ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಮಹಾಕವಿ' ಸಿನಿಮಾ ದೇಶಾದ್ಯಂತ ಸದ್ದು ಮಾಡ್ತಿದೆ. ಆದಿಕವಿ ಪಂಪನ ಜೀವನ ಹಾಗೂ ಕಾವ್ಯಗಳ ಆಶಯಗಳನ್ನು ಆಧರಿಸಿ ನಿರ್ಮಾಣವಾಗಿರುವ ಸಿನಿಮಾ ಇದು. ಇದೀಗ 'ಮಹಾಕವಿ' ಸಿನಿಮಾ ಜಾರ್ಖಂಡ್ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ. ಅಕ್ಟೋಬರ್ ಕೊನೆಯವಾರದಲ್ಲಿ ನಡೆಯುವ ಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನವಾಗಲಿದೆ.

ಬೆಳಗಾವಿಯ ಪ್ರಭು ಯತ್ನಟ್ಟಿಯವರು ತಮ್ಮ ಪಿ.ಆರ್ ಅಸೋಸಿಯೇಟ್ಸ್ ಸಂಸ್ಥೆಯಿಂದ 'ಮಹಾಕವಿ' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪಂಪಕವಿಯ 'ಆದಿಪುರಾಣಂ' ಮತ್ತು 'ವಿಕ್ರಮಾರ್ಜುನ ವಿಜಯಂ' ಎಂಬ ಎರಡು ಕಾವ್ಯಗಳಲ್ಲಿರುವ ಮತ್ತು ಸಮಕಾಲೀನ ಪ್ರಸ್ತುತತೆಯನ್ನು ಹೊಂದಿರುವ ಸನ್ನಿವೇಶಗಳನ್ನು ಚಿತ್ರದಲ್ಲಿದೆ. ಜಾತಿ ತಾರತಮ್ಯ ವಿರೋಧಿ ಮತ್ತು ಯುದ್ಧವಿರೋಧಿ ನಿಲುವಿನ ಜೊತೆಗೆ ಸೃಜನಶೀಲ ಸ್ವಾತಂತ್ರ್ಯದ ಸಮಸ್ಯೆ ತೆರೆಗೆ ತರಲಾಗಿದೆ.

ಚಿತ್ರಕ್ಕೆ ಬರಗೂರು ರಾಮಚಂದ್ರಪ್ಪ ಸ್ವತಃ ಚಿತ್ರಕತೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಬಹುಭಾಷಾಕಲಾವಿದ ಕಿಶೋರ್, ಅನುಷಾರೈ, ಸುಂದರರಾಜ್ ಕುಮಾರ್‍ಗೋವಿಂದ್, ಪ್ರಮೀಳಾಜೋಷಾಯ್, ಅಕಾಂಕ್ಷ್‍ಬರಗೂರ್, ಅರಸು, ದಳವಾಯಿ, ಶಾಂತರಾಜು ಚಿತ್ರದ ತಾರಾಗಣದಲ್ಲಿದ್ದಾರೆ. ಸುರೇಶ್ ಅರಸು ಸಂಕಲನ, ನಾಗರಾಜ್ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಈಗಾಗಲೇ 'ಮಹಾಕವಿ' ಸಿನಿಮಾ ಬಿಡುಗಡೆಯಾಗಿದೆ. ಇದೀಗ ಚಿತ್ರೋತ್ಸವಗಳಲ್ಲಿ ದರ್ಬಾರ್ ನಡೆಸಲು ಮುಂದಾಗಿದೆ.