ವೀಕೆಂಡ್ ಬಿಗ್‌ಬಾಸ್ ಮನೆಯಲ್ಲಿ ಮತ್ತೊಂದು ಎಲಿಮಿನೇಟ್ ಆಗಿದೆ. ವೀಕ್ಷಕರ ಒತ್ತಾಯದಂತೆ ಮಾಡ್ರನ್ ಮಹಾಕವಿ ಮಂಜ ಮನೆಯಿಂದ ಹೊರ ಬಂದಿದ್ದಾರೆ. ಹೊಸ ಪ್ರೋಮೊದಲ್ಲಿ ಕೂಡ ಅದನ್ನು ನೋಡಬಹುದು. ಒಳ್ಳೆ ಕೆಲಸ ಮಾಡಿದ್ರಿ ಎಂದು ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ.
ಮಂಜ ಬಾಯಿಗೆ ಬಂದಂತೆ ಮಾತನಾಡಿ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದ್ದರು. ಶನಿವಾರ ಪಂಚಾಯ್ತಿಯಲ್ಲಿ ಆತನ ತಪ್ಪು ಅರಿವಾಗುವಂತೆ ಸುದೀಪ್ ಮಾಡಿದ್ದರು. ಮಂಜನ ನಡೆ ಬಗ್ಗೆ ಆತನ ತಾಯಿ ಮಾತನಾಡಿದ್ದ ಆಡಿಯೋವನ್ನು ಕೇಳಿಸಲಾಗಿತ್ತು. ಆಗ ಪಶ್ಚಾತ್ತಾಪದಿಂದ ಕನ್ಫೆಷನ್ ರೂಮಿನಲ್ಲಿ ಮಂಜ ಬಿಕ್ಕಿ ಬಿಕ್ಕಿ ಅತ್ತಿದ್ದರು. ಆದರೆ ಭಾನುವಾರ ಬೆಳ್ಳಂಬೆಳಗ್ಗೆ ಮಂಜನಿಗೆ ಬಿಗ್‌ಬಾಸ್ ಶಾಕ್ ಕೊಟ್ಟಿದ್ದಾರೆ. ನಿಮಯ ಮೀರಿದ್ದಕ್ಕೆ ನಿಮ್ಮನ್ನು ಹೊರಗೆ ಕಳುಹಿಸುತ್ತಿದ್ದೇವೆ ಎಂದಿದ್ದಾರೆ.
ಬಿಗ್‌ಬಾಸ್ ಮಾತು ಕೇಳಿ ಮನೆ ಒಳಗೆ ಇರುವ ಕೆಲವರಿಗೆ ಅಚ್ಚರಿ ಎನಿಸಿದರೆ ಮತ್ತೆ ಕೆಲವರು ಸಂತಸ ವ್ಯಕ್ತಪಡಿಸಿದ್ದಾರೆ. "ಮಂಜುನಾಥ್ ಈ ಮನೆಗೆ ಅದರದ್ದೇ ಆದ ನಿಮಯಗಳಿವೆ. ಹಲವು ಬಾರಿ ಎಚ್ಚರಿಕೆ ನೀಡಿದ ನಂತರ ಕೂಡ ಅಸಭ್ಯ ಮಾತುಗಳಿಂದ ಮನೆಯ ಸದಸ್ಯರ ವ್ಯಕ್ತಿತ್ವದ ಬಗ್ಗೆ ನಿಂದಿಸಿದ್ದೀರಿ.. ಇದನ್ನು ಬಿಗ್‌ಬಾಸ್ ಸಹಿಸಲ್ಲ.. ಮನೆಯ ನಿಯಮ ಮೀರಿದ್ದಕ್ಕೆ ನಿಮ್ಮನ್ನು ಹೊರಗೆ ಕಳುಹಿಸುತ್ತೀದ್ದೀವಿ" ಎಂದು ಬಿಗ್‌ಬಾಸ್ ಘೋಷಿಸಿದ್ದಾರೆ.
ನ್ಯಾಯಕ್ಕೆ ಗೆಲುವಾಯ್ತು ಎಂದು ಯಶಸ್ ಸಂಭ್ರಮಿಸಿದ್ದಾರೆ.. ಮಂಜು ಕೆಲವರನ್ನು ಹಗ್ ಮಾಡಿ ಮನೆಯಿಂದ ಹೊರ ಬಂದಿರುವ ಪ್ರೋಮೊ ವೈರಲ್ ಆಗ್ತಿದೆ. ಇದೇ ಖುಷಿಗೆ ಸ್ವೀಟ್ ತಿನ್ನೋಣ ಎಂದು ಯಶಸ್ ಹೇಳಿರುವುದನ್ನು ನೋಡಬಹುದು.
Super Sunday With ಬಾದ್ಷಾ ಸುದೀಪ | ಇಂದು ರಾತ್ರಿ 9
— Colors Kannada (@ColorsKannada) October 11, 2026
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ - https://t.co/96hibtGUwq #BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo pic.twitter.com/EAwH9KyO9J