ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ವಿದೇಶಗಳಲ್ಲಿ ಪ್ರೀಮಿಯರ್ ಶೋಗಳು ನಡೆದು ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ಆದರೆ ಭಾರತದ ಫಿಲ್ಮ್ ಮೇಕರ್ಸ್, ಸ್ಟಾರ್ಸ್ ಈ ಬಗ್ಗೆ ಮೌನ ವಹಿಸಿದ್ದಾರೆ. ಟ್ರೈಲರ್ ನೋಡಿ ನಿರ್ದೇಶಕ ರಾಜಮೌಳಿ ಪ್ರತಿಕ್ರಿಯಿಸಿದ್ದರು. ತಂಡಕ್ಕೆ ಶುಭ ಕೋರಿದ್ದರು. ಇದೀಗ ನಟ ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದಾರೆ.
ಇಡೀ 'ರಾಮಾಯಣ' ತಂಡಕ್ಕೆ ನನ್ನ ಶುಭಾಶಯಗಳು. ಇದು ಬರೀ ಸಿನಿಮಾ ಅಲ್ಲ, ನಮ್ಮ ಸಂಸ್ಕೃತಿಯ ಪ್ರತೀಕ ಮತ್ತು ಭಾರತೀಯ ಚಲನಚಿತ್ರಗಳ ಗುಣಮಟ್ಟವನ್ನು ಉನ್ನತೀಕರಿಸುವ ಒಂದು ಪ್ರಯತ್ನವಾಗಿದೆ. ಈ ದಿವ್ಯ ಪ್ರಯತ್ನದಲ್ಲಿ ತೊಡಗಿರುವ ಇಡೀ ತಂಡಕ್ಕೆ, ನನ್ನ ಶುದ್ಧ ಹಾಗೂ ಸಕಾರಾತ್ಮಕ ಹಾರೈಕೆಗಳನ್ನು ಪೂರ್ಣ ಹೃದಯದಿಂದ ಸಲ್ಲಿಸುತ್ತೇನೆ. ನಮ್ಮ ಕಥೆಗಳು, ನಮ್ಮ ಸಂಸ್ಕೃತಿ ಮತ್ತು ನಮ್ಮ ವೈಭವವನ್ನು ಹೊತ್ತು ತರುವ ಈ ಪವಿತ್ರ ಪ್ರಯತ್ನವನ್ನು ಬೆಂಬಲಿಸಲು ನಾವೆಲ್ಲರೂ ಒಗ್ಗೂಡಿ ಮುಂದೆ ಬರೋಣ. ಜೈ ಶ್ರೀ ರಾಮ್ ಎಂದು ಅಲ್ಲು ಅರ್ಜುನ್ ಟ್ವೀಟ್ ಮಾಡಿ ಶುಭ ಕೋರಿದ್ದಾರೆ.
ಅಲ್ಲು ಅರ್ಜುನ್ ಬೆಂಬಲಕ್ಕೆ ಅಭಿಮಾನಿಗಳು ಧನ್ಯವಾದ ತಿಳಿಸುತ್ತಿದ್ದಾರೆ. ನಿರ್ದೇಶಕ ನಿತೇಶ್ ತಿವಾರಿ ರಿಪ್ಲೇ ಮಾಡಿ 'ಧನ್ಯವಾದ ಬ್ರದರ್' ಎಂದಿದ್ದಾರೆ. ಯಶ್ ನಿರ್ಮಿಸಿ ನಟಿಸಿದ 'ಟಾಕ್ಸಿಕ್' ಸಿನಿಮಾ ಬಗ್ಗೆ ಸ್ಟಾರ್ಸ್ ಮೌನ ವಹಿಸಿದ್ದರು. ಕನ್ನಡದಲ್ಲಿ ಸುದೀಪ್, ರಿಷಬ್ ಶೆಟ್ಟಿ, ಶಿವಣ್ಣ, ಉಪೇಂದ್ರ ಸೇರಿ ಕೆಲವರು ಮಾತ್ರ ಚಿತ್ರಕ್ಕೆ ಬೆಂಬಲ ಸೂಚಿಸಿದ್ದರು. ಪರಭಾಷೆಯ ಸ್ಟಾರ್ ನಟರೆಲ್ಲಾ ಮೌನಕ್ಕೆ ಜಾರಿದ್ದರು.
'ಟಾಕ್ಸಿಕ್' ಸಿನಿಮಾ ರಿಲೀಸ್ ಹೊತ್ತಲ್ಲಿ ಕೆಲವರು ಇದ್ದಕ್ಕಿದ್ದಂತೆ ರವಿತೇಜ ನಟನೆಯ 'ಇರುಮುಡಿ' ಚಿತ್ರ ಬೆಂಬಲಿಸಿ ಟ್ವೀಟ್ ಮಾಡಿದ್ದರು. ಇದು ಯಶ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. 'ಪುಷ್ಪ'- 2 ಬಳಿಕ ಅಟ್ಲಿ ನಿರ್ದೇಶನದ 'ರಾಕಾ' ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ತೆರೆಗೆ ಬರ್ತಿದೆ.
My best wishes to the entire #Ramayana team. It’s not just a movie. It’s a representation of our culture and an attempt to raise the bar of Indian films. I wholeheartedly send my pure, positive wishes to the entire team for their divine attempt. Let’s all unite and come forward… pic.twitter.com/YE1ETcks7q
— Allu Arjun (@alluarjun) November 4, 2026