ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಧರಿಸುವ ಉಡುಗೆ ಬಗ್ಗೆ ಪದೇ ಪದೆ ಚರ್ಚೆ ನಡೆಯುತ್ತದೆ. ಸೋಶಿಯಲ್ ಮೀಡಿಯಾ ಜಮಾನದಲ್ಲಿ ಅದು ಮತ್ತಷ್ಟು ಹೆಚ್ಚಾಗಿದೆ. ನಟಿಯರ ಉಡುಗೆ ತೊಡುಗೆ ಬಗ್ಗೆ ಪರ ವಿರೋಧ ಚರ್ಚೆ ಸರ್ವೇಸಾಮಾನ್ಯ. ಅಸಭ್ಯವಾಗಿ ಬಟ್ಟೆ ತೊಟ್ಟರೆ ಮುಗಿದೇ ಹೋಯ್ತು. ಸಿಕ್ಕಾಪಟ್ಟೆ ಟ್ರೋಲ್ಸ್ ಎದುರಿಸಬೇಕಾಗುತ್ತದೆ. ಮಲಯಾಳಂ ನಟಿ ಐಶ್ವರ್ಯ ಲಕ್ಷ್ಮಿ ತಮಗೆ ಎದುರಾದ ಕಹಿ ಅನುಭವದ ಬಗ್ಗೆ ಮಾತನಾಡಿದ್ದಾರೆ.

ಸದಾ ಮಹಿಳೆಯರು ತೊಡುವ ಉಡುಗೆ ತೊಡುಗೆ ಬಗ್ಗೆ ಮಾತನಾಡುತ್ತಾರೆ. ಸಂಸ್ಕೃತಿ ಸಂಪ್ರದಾಯ ಎಂದು ಭಾಷಣ ಬಿಗಿಯುತ್ತಾರೆ. "ಸಂಸ್ಕೃತಿಯು ಕೇವಲ ಮಹಿಳೆಯ ಎದೆ ಸೀಳುಭಾಗದಲ್ಲಿದೆಯೇ ?" ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. Ranjini Haridas ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಐಶ್ವರ್ಯ ಮಾತನಾಡಿದ್ದಾರೆ. ಕೆಲ ತಿಂಗಳ ಹಿಂದೆ ತ್ರಿವೇಡ್ರಂನಲ್ಲಿ ನಡೆದ ಆಭರಣ ಮಳಿಗೆ ಕಾರ್ಯಕ್ರಮಕ್ಕೆ ಆಕೆ ಹಾಜರಾಗಿದ್ದರು. ಈ ವೇಳೆ ಎದೆಸೀಳು ಕಾಣುವಂತೆ ಐಶ್ವರ್ಯ ಧರಿಸಿದ್ದ ಕಾಸ್ಟ್ಯೂಮ್ ಎಲ್ಲರ ಗಮನ ಸೆಳೆದಿತ್ತು. ಕ್ಯಾಮರಾಗಳು ಆಕೆಯ ಎದೆಯನ್ನು ಫೋಕಸ್ ಮಾಡುತ್ತಿದ್ದಂತೆ ಆಕೆ ಕೈಗಳಿಂದ ಮುಚ್ಚಿಕೊಳ್ಳಲು ಯತ್ನಿಸಿದ್ದರು. ಆ ವೀಡಿಯೋ ವೈರಲ್ ಆಗಿ ಟ್ರೋಲ್ ಆಗಿತ್ತು. ಈ ಬಗ್ಗೆ ಮಾತನಾಡಿದ್ದಾರೆ.

ಅವತ್ತು ಆಭರಣ ಮಳಿಗೆ ಕಾರ್ಯಕ್ರಮಕ್ಕೆ ಹಾಕಿಕೊಂಡಿದ್ದ ಡ್ರೆಸ್ ನನಗೆ ಬಹಳ ಇಷ್ಟವಾಗಿತ್ತು. ಎಲ್ಲಾ ಗೊತ್ತಿದ್ದು ನಾನು ಧರಿಸಿದ್ದೆ. ಆ ಡ್ರೆಸ್‌ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸುತ್ತಿದ್ದೆ. ಆದ್ರೆ ಛಾಯಾಗ್ರಾಹಕರು ನನ್ನ ಮುಖ ಫೋಕಸ್ ಮಾಡುತ್ತಿರಲಿಲ್ಲ. ನನಗೆ ಇರುಸುಮುರಿಸು ಉಂಟಾಗಿ ನನ್ನ ಬಾಡಿ ಲಾಂಗ್ವೇಜ್ ಬದಲಾಗಿತ್ತು. ಎಲ್ಲೋ ಒಂದು ಕಡೆ ಎಲ್ಲೆ ಮೀರಿದ್ದಾರೆ ಅನ್ನಿಸಿತು. ಅದನ್ನು ನೋಡಿ 'ಆಕೆಗೆ ಯಾಕೆ ಮುಜುಗರ ? ತಮ್ಮ ಕುತ್ತಿಗೆಯ ಭಾಗವನ್ನು ಏಕೆ ಮುಚ್ಚಿಕೊಳ್ಳುತ್ತಿದ್ದಾರೆ ? ಅಷ್ಟು ಮುಜುಗರವಾಗುವಂತಹ ಉಡುಪನ್ನು ಏಕೆ ಧರಿಸಬೇಕಿತ್ತು? ಎಂದು ಜನ ಪ್ರಶ್ನಿಸಿದ್ದರು' ಎಂದು ಐಶ್ವರ್ಯಾ ನೆನಪಿಸಿಕೊಂಡಿದ್ದಾರೆ.

ಮಾತು ಮುಂದುವರೆಸಿರುವ ಐಶ್ವರ್ಯಾ ಲಕ್ಷ್ಮಿ "ಸಂಸ್ಕೃತಿ ಬರೀ ಮಹಿಳೆಯ ಎದೆಯ ಭಾಗದ ತೋರಿಸುವುದರಲ್ಲಿ ಅಥವಾ ಆಕೆ ಎಷ್ಟು ಉದ್ದದ ಬಟ್ಟೆ ಧರಿಸಿದ್ದಾಳೆ ಎನ್ನುವುದರಲ್ಲಿ ಮಾತ್ರ ಇದ್ಯಾ ? ಅದು ನಮ್ಮ ನಡವಳಿಕೆಯಲ್ಲೂ ಇದೆ ಅಲ್ವಾ ?" ಎಂದು ಪ್ರಶ್ನಿಸಿದ್ದಾರೆ. "ಮಹಿಳೆಯರ ಬಗ್ಗೆ ಅನುಚಿತವಾಗಿ ಮಾತನಾಡುವವರನ್ನು ಕೇಳುವವರು ಇಲ್ಲ. ಆದರೆ, ಮಹಿಳೆಯರು ಮಾತ್ರ ಎದೆ ಸೀಳು ಮತ್ತು ಉಡುಪಿನ ಆಯ್ಕೆಯ ಬಗ್ಗೆ ಎಚ್ಚರದಿಂದ ಇರಬೇಕು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಟ್ರೋಲ್ ಮಾಡಿದಾಗ ನನಗೆ ಅದು ತಮಾಷೆ ಎನಿಸಿತು. ಆದರೆ ಸಮಯ ಕಳೆದಂತೆ, ಈ ವಿಷಯ ಯಾಕೆ ಇಷ್ಟು ಚರ್ಚೆ ಆಗ್ತಿದೆ ಎಂದು ಭಯವಾಯ್ತು. ಇದನ್ನೆಲ್ಲಾ ಬಿಟ್ಟು ನಾವು ನಮ್ಮ ಜಿಡಿಪಿ ಬಗ್ಗೆ ಅಥವಾ ಎಷ್ಟು ವಯಸ್ಸಾದ ಪೋಷಕರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬುದರ ಬಗ್ಗೆ ಏಕೆ ಚರ್ಚಿಸಬಾರದು? ನನ್ನ ಎದೆ ಸೀಳಿನ ಬಗ್ಗೆಯೇ ಏಕೆ ಇಷ್ಟೊಂದು ತೀವ್ರವಾದ ಚರ್ಚೆ ನಡೆಯಬೇಕು?" ಎಂದು ಅಚ್ಚರಿಗೊಂಡಿದ್ದಾಗಿ ವಿವರಿಸಿದ್ದಾರೆ.