ಈ ಬಾರಿ ಬಿಗ್‌ಬಾಸ್ ಮನೆಗೆ ನಾಲ್ವರು ಕಾಮನ್‌ಮ್ಯಾನ್‌ಗಳು ಸ್ಪರ್ಧಿಗಳಾಗಿ ಹೋಗಿದ್ದಾರೆ. ಸಾವಿರಾರು ಜನ ಆಡಿಷನ್ ಕೊಟ್ಟು ಅಂತಿಮವಾಗಿ ನಾಲ್ವರು ದೊಡ್ಮನೆ ಆಟಕ್ಕೆ ಆಯ್ಕೆ ಆಗಿದ್ದರು. ಅದರಲ್ಲಿ ಲಿಖಿತ್ ಗೋಂದಿ ಕೂಡ ಒಬ್ಬರು. 11ನೇ ಸ್ಪರ್ಧಿಯಾಗಿ ಮನೆ ಒಳಗೆ ಹೋಗಿದ್ದ ಅವರು ಕೋಪದ ಕೈಗೆ ಬುದ್ದಿ ಕೊಟ್ಟು ನಾಲ್ಕು ವಾರಕ್ಕೆ ಬಿಗ್‌ಬಾಸ್ ಜರ್ನಿ ಮುಗಿಸಿದ್ದರು. ಸದ್ಯ ಲಿಖಿತ್ ತಂದೆ ರಾಜೀವ್ ಗೋಂದಿ ನೀಡಿರುವ ಅದೊಂದು ಹೇಳಿಕೆ ವೈರಲ್ ಆಗ್ತಿದೆ.
ಲಿಖಿತ್ ಬಿಗ್‌ಬಾಸ್ ಜರ್ನಿ ಬಗ್ಗೆ ಇತ್ತೀಚೆಗೆ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ಈ ವೇಳೆ ಅವರ ಫ್ಯಾಮಿಲಿ ಕೂಡ ಜೊತೆಗಿತ್ತು. ಮಗನ ಬಿಗ್‌ಬಾಸ್ ಜರ್ನಿ ಬಗ್ಗೆ ತಂದೆ ರಾಜೀವ್ ಗೋಂದಿ ಕೂಡ ಮಾತನಾಡಿದ್ದಾರೆ. ಈ ವೇಳೆ "ಬಿಗ್‌ಬಾಸ್ ಮನೆಯಲ್ಲಿ ಒಳ್ಳೆ ಫಿಗರ್‌ಗಳೇ ಇಲ್ಲ" ಎಂದು ಅವರು ಹೇಳಿರುವುದು ಭಾರೀ ಚರ್ಚೆ ಹುಟ್ಟಾಕ್ಕಿದೆ. ಹೆಣ್ಣುಮಕ್ಕಳ ಬಗ್ಗೆ ಹೀಗಾ ಮಾತಾಡೋದು ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಳ್ತಿದ್ದಾರೆ.
ಅಗ್ನಿ ಪರೀಕ್ಷೆಯಲ್ಲಿ ಕೂಡ ಒಳ್ಳೆ ಒಳ್ಳೆ ಫಿಗರ್‌ಗಳಿದ್ರು. ಆದ್ರೆ ಈಗ ಬಿಗ್‌ಬಾಸ್ ಮನೆಯಲ್ಲಿ ಯಾರು ಇಲ್ಲ ಎಂದು ರಾಜೀವ್ ಗೋಂದಿ ಹೇಳಿದ್ದಾರೆ. 'ಅಶ್ವವೇಗ' ನ್ಯೂಸ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ನಿಮ್ಮ ಮಗ ಬಿಗ್‌ಬಾಸ್ ಮನೆಯಲ್ಲಿ ಯಾರಾದ್ರು ಹುಡುಗಿನ ನೋಡ್ಕೊಂಡು ಲವ್ ಮಾಡಿದ್ರೆ ಓಕೆನಾ ನಿಮ್ಗೆ ಎನ್ನುವ ಪ್ರಶ್ನೆಗೆ "ಅವನಿಗೆ ಸೆಟ್ ಆಗುವಂತೆ ಹುಡುಗಿ ಯಾರಿದ್ರು ಹೇಳಿ ಅಲ್ಲಿ.. ಅಗ್ನಿಪರೀಕ್ಷೆಯಲ್ಲಿ ಒಳ್ಳೆ ಒಳ್ಳೆ ಫಿಗರ್‌ಗಳಿದ್ರು.. ಫಿಗರ್ ಅಂದ್ರೆ ಸುರಸುಂದರಾಂಗಿಯರು.. ನನಗೆ ಯಾರು ಲೈಕ್ ಆಗ್ಲಿಲ್ಲ.. ಅಗ್ನಿಪರೀಕ್ಷೆಯಲ್ಲಿ ಲಕ್ಷ್ಮಿ ಗೌಡ, ಡಾ. ಸಹನಾ, ಯಕ್ಷಾ ಶೆಟ್ಟಿ, ಸ್ನೇಹಾ ಗೌಡ ಎಲ್ಲಾ ಎಂತಹ ಫಿಗರ್ ಆಗಿದ್ರು.. ಇಂತಹವರು ಮನೆಯಲ್ಲಿ ಇದ್ದಾರಾ?" ಎಂದು ರಾಜೀವ್ ಗೋಂದಿ ಕೇಳಿದ್ದಾರೆ.
ಸದ್ಯ ರಾಜೀವ್ ಗೋಂದಿ ಹೇಳಿಕೆ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ಸ್ವಲ್ಪಾನು ಸೆನ್ಸ್ ಇಲ್ಲ. . ಏನ್ ಮಾತಾಡ್ತಾ ಇದ್ದಾರೆ.." ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಹೆಣ್ಣುಮಕ್ಕಳಿಗೆ ಮರ್ಯಾದೆ ಕೊಡಿ ಎಂದು ಮತ್ತೊಬ್ಬರು ಹೇಳಿದ್ದಾರೆ. ಲಿಖಿತ್ ಜೊತೆ ತಂದೆ ರಾಜೀವ್ ಗೋಂದಿ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಕಾಮಿಡಿ ವೀಡಿಯೋಗಳನ್ನು ಮಾಡ್ತಾ ಗಮನ ಸೆಳೆಯುತ್ತಾ ಬಂದಿದ್ದಾರೆ. ರಾಜು ಅಂಕಲ್ ಅಂತ್ಲೇ ಅವರು ಜನಪ್ರಿಯರಾಗಿದ್ದಾರೆ. ಬಿಗ್‌ಬಾಸ್ ಅಗ್ನಿಪರೀಕ್ಷೆ ವೇದಿಕೆಗೂ ಮಗನ ಜೊತೆ ಸ್ಪರ್ಧಿ ಆಗಿ ರಾಜೀವ್ ಗೋಂದಿ ಹೋಗಿದ್ದರು.
Unfiltere likhith father 😂#BBK13 pic.twitter.com/jGtp7EYCFA
— FREAKY ⚡ (@ROCKY_269) October 7, 2026