ಬಹುಭಾಷಾ ನಟಿ ನಯನತಾರಾ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಮದುವೆಯಾಗಿದ್ದಾರೆ. ಸಾರೋಗಸಿ ಪದ್ಧತಿ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದಾರೆ. ಮಕ್ಕಳ ಲಾಲನೆ ಪಾಲನೆ ಜೊತೆ ಜೊತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ.
ತಮ್ಮ ಮದುವೆಯನ್ನು ಡಾಕ್ಯುಮೆಂಟರಿ ರೂಪದಲ್ಲಿ ವಿಘ್ನೇಶ್- ನಯನತಾರ ಜೋಡಿ ಓಟಿಟಿಗೆ ತಂದಿದ್ದರು. 'ನಯನತಾರ:ಬಿಯಾಂಡ್ ದಿ ಫೇರಿ ಟೇಲ್' ಹೆಸರಿನಲ್ಲಿ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆಗಿದ್ದ ಡಾಕ್ಯುಮೆಂಟರಿ ಸಾಕಷ್ಟು ಚರ್ಚೆ ಹುಟ್ಟಾಕ್ಕಿತ್ತು. ಅಭಿಮಾನಿಗಳು ಅದನ್ನು ಮೆಚ್ಚಿಕೊಂಡರು. ಇನ್ನು ಡಾಕ್ಯುಮೆಂಟರಿಗಾಗಿ 'ನಾನುಂ ರೌಡಿಥಾನ್' ಚಿತ್ರದ ಮೇಕಿಂಗ್ ದೃಶ್ಯ ಬಳಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ಇದೆಲ್ಲದರ ನಡುವೆ ನಯನತಾರ ತಮ್ಮ ಬಗ್ಗೆ ಡಾಕ್ಯುಮೆಂಟರಿ ಮಾಡಿಕೊಳ್ಳುವ ಅವಶ್ಯಕತೆ ಏನಿತ್ತು ಎಂದು ಕೆಲವರು ವ್ಯಂಗ್ಯವಾಡಿದ್ದರು. ಅದಕ್ಕೆ ನಯನತಾರ ತಿರುಗೇಟು ಕೊಟ್ಟಿದ್ದಾರೆ.
"ನಾನು ಮದರ್ ಥೆರೆಸಾ ಅಲ್ಲ, ಸ್ವಾತಂತ್ರ್ಯ ಹೋರಾಟಗಾರ್ತಿ ಕೂಡ ಅಲ್ಲ. ನೀವು ಬಯಸುವಂತಹ ದೊಡ್ಡ ಬಿರುದುಗಳಿಗೆ ನಾನು ಅರ್ಹಳು ಅಲ್ಲದೇ ಇರಬಹುದು. ಆದರೆ ನಾನು ಚಿತ್ರ ಹಳ್ಳಿಯಿಂದ ಬಂದ ಸಾಮಾನ್ಯ ಹೆಣ್ಣುಮಗಳು. ಪುರುಷಪ್ರಧಾನ ಚಿತ್ರರಂಗದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದೀನಿ. ನನಗೆ ಇವತ್ತು ಸಿಗುತ್ತಿರುವ ಪ್ರೀತಿ, ಗೌರವ ಯಾವ ಸ್ಟಾರ್ ನಟನಿಗಿಂತ ಕಮ್ಮಿಯಿಲ್ಲ. ಇಷ್ಟು ವರ್ಷಗಳಲ್ಲಿ ಯಾರು ಸಾಧಿಸದ ಯಶಸ್ಸು ನನಗೆ ಸಿಕ್ಕಿದೆ. ಅಂತಹ ನನ್ನ ಜರ್ನಿಯನ್ನು ಡಾಕ್ಯುಮೆಂಟರಿ ಮಾಡುವುದರಲ್ಲಿ ತಪ್ಪೇನಿದೆ ? ಎಂದು ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ ನಯನತಾರಾ.
ಈ ವರ್ಷ ನಯನತಾರ ನಟಿಸಿದ ಐದು ಸಿನಿಮಾಗಳು ತೆರೆಗೆ ಬಂದಿತ್ತು. ಇದರಲ್ಲಿ ಕನ್ನಡದ 'ಟಾಕ್ಸಿಕ್' ಸಿನಿಮಾ ಕೂಡ ಸೇರಿದೆ. ದೀಪಾವಳಿ ಸಂಭ್ರಮದಲ್ಲಿ 'ಮೂಕುತ್ತಿ ಅಮ್ಮನ್' ಆಗಿ ನಯನ್ ಪ್ರೇಕ್ಷಕರ ಮುಂದೆ ಬಂದಿದ್ದರು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ. ಇನ್ನು ನಾಲ್ಕೈದು ಸಿನಿಮಾಗಳು ಆಕೆಯ ಕೈಯಲ್ಲಿವೆ. ರಜನಿಕಾಂತ್ ನಟನೆಯ 'ಧರ್ಮನ್' ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. ಬಾಲಿವುಡ್ನಲ್ಲಿ ಸಲ್ಮಾನ್ ಖಾನ್ ಜೋಡಿಯಾಗಿ ಇನ್ನು ಹೆಸರಿಡದ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.