ರಾಕ್‌ಸ್ಟರ್ ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯಾ ಮಾರನ್ ಮದುವೆ ಅದ್ಧೂರಿಯಾಗಿ ನೆರವೇರಿದೆ. ಗ್ರೀಸ್‌ನಲ್ಲಿ ಜೋಡಿ ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್ ಮಾಡಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಕೆಲ ಆಪ್ತರು ಈ ಸಂಭ್ರಮದಲ್ಲಿ ಭಾಗಿ ಆಗಿದ್ದರು. ತಮಿಳುನಾಡು ಮಾಜಿ ಸಿಎಂ ಎಂ. ಕೆ ಸ್ಟಾಲಿನ್ ಕೂಡ ಅತಿಥಿಗಳ ಪಟ್ಟಿಯಲ್ಲಿದ್ದರು.

ಈಗಾಗಲೇ ಅನಿ- ಕಾವ್ಯಾ ಮದುವೆ ಫೋಟೊಗಳು ವೈರಲ್ ಆಗ್ತಿದೆ. ಸಿಕ್ಕಾಪಟ್ಟೆ ಅದ್ಧೂರಿಯಾಗಿ ಮದುವೆ ಆಗಿರುವುದು ಗೊತ್ತಾಗ್ತಿದೆ. ಗ್ರೀಸ್ ದೇಶದ ಏಥೆನ್ಸ್‌ನಲ್ಲಿರುವ ಫೋರ್ ಸೀಸನ್ಸ್ ಆಸ್ಟಿರ್ ಪ್ಯಾಲೇಸ್ ಹೋಟೆಲ್‌ನಲ್ಲಿ ಎರಡು ದಿನಗಳ ಕಾಲ ಮದುವೆ ಸಂಭ್ರಮ ಮನೆ ಮಾಡಿತ್ತು. ಇದಕ್ಕಾಗಿ ಕೋಟಿ ಕೋಟಿ ಖರ್ಚಾಗಿದೆ. ಚೆನ್ನೈನಿಂದ ನಾಲ್ಕು ಪ್ರೈವೇಟ್ ಜೆಟ್‌ಗಳಲ್ಲಿ ಅತಿಥಿಗಳನ್ನು ಗ್ರೀಸ್ ದೇಶಕ್ಕೆ ಕರೆದೊಯ್ಯಲಾಗಿತ್ತು.

ಗ್ರೀಸ್ ಪ್ರಪಂಚದ ಅತ್ಯುತ್ತಮ ವೆಡ್ಡಿಂಗ್ ಡೆಸ್ಟಿನೇಷನ್‌ಗಳಲ್ಲಿ ಒಂದಾಗಿದೆ. ಭಾರತದ ಕೆಲ ತಾರೆಯರು, ಶ್ರೀಮಂತರು ಕೂಡ ಗ್ರೀಸ್ ದೇಶದಲ್ಲಿ ಮದುವೆ ಆಗಿದ್ದಾರೆ. ಮಾರನ್ ಕುಟುಂಬ ಬಗಳ ಮದುವೆಗೆ ಇದೇ ಜಾಗವನ್ನು ಆಯ್ಕೆ ಮಾಡಿಕೊಂಡಿತ್ತು. ಅತಿಥಿಗಳಿಗೆ ಐಷಾರಾಮಿ ವಸತಿ ಮತ್ತು ಸ್ಥಳೀಯ ಸಾರಿಗೆಯನ್ನು ವ್ಯವಸ್ಥೆ ಇತ್ತು. ಮದುವೆ ಅಂದ್ಮೇಲೆ ಊಟ ವಿಶೇಷವಾಗಿಯೇ ಇರಬೇಕಲ್ಲ, ಇನ್ನು ಗ್ರೀಸ್ ದೇಶದ ಊಟೋಪಚಾರದ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ. ಗ್ರೀಕ್ ಪಾಕಪದ್ಧತಿಯ ಸಸ್ಯಾಹಾರಿ ಭೋಜನ ಸಿದ್ಧವಾಗಿತ್ತು. ಆಹಾರ ಪ್ರಿಯರಿಗೆ ಸರಿಹೊಂದುವಂತೆ ತಾಜಾ ತರಕಾರಿಗಳು, ಗುಣಮಟ್ಟದ ಮಾಂಸದೊಂದಿಗೆ ವಿವಿಧ ಸಾಂಪ್ರದಾಯಿಕ ರುಚಿ ಖಾದ್ಯಗಳನ್ನು ತಯಾರಿಸಲಾಗಿತ್ತು. ಸ್ಥಳೀಯವಾಗಿ ತಯಾರಿಸಿದ ವೈನ್ ಹಾಗೂ ಮಸ್ತಿಹಾದಂತಹ ಸಾಂಪ್ರದಾಯಿಕ ಪಾನೀಯಗಳು ಮದುವೆ ಸಂಭ್ರಮ ಹೆಚ್ಚಿಸಿತ್ತು ಎನ್ನಲಾಗ್ತಿದೆ.

ಈ ಐಷಾರಾಮಿ ರೆಸಾರ್ಟ್‌ ಕಲ್ಯಾಣೋತ್ಸವದಲ್ಲಿ ಒಬ್ಬ ವ್ಯಕ್ತಿಗೆ ಊಟ ಅಥವಾ ಪ್ಲೇಟ್ ಬೆಲೆ ರೂ. 15,000 ರಿಂದ ರೂ. 35,000 ವರೆಗೆ ಇರುತ್ತದೆ ಎಂದು ಅಂದಾಜಿಸಲಾಗ್ತಿದೆ. ಪ್ರಕೃತಿಯ ಅದ್ಭುತ ಸೌಂದರ್ಯವನ್ನು ತನ್ನ ಒಡಲಿನಲ್ಲಿ ತುಂಬಿಕೊಂಡಿರುವ ಸುಂದರ ಪ್ರವಾಸಿ ತಾಣ ಗ್ರೀಸ್. ನೀಲಿ ಆಕಾಶ, ವಿಶಾಲ ಸಮುದ್ರ, ಬಿಳಿ ಮರಳಿನ ಕಡಲತೀರಗಳು, ನೀಲಿ ಬಣ್ಣದ ಸ್ವಚ್ಛ ನೀರು ಕಣ್ಮನ ಸೆಳೆಯುತ್ತದೆ. ಇನ್ನು ಸಮುದ್ರದ ಮಧ್ಯೆ ಚದುರಿಕೊಂಡಿರುವ ನೂರಾರು ದ್ವೀಪಗಳು ಗ್ರೀಸ್‌ನ ಸೌಂದರ್ಯ ಹೆಚ್ಚಿಸಿದೆ. ಇದೇ ಹವಾಮಾನ ಹೊರಾಂಗಣದಲ್ಲಿ ಸಭ ಸಮಾರಂಭ ಆಚರಿಸಲು ಅನುವು ಮಾಡಿಕೊಟ್ಟಿದೆ. ಇಂತಹ ಸುಂದರ ತಾಣದ ರೆಸಾರ್ಟ್ ಅಂದ್ರೆ ಕೇಳಬೇಕೇ..?

ಫೋಟೊಗ್ರಫಿಗೆ ಕೂಡ ಹೇಳಿಮಾಡಿಸಿದ ಜಾಗ ಇದು. ಅನಿರುದ್ಧ್ -ಕಾವ್ಯಾ ಕಲರ್‌ಫುಲ್ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ಈಗಾಗಲೇ ಮದುವೆ ಫೋಟೊ, ವೀಡಿಯೋ ಗಮನ ಸೆಳೀತಿದೆ. ಅದಕ್ಕೂ ಭಾರೀ ವೆಚ್ಚ ತಗುಲಿದೆ. ಇನ್ನು ಅತಿಥಿಗಳ ವಸ್ತ್ರಾಂಲಂಕಾರಕ್ಕೂ ಕೋಟಿ ಕೋಟಿ ವ್ಯಯಿಸಲಾಗಿದೆ. ಒಟ್ಟಾರೆ ಖರ್ಚು 100ರಿಂದ 150 ಕೋಟಿ ರೂ. ದಾಟಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಸಾವಿರಾರು ಕೋಟಿ ರೂ. ಆಸ್ತಿ ಒಡೆಯ ಕಲಾನಿಧಿ ಮಾರನ್‌ಗೆ ಇದು ಯಾವ 150 ಕೋಟಿ ರೂ. ಯಾವ ಲೆಕ್ಕ ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ.