ಹಿಂದಿನ ಎಲ್ಲಾ ಸೀಸನ್‌ಗಳಿಗಿಂತ ಈ ಬಾರಿ ಬಿಗ್‌ಬಾಸ್ ಕನ್ನಡ ಸೀಸನ್ 13 ಕುತೂಹಲ ಮೂಡಿಸಿದೆ. ಸಾಕಷ್ಟು ಬದಲಾವಣೆಗಳು ಜೊತೆ ಸಾಗ್ತಿದೆ. 12 ಸೀಸನ್‌ಗಳಿಗೆ ಹೋಲಿಸಿದರೆ ಈ ಸೀಸನ್ ಅಷ್ಟೇನು ಮಜಾ ಕೊಡ್ತಿಲ್ಲ. ಸ್ಪರ್ಧಿಗಳ ಆಯ್ಕೆ ಸರಿಯಾಗಿಲ್ಲ ಎನ್ನುವುದು ಕೆಲವರ ವಾದ. ಇದೆಲ್ಲದರ ನಡುವೆ ಮನೆ ಒಳಗೆ ಮತ್ತೊಬ್ಬರು ಎಂಟ್ರಿ ಆಗಿದ್ದಾರೆ.
ಬಿಗ್‌ಬಾಸ್ ಮನೆಗೆ ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಅಗ್ನಿ ಪರೀಕ್ಷೆಯಲ್ಲಿ ಅಂತಿಮ ಹಂತದವರೆಗೂ ಹೋಗಿದ್ದ ಕುಮಾರಿ ಈಗ ಮನೆ ಒಳಗೆ ಹೋಗುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ವೀಕೆಂಡ್ ಪಂಚಾಯ್ತಿ ವೇಳೆ ಸುದೀಪ್ ಆಕೆಯನ್ನು ವೇದಿಕೆಗೆ ಕರೆಸಿ ಮನೆ ಒಳಗೆ ಕಳುಹಿಸಿದ್ದಾರೆ. ಬೆಳಗ್ಗೆ ಮೊದಲ ಪ್ರೋಮೊದಲ್ಲಿ ಮಂಜು ಎಲಿಮಿನೇಟ್ ವಿಚಾರ ಬಯಲಾಗಿತ್ತು. ಹೊಸ ಪ್ರೋಮೊದಲ್ಲಿ ಕುಮಾರಿ ಎಂಟ್ರಿ ಕೂಡ ಅಧಿಕೃತವಾಗಿದೆ.
ಈ ಬಾರಿ ಜನ ಸಾಮಾನ್ಯರನ್ನು ಸ್ಪರ್ಧಿಗಳಾಗಿ ಬಿಗ್‌ಬಾಸ್ ಮನೆ ಒಳಗೆ ಕಳುಹಿಸಲು ಅಗ್ನಿಪರೀಕ್ಷೆ ನಡೆಸಲಾಗಿತ್ತು. ಸಾಕಷ್ಟು ಜನ ಅದಕ್ಕಾಗಿ ಅರ್ಜಿ ಹಾಕಿ ಆಡಿಷನ್‌ನಲ್ಲಿ ಭಾಗಿ ಆಗಿದ್ದರು. "ನಾನು ಹಳ್ಳಿ ಹುಡುಗಿ ಕುಮಾರಿ" ಎಂದು ಹೇಳಿಕೊಂಡು ಅಗ್ನಿಪರೀಕ್ಷೆಯಲ್ಲಿ ಲಾವಣ್ಯ ಕುಮಾರಿ ಗಮನ ಸೆಳೆದಿದ್ದರು. ಅನಾರೋಗ್ಯದ ಕಾರಣ ಆಕೆಯನ್ನು ಬಿಗ್‌ಬಾಸ್ ಮನೆ ಒಳಗೆ ಕಳುಹಿಸದಿರಲು ನಿರ್ಧರಿಸಲಾಗಿತ್ತು. ಆದರೂ ₹5 ಲಕ್ಷ ನಗದು ನೆರವು ಆಕೆಗೆ ಸಿಕ್ಕಿತ್ತು.
ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕುಮಾರಿ ಬಿಗ್‌ಬಾಸ್ ಮನೆ ಪ್ರವೇಶಿಸಬಹುದು ಎಂದು ಕೆಲವರು ಊಹಿಸಿದ್ದರು. ಅದು ಈಗ ನಿಜವಾಗಿದೆ. ಬರೀ ಕಿರುಚಾಡುವವರು, ಕೆಟ್ಟ ಕೆಟ್ಟ ಅಶ್ಲೀಲ ಪದಗಳನ್ನು ಬಳಸುವವರ ನಡುವೆ ಮುಗ್ಧ ಹಳ್ಳಿ ಹುಡುಗಿ ಲಾವಣ್ಯ ಕುಮಾರಿ ಎಂಟ್ರಿ ಆಗಿದೆ. "ನವರಾತ್ರಿಗೆ ಮನೆಗೊಂದು ಇನೋಸೆಂಟ್ ಉಡುಗೊರೆ" ಎಂದು ಕ್ಯಾಪ್ಷನ್ ಕೊಟ್ಟು ಪ್ರೋಮೊ ಬಿಡುಗಡೆ ಮಾಡಿದ್ದಾರೆ.
ನವರಾತ್ರಿಗೆ ಮನೆಗೊಂದು innocent ಉಡುಗೊರೆ!
— Colors Kannada (@ColorsKannada) October 11, 2026
Super Sunday With ಬಾದ್ಷಾ ಸುದೀಪ | ಇಂದು ರಾತ್ರಿ 9
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ - https://t.co/96hibtGUwq#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo pic.twitter.com/phuxQsOLqQ