ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವ ಸಂಭ್ರಮ ಜೋರಾಗಿದೆ. ಬಿಗ್‌ಬಾಸ್ ಮನೆಯಲ್ಲಿ ಕೂಡ ಕನ್ನಡ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಸ್ಪರ್ಧಿಗಳೆಲ್ಲಾ ನಾಡಗೀತೆ ಹಾಡಿದ್ದಾರೆ. ಸ್ಪೀಕರ್‌ನಲ್ಲಿ ನಾಡಗೀತೆ ಹಾಕಿದ್ದರು. ಸ್ಪರ್ಧಿಗಳೆಲ್ಲಾ ಶ್ರದ್ಧೆಯಿಂದ ಗೌರವ ಸಲ್ಲಿಸಿದರು. ಬಹುತೇಕ ಎಲ್ಲರೂ ದನಿಗೂಡಿಸಿ ನಾಡಗೀತೆ ಹಾಡಿದ್ರು. ಆದರೆ ಕೆಲವರು ಹಾಡದೇ ಮೌನವಾಗಿ ಉಳಿದುಬಿಟ್ಟರು.
ಅರೇ, ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಕನ್ನಡ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವವರಿಗೆ ನಾಡಗೀತೆ ಹಾಡಲು ಬರಲ್ವಾ? ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ. ಸೌಂದರ್ಯ ಶೆಟ್ಟಿ ಅವರನ್ನು ನೋಡಿ ಕಲಿ ಎಂದು ಆಸಿಯಾ ಫಿರ್ದೋಸ್ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಆಕೆಯ ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ. ಆಸಿಯಾ ಮಾತ್ರವಲ್ಲ ಇನ್ನು ಕೆಲವರು ಹಾಡಿಲ್ಲ.
ಸ್ಪೀಕರ್‌ನಲ್ಲಿ ಹಾಡು ಹಾಕಿದ್ದಾರೆ. ನಾವು ಯಾಕೆ ಹಾಡಬೇಕು ಎಂದು ಬರೀ ಗೌರವ ಸೂಚಿಸಿರಬಹುದು. ಬಿಗ್‌ಬಾಸ್ ಮನೆಯಲ್ಲಿ ಹಾಡಲಿಲ್ಲ ಎನ್ನುವ ಮಾತ್ರಕ್ಕೆ ಅವರಿಗೆ ನಾಡಗೀತೆ ಗೊತ್ತಿಲ್ಲ ಅಂತ ಅಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಸರಿಯಾಗಿ ಗಮನಿಸಿದರೆ ಗಗನ್ ಹಾಗೂ ಸೋನಿಕಾ ಗೌಡ ಕೂಡ ನಾಡಗೀತೆ ಹಾಡುವ ವೇಳೆ ಮೌನವಾಗಿದ್ದರು. ಮುಂಬೈನಲ್ಲಿ ನೆಲೆಸಿದ್ರು ಸೌಂದರ್ಯ ಶೆಟ್ಟಿ ಅಷ್ಟು ಚೆನ್ನಾಗಿ ಹಾಡಿದ್ದಾರೆ. ಇಲ್ಲೇ ಇರುವವರಿಗೆ ಗೊತ್ತಿಲ್ಲ ಅಂದ್ರೆ ಹೇಗೆ ? ಎಂದು ಚರ್ಚೆ ನಡೀತಿದೆ.
ಬಿಗ್‌ಬಾಸ್ ಸೀಸನ್ 11ರ ವೇಳೆ ಗೌತಮಿ ಜಾಧವ್ ನಾಡಗೀತೆ ಹಾಡಲಿಲ್ಲ ಎಂದು ಚರ್ಚೆ ನಡೆದಿತ್ತು. ಅದಾಗಲೇ ಶೋನಿಂದ ಎಲಿಮಿನೇಟ್ ಆಗಿ ಹೊರಬಂದಿದ್ದ ಯಮುನಾ ಶ್ರೀನಿಧಿ ಈ ಬಗ್ಗೆ ಪ್ರಶ್ನೆ ಎತ್ತಿದ್ದರು. ಗೌತಮಿಗೆ ಕನ್ನಡ ಬರೆಯಲು ಓದಲು ಬರಲ್ಲ. 12 ವರ್ಷಗಳಿಂದ ಇಲ್ಲೇ ಇದ್ರು ಆಕೆ ಕನ್ನಡ ಕಲಿಯುವ ಪ್ರಯತ್ನ ಮಾಡಿಲ್ಲ. ನಾಡಗೀತೆ ಹಾಡುವುದಕ್ಕೂ ಬರದೇ ರಾಜ್ಯೋತ್ಸವದ ದಿನ ಸುಮ್ಮನಿದ್ರು ಎಂದು ಸಂದರ್ಶನವೊಂದರಲ್ಲಿ ಯಮುನಾ ಆರೋಪಿಸಿದ್ದರು.
ಬಿಗ್‌ಬಾಸ್ ಕನ್ನಡ ಸೀಸನ್ 13 ಸದ್ಯ 56 ದಿನ ಪೂರೈಸಿದೆ. ಕಳೆದ ವಾರ ಕುಮಾರಿ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ 20 ದಿನಗಳ ಹಿಂದೆ ಆಕೆ ಮನೆ ಒಳಗೆ ಹೋಗಿದ್ದರು. ಮೂರೇ ವಾರಕ್ಕೆ ಬಿಗ್‌ಬಾಸ್ ಜರ್ನಿ ಮುಗಿಸಿ ಹೊರ ಬಂದಿದ್ದಾರೆ. ಕಳೆದ ವಾರ ಮತ್ತೊಬ್ಬ ವೈಲ್ಡ್ ಕಾರ್ಡ್ ಸ್ಪರ್ಧಿ ಲಕ್ಷ್ಮಿಗೌಡ ಎಲಿಮಿನೇಟ್ ಆಗಿದ್ದರು. ಇವರಿಬ್ಬರು ಸ್ಪರ್ಧಿಗಳಾಗಿ ಮನೆ ಒಳಗೆ ಹೋಗಲಿಲ್ಲ, ಬರೀ ಅತಿಥಿಗಳಾಗಿ ಮಾತ್ರ ಹೋಗಿದ್ದರು ಎನ್ನಲಾಗ್ತಿದೆ.
Wait, Masal Dose fans will come up with new conspiracy theory, something like 👇🏻
— ಅಲ್ಪಸಂಖ್ಯಾತ (@alpasankhyata) November 2, 2026
"Soundarya Shetty is using teleprompter"#BBK13 pic.twitter.com/atEXwmONvx