ಕನ್ನಡದ ಹಿರಿಯ ನಟ ಅನಂತ್ ನಾಗ್ ಭಾರತೀಯ ಚಿತ್ರರಂದ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ. ಚಿತ್ರರಂಗದ ಬೆಳವಣಿಗೆಗೆ ಅವರ ಕೊಡುಗೆಯನ್ನು ಗೌರವಸಿ ಕೇಂದ್ರ ಸರ್ಕಾರ ಈ ಪ್ರಶಸ್ತಿ ನೀಡುತ್ತಿದೆ. ರಾಜಕೀಯ ಮುಖಂಡರು, ಸಿನಿಮಾ ತಾರೆಯರು ಹಾಗೂ ಅಭಿಮಾನಿಗಳು ಅನಂತ್ ನಾಗ್ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಇದೆಲ್ಲದರ ನಡುವೆ ಕೆಲವರು ಮಾತ್ರ ಈ ಬಗ್ಗೆ ಚಕಾರ ಎತ್ತಿದ್ದಾರೆ.

ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ರಾಜಕೀಯ ಬೆರಸಿ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿ ಹೊಗಳಿದ್ದಕ್ಕೆ ಅನಂತ್ ನಾಗ್ ಹೊಗಳಿದ್ದಕ್ಕೆ ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಚಾರ ಭಾರೀ ಚರ್ಚೆ ನಡೀತಿದೆ. ಇದು ನಿಜಕ್ಕೂ ಅನಂತ್ ನಾಗ್ ಪ್ರತಿಭೆಗೆ ಸಿಕ್ಕ ಗೌರವ ಎನ್ನುವುದರಲ್ಲಿ ಎರಡು ಮಾತಿಲ್ಲ. ಐದು ದಶಕಗಳಿಂದ ಚಿತ್ರರಂಗಕ್ಕೆ ಅವರ ಸೇರಿ ಮರೆಯೋಕೆ ಸಾಧ್ಯವಿಲ್ಲ. ನಿಜಕ್ಕೂ ಇದು ಕನ್ನಡಿಗರ ಹೆಮ್ಮೆ. ಆದರೆ ಕೆಲವರು ಮಾತ್ರ ಎಡ-ಬಲ ಎಂದು ತಮ್ಮ ಸಣ್ಣ ಮನಸ್ಥಿತಿಯನ್ನು ಪ್ರದರ್ಶನ ಮಾಡುತ್ತಿದ್ದಾರೆ.

ಅನಂತ್ ನಾಗ್ ರಾಜಕೀಯ ನಿಲುವನ್ನು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಜೊತೆಗೆ ಲಿಂಕ್ ಮಾಡಿ ಮಾತನಾಡುತ್ತಿದ್ದಾರೆ. ಇದು ಪ್ರತಿಭೆಯಿಂದ ಸಿಕ್ಕ ಪ್ರಶಸ್ತಿ ಅಲ್ಲ. ಬಕೆಟ್ ಹಿಡಿದಿದ್ದಕ್ಕೆ ಸಿಕ್ಕಿದ್ದು ಎಂದು ಕೀಳುಮಟ್ಟದಲ್ಲಿ ಮಾತನಾಡುತ್ತಿದ್ದಾರೆ. ಇದೇ ವಿಚಾರ ಪರ ವಿರೋಧ ಚರ್ಚೆಗೆ ವೇದಿಕೆಯಾಗಿದೆ. ಅನಂತ್ ನಾಗ್ ಬದಲು ಪ್ರಣಯ ರಾಜ ಶ್ರೀನಾಥ್ ಅವರಿಗೆ ಇಂತಹ ಗೌರವ ಸಿಗಬೇಕಿತ್ತು ಎಂದು ವಾದಿಸುವವರು ಇದ್ದಾರೆ.

"ಮೋದಿಯವರನ್ನು ಹೊಗಳಿದ್ದಕ್ಕಾಗಿ ನಿಮಗೆ ಈ ಪ್ರಶಸ್ತಿ ಬಂದಿದೆ ಅಂತ ಹಲವರು ಪ್ರತಿಕ್ರಿಯಿಸುತ್ತಿದ್ದಾರೆ. ನಾನು ಅದನ್ನು ಒಪ್ಪುವುದಿಲ್ಲ. ನೀವು ಒಬ್ಬ ಕಲಾವಿದರಾಗಿ ಈ ಪ್ರಶಸ್ತಿಗೆ ಅರ್ಹರಾಗಿದ್ದೀರಿ. ಅದಕ್ಕಾಗಿ ಈ ಪ್ರಶಸ್ತಿ ಬರಬೇಕಿತ್ತು, ಬಂದಿದೆ. ಅದಕ್ಕಾಗಿ ಮತ್ತೊಮ್ಮೆ ಅಭಿನಂದನೆಗಳು ಸರ್" ಎಂದು ಚಿತ್ರ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅವರ ಮಾತು ನೂರಕ್ಕೆ ನೂರರಷ್ಟು ಸತ್ಯ. ತಮ್ಮ ಸಹಜ ನಟನೆಯಿಂದ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದಾರೆ. ಯಾವುದೇ ಪಾತ್ರವಾದರೂ ಆ ಪಾತ್ರವೇ ತಾವಾಗಿ ಪರಕಾಯ ಪ್ರವೇಶ ಮಾಡುತ್ತಾರೆ. ಇಂತಹವರಿಗೆ ಅಲ್ಲವೇ ಮತ್ಯಾರಿಗೆ ಪ್ರಶಸ್ತಿ ಸಿಗಬೇಕು ಹೇಳಿ ಎಂದು ಎಲ್ಲರೂ ಬೆಂಬಲಕ್ಕೆ ನಿಂತಿದ್ದಾರೆ.

ಕಣ್ಣುಗಳಲ್ಲೇ ನಟಿಸುವ ಕಲೆ ಅನಂತ್ ನಾಗ್ ಅವರಿಗೆ ಸಿದ್ಧಿಸಿದೆ. ಗಂಭೀರ, ಹಾಸ್ಯ, ಪೌರಾಣಿಕ ಹೀಗೆ ಯಾವುದೇ ಪಾತ್ರ ಆಗಿದ್ದರೂ ಜೀವ ತುಂಬುವ ಛಾತಿ ಇರುವ ನಟ. 'ನಾ ನಿನ್ನ ಬಿಡಲಾರೆ' ಚಿತ್ರದಲ್ಲಿ ದೆವ್ವ ಮೈಮೇಲೆ ಮೆಟ್ಟಿಕೊಂಡ ಕೃಷ್ಣನ ಪಾತ್ರವೇ ಇರಲಿ, 'ಬೆಳದಿಂಗಳ ಬಾಲೆ' ಚಿತ್ರದ ರೇವಂತ್ ಪಾತ್ರವೇ ಆಗಿರಲಿ, 'ಮಿಂಚಿನ ಓಟ' ಚಿತ್ರದ ಟೋನಿ ಡಿಸೋಜಾ, 'ಗೌರಿ ಗಣೇಶ' ಚಿತ್ರದ ಲಂಬೋದರ ಹೀಗೆ ಹೇಳ್ತಾ ಹೋದ್ರೆ ಅವರ ನಿಭಾಯಿಸಿದ ಪಾತ್ರಗಳು ಕನ್ನಡ ಸಿನಿರಸಿಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. 'ಮುಂಗಾರುಮಳೆ' ಚಿತ್ರದ ಕರ್ನಲ್ ಸುಬ್ಬಯ್ಯ, 'ಗಾಳಿಪಟ' ಚಿತ್ರದ ಕೋದಂಡರಾಮ ಅಷ್ಟೆಲ್ಲಾ ಯಾಕೆ ಇತ್ತೀಚಿನ ವರ್ಷಗಳಲ್ಲಿ ಬಂದ 'ಕೆಜಿಎಫ್' ಚಿತ್ರದ ಆನಂದ್ ಇಂಗಳಗಿ ಹಾಗೂ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಚಿತ್ರದ ಅನಂತ ಪದ್ಮನಾಭ ಪಾತ್ರವನ್ನು ಮರೆಯೋಕೆ ಸಾಧ್ಯವಿಲ್ಲ.

ಪ್ರತಿ ಬಾರಿ ಪ್ರಶಸ್ತಿ ಘೋಷಣೆ ಸಂದರ್ಭಗಳಲ್ಲಿ ಲಾಬಿ ವಿಚಾರವಾಗಿ ಚರ್ಚೆ ಸರ್ವೇಸಾಮಾನ್ಯ. ಆದರೆ ದಾದಾ ಸಾಹೇಬ್ ಫಾಲ್ಕೆ ರೀತಿಯ ಅತ್ಯುನ್ನತ ಪ್ರಶಸ್ತಿ ನೀಡುವಾಗ ಆಯ್ಕೆ ಸಮಿತಿ ಸಾಕಷ್ಟು ವಿಚಾರಗಳನ್ನು ಪರಿಗಣಿಸಿರುತ್ತದೆ. ಮೋದಿ ಅವರನ್ನು ಹೊಗಳಿದವರಿಗೆ ಪ್ರಶಸ್ತಿ ಎನ್ನುವುದಾದರೆ ಇಂತಹ ಹೊಗಳುಭಟ್ಟ ಕಲಾವಿದರು ಇನ್ನು ಸಾಕಷ್ಟು ಜನ ಇದ್ದಾರೆ. ಅಂತಹರಿಗೆ ಕೊಡುತ್ತಿದ್ದರು. ನಿಜಕ್ಕೂ ಇದು ಅನಂತ್ ನಾಗ್ ಪ್ರತಿಭೆ ಸಿಕ್ಕ ಗೌರವ. ಡಾ. ರಾಜ್‌ಕುಮಾರ್ ಬಳಿಕ ಅನಂತ್ ನಾಗ್ ಈ ಗೌರವಕ್ಕೆ ಪಾತ್ರರಾಗಿರುವುದು ಕನ್ನಡಿಗರಿಗೆ ಸಂತಸ ತಂದಿದೆ. ಕಳೆದ ವರ್ಷ ಪದ್ಮಭೂಷಣ ಪ್ರಶಸ್ತಿಯನ್ನು ಅವರು ಸ್ವೀಕರಿಸಿದ್ದರು. ಇದೀಗ ಫಾಲ್ಕೆ ಪುರಸ್ಕಾರ ಲಭಿಸಿದೆ.