೀತೆ ಮಾತ್ರವಲ್ಲ ಸೌಂದರ್ಯ ಶೆಟ್ಟಿ ಭಕ್ತಿಗೀತೆ, ಕೀರ್ತನೆಗಳನ್ನು ಕೂಡ ಸೊಗಸಾಗಿ ಹಾಡುತ್ತಾರೆ ಎನ್ನುವುದು ಗೊತ್ತಾಗಿದೆ. ಕಿರಣ್ ಶಾಸ್ತ್ರಿ ಜೊತೆ ಸೇರಿ 'ದಾಸನಾಗು ವಿಶೇಷನಾಗು, ದಾಸನಾಗು ವಿಶೇಷನಾಗು' ಎನ್ನುವ ಕನಕದಾಸರ ಕೀರ್ತನೆಯನ್ನು ಬಹಳ ಸೊಗಸಾಗಿ ಸ್ಪಷ್ಟವಾಗಿ ಹಾಡಿದ್ದಾರೆ. ಆ ವೀಡಿಯೋ ವೈರಲ್ ಆಗ್ತಿದೆ. ಹಾಟ್‌ಸ್ಟರ್‌ನಲ್ಲಿ ಇದು ಪ್ರಸಾರವಾಗಿದೆ. ಇದನ್ನೆಲ್ಲಾ ಯಾಕೆ ಟಿವಿಯಲ್ಲಿ ಪ್ರಸಾರ ಮಾಡಲ್ಲ ಬಿಗ್‌ಬಾಸ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸೌಂದರ್ಯಗೆ ಕನ್ನಡ ಸರಿಯಾಗಿ ಮಾತನಾಡಲು ಬರಲ್ಲ, ಮುಂಬೈನವಳು. ಗೋ ಬ್ಯಾಕ್ ಮುಂಬೈ, ಆಕೆಗೆ ಯಾರು ವೋಟ್ ಮಾಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದರು. ಆಕೆ ನಾಡಗೀತೆ ಹಾಗೂ ಕನಕದಾಸರ ಕೀರ್ತನೆ ಹಾಡಿರುವುದು ನೋಡಿ ಅಚ್ಚರಿಗೊಂಡಿದ್ದಾರೆ.