ಶಿವರಾಜ್‌ಕುಮಾರ್ ನಟನೆಯ 'ಬೇಲ್' ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣ್ತಿದೆ. ಪವನ್ ಒಡೆಯರ್ ನಿರ್ದೇಶನ, ಶಿವಣ್ಣ ಪರ್ಫಾರ್ಮನ್ಸ್, ಅಜನೀಶ್ ಮ್ಯೂಸಿಕ್ ಎಲ್ಲಾ ಸೇರಿ ಸಿನಿಮಾ ಒಳ್ಳೆ ಅಂಕ ಗಿಟ್ಟಿಸಿಕೊಂಡಿದೆ. ಬಿಡುಗಡೆಗೂ ಮುನ್ನ ದೊಡ್ಡದಾಗಿ ಸದ್ದು ಮಾಡದೇ ಇದ್ದರೂ ಇದೀಗ ಚಿತ್ರಮಂದಿರಗಳಲ್ಲಿ ದರ್ಬಾರ್ ನಡೆಸ್ತಿದೆ.

ಸಣ್ಣಪುಟ್ಟ ತಪ್ಪುಗಳ ಹೊರತಾಗಿ ಸಿನಿಮಾ ಪ್ರೇಕ್ಷಕರನ್ನು ರಂಜಿಸ್ತಿದೆ. ಮುಂದೆ ಬಾಕ್ಸಾಫೀಸ್ ಸದ್ದು ಮಾಡುವ ಸುಳಿವು ಸಿಕ್ತಿದೆ. ಈಗಾಗಲೇ 'ಬೇಲ್' ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಚಿತ್ರಮಂದಿರದಲ್ಲೇ ನೋಡಿ

ಆಕ್ಷನ್ ಭರಿತ ಅದ್ಭುತ ಕೌಟುಂಬಿಕ ಮನರಂಜನಾ ಚಿತ್ರ. 'ಹ್ಯಾಟ್ರಿಕ್ ಹೀರೋ' ಶಿವಣ್ಣ ಈಸ್ ಬ್ಯಾಕ್.. ಅದ್ಭುತ ಫಸ್ಟ್‌ ಹಾಫ್ ಹಾಗೂ ಒಳ್ಳೆ ಸೆಕೆಂಡ್ ಹಾಫ್.. ಅಜನೀಶ್ ಬಿ. ಲೋಕನಾಥ್ ಸಂಗೀತ ಚಿಂದಿ.. ಸೆಕೆಂಡ್ ಹಾಫ್‌ನಲ್ಲಿ ಯೋಗಿ ಅಬ್ಬರ ಜೋರಾಗಿದೆ. ಪವನ್ ಒಡೆಯರ್ ನಿರ್ದೇಶನದಲ್ಲಿ ಪರಿಪೂರ್ಣ ಕೌಟುಂಬಿಕ ಮನರಂಜನಾ ಚಿತ್ರ .. ಚಿತ್ರಮಂದಿರದಲ್ಲಿಯೇ ನೋಡಲೇಬೇಕಾದ ಸಿನಿಮಾ ಎಂದು ಕೇಶವ ಎಂಬುವವರು ಟ್ವೀಟ್ ಮಾಡಿದ್ದಾರೆ.

ಓಕೆ ಓಕೆ ಸಿನಿಮಾ

ಒಳ್ಳೆ ಕಾನ್ಸೆಪ್ಟ್ ಹಾಗೂ ಸ್ಟೋರಿ.. ಆದರೆ ಮನರಂಜನಾತ್ಮಕ, ಆಕರ್ಷಕ ಮತ್ತು ರೋಚಕವಾದ ಚಿತ್ರಕಥೆಯನ್ನು ನೀಡುವಲ್ಲಿ ವಿಫಲವಾಗಿದೆ.. ಓಕೆ ಓಕೆ ಸಿನಿಮಾ ಎನ್ನುವುದು ಮತ್ತೊಬ್ಬರ ಅಭಿಪ್ರಾಯ.

ಮಾಸ್, ಎಮೋಷನ್ ಪ್ಯಾಕೇಜ್

ಹೊಸ ಅವತಾರದಲ್ಲಿ ಶಿವಣ್ಣ.. ಆಕರ್ಷಕ ನಿರೂಪಣೆ, ಮಾಸ್ ದೃಶ್ಯಗಳು, ಪವರ್‌ಫುಲ್ ಹಿನ್ನೆಲೆ ಸಂಗೀತದ ಫಸ್ಟ್‌ಹಾಫ್ ಅದ್ಭುತವಾಗಿದೆ. ಇಂಟರ್‌ವಲ್ ಚೆನ್ನಾಗಿದೆ. ಸೆಕೆಂಡ್ ಹಾಫ್ ಭಾವನಾತ್ಮಕ ಕೌಟುಂಬಿಕ ಕ್ಷಣಗಳು, ಆಕ್ಷನ್ ಮತ್ತು ತೃಪ್ತಿಕರವಾದ ಕ್ಲೈಮ್ಯಾಕ್ಸ್.. ಒಟ್ಟಾರೆಯಾಗಿ ಜಬರ್ದಸ್ತ್ ಮಾಸ್ + ಎಮೋಷನ್ ಪ್ಯಾಕೇಜ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಶಿವಣ್ಣ ಸೂಪರ್

'ಬೇಲ್' ಬರೀ ನಾಯಕನ ಅಬ್ಬರದ ದೃಶ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಚಿತ್ರಕಥೆ, ಭಾವನಾತ್ಮಕ ಆಯಾಮಗಳು ಮತ್ತು ಸಂಘರ್ಷಗಳು ಈ ಚಿತ್ರದ ಬಗ್ಗೆ ಚರ್ಚಿಸಲು ಹೆಚ್ಚಿನ ವಿಷಯಗಳನ್ನು ಒದಗಿಸುತ್ತವೆ.. ಶಿವಣ್ಣ ತಮ್ಮದೇ ಆದ ಶೈಲಿಯಲ್ಲಿ ಮಿಂಚಿದ್ದಾರೆ. ತೆರೆಮೇಲೆ ಅವ್ರ ಸ್ಕ್ರೀನ್‌ ಪ್ರಸೆನ್ಸ್‌ ಸಿಂಪಲ್ ಅನ್ನಿಸಿದರೂ ಆಕರ್ಷಕವಾಗಿದೆ ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.

ಸೆಕೆಂಡ್ ಹಾಫ್ ಚಿಂದಿ

'ಬೇಲ್' ಖಂಡಿತವಾಗಿಯೂ ರೋಚಕ ಅನುಭವವನ್ನು ನೀಡುವ ಚಿತ್ರ. ಚಿತ್ರದ ಫಸ್ಟ್ ಹಾಫ್ ಪರವಾಗಿಲ್ಲ ಎನಿಸಿದರೂ, ಸೆಕೆಂಡ್ ಹಾಫ್ ಸಿನಿಮಾ ಭರ್ಜರಿ ವೇಗವನ್ನು ಪಡೆದುಕೊಳ್ಳುತ್ತದೆ. ವಿಜಯ್, ಅಲಿ ಮತ್ತು ರಾಬರ್ಟ್ ಈ ಚಿತ್ರದ ಪ್ರಮುಖ ಆಧಾರಸ್ತಂಭಗಳಾಗಿದ್ದು, ಅದ್ಭುತ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಚಿತ್ರಕ್ಕೆ ಹೆಚ್ಚಿನ ಬಲ ತುಂಬಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಇದರಲ್ಲಿ ಶಿವಣ್ಣ ಅವರನ್ನು ಸಂಪೂರ್ಣ ವಿಭಿನ್ನವಾದ ಅವತಾರದಲ್ಲಿ ಕಾಣಬಹುದು ಎಂದು ಮಗದೊಬ್ಬರು ಬರೆದುಕೊಂಡಿದ್ದಾರೆ.