ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡದ ಒಡತಿ ಕಾವ್ಯಾ ಮಾರನ್ ಮದುವೆ ನೆರವೇರಿದೆ. ದೂರದ ಗ್ರೀಸ್‌ನಲ್ಲಿ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದೆ. ತಮ್ಮ ಮದುವೆ ಫೋಟೊಗಳನ್ನು ಜೋಡಿ ಹಂಚಿಕೊಂಡಿದೆ. ಅಭಿಮಾನಿಗಳು, ಆಪ್ತರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.

ರಜನಿಕಾಂತ್ ಸೇರಿ ಸಾಕಷ್ಟು ಗಣ್ಯರು ಅನಿ-ಕಾವ್ಯಾ ಮದುವೆ ಸಂಭ್ರಮಕ್ಕೆ ಸಾಕ್ಷಿ ಆಗಿದ್ದರು. ಸನ್ ಗ್ರೂಪ್ ಮುಖ್ಯಸ್ಥ ಕಲಾನಿಧಿ ಮಾರನ್ ಪುತ್ರಿ ಕಾವ್ಯಾ ಮಾರನ್, ಅದೇ ರೀತಿ ರಜನಿಕಾಂತ್ ಸೋದರ ಸಂಬಂಧಿ ಅನಿರುದ್ಧ್. ಕೆಲ ತಿಂಗಳಿಂದ ಇಬ್ಬರ ಮದುವೆ ಬಗ್ಗೆ ಊಹಾಪೋಹ ಶುರುವಾಗಿತ್ತು. ಅಂತಿಮವಾಗಿ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದೆ. ನವೆಂಬರ್ 21ರಂದು ಚೆನ್ನೈನಲ್ಲಿ ಅದ್ಧೂರಿ ರಿಸೆಪ್ಷನ್ ಪಾರ್ಟಿ ಆಯೋಜಿಸಲಾಗಿದೆ. ಪ್ರಧಾನಿ ಮೋದಿ, ಕರ್ನಾಟಕ ಸಿಎಂ ಡಿಕೆ ಶಿವಕುಮಾರ್ ಸೇರಿ ಸಾಕಷ್ಟು ಗಣ್ಯರಿಗೆ ಆಮಂತ್ರಣ ಸಿಕ್ಕಿದೆ. ಆದರೆ ಕೆಲವೇ ಆಪ್ತರ ನಡುವೆ ಗ್ರೀಸ್‌ನಲ್ಲಿ ಮದುವೆ ನೆರವೇರಿದೆ.

ಪಂಚೆ, ಕುರ್ತಾ, ಮೇಲೊಂಡು ಜಾಕೆಟ್ ಧರಿಸಿ ಮದುವೆ ಮಂಟಪದಲ್ಲಿ ಅನಿರುದ್ಧ್ ಮಿಂಚಿದ್ದಾರೆ. ತಿಳಿ ಗುಲಾಬಿ ಬಣ್ಣದ ಡಿಸೈನರ್ ಲೆಹಂಗಾ ತೊಟ್ಟು ಮದುಮಗಳು ಕಾವ್ಯಾ ಕಂಗೊಳಿಸಿದ್ದಾರೆ. "ಜೀವಮಾನಕ್ಕೊಮ್ಮೆ ಸಿಗುವ, ಜೀವಮಾನವಿಡೀ ಜೊತೆಗಿರುವವರು 11.11" ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ಅನಿರುದ್ಧ್ ಮದುವೆ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ನವೆಂಬರ್ 21ರಂದು ಚೆನ್ನೈನಲ್ಲಿ ನಡೆಯುವ ಅನಿರುದ್ಧ್- ಕಾವ್ಯಾ ಜೋಡಿ ರಿಸೆಪ್ಷನ್ ಪಾರ್ಟಿಗೆ ರಜನಿಕಾಂತ್, ಎ.ಆರ್. ರೆಹಮಾನ್, ಕಮಲ್ ಹಾಸನ್, ಧನುಷ್, ಅಜಿತ್ ಹಾಗೂ ಅವರ ಪತ್ನಿ ಶಾಲಿನಿ, ತಮಿಳುನಾಡು ಸಿಎಂ ವಿಜಯ್ ಸೇರಿದಂತೆ ಸಾಕಷ್ಟು ಗಣ್ಯರು ಹಾಜರಾಗಲಿದ್ದಾರೆ.

ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿ ಅನಿರುದ್ಧ್ ರವಿಚಂದರ್ ಗೆದ್ದಿದ್ದಾರೆ. ಇತ್ತೀಚೆಗೆ ಬಂದ 'ಜೈಲರ್- 2' ಚಿತ್ರಕ್ಕೂ ಅನಿ ಟ್ಯೂನ್ ಹಾಕಿದ್ದರು. ಮುಂದೆ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳು ಅವರ ಕೈಯಲ್ಲಿವೆ. ಬಾಲಿವುಡ್ ಸಿನಿಮಾಗಳಿಗೂ ಟ್ಯೂನ್ ಹಾಕುತ್ತಿದ್ದಾರೆ. ಮತ್ತೊಂದು ಕಡೆ ಉದ್ಯಮ ಕ್ಷೇತ್ರದಲ್ಲಿ ಕಾವ್ಯಾ ಮಾರನ್ ತೊಡಗಿಸಿದ್ದಾರೆ ತಂದೆ ದೊಡ್ಡ ಉದ್ಯಮ ಸಾಮ್ರಾಜ್ಯದಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.