ತೆಲುಗು ನಟ ನಾನಿ ನಟನೆಯ 'ದಿ ಪ್ಯಾರಡೈಸ್' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಬಂದಿತ್ತು. ಸುದ್ದಿಗೋಷ್ಠಿ ನಡೆಸಿ ಎಲ್ಲರೂ ಸಿನಿಮಾ ನೋಡುವಂತೆ ಮನವಿ ಮಾಡಿದೆ. ಪಾತ್ರಕ್ಕಾಗಿ ಉದ್ದ ಕೂದಲು ಬಿಟ್ಟು ಎರಡು ಜಡೆ ಹಾಕಿಕೊಂಡು ನಟ ನಾನಿ ನಟಿಸಿದ್ದಾರೆ. ಈ ಬಗ್ಗೆ ಅವರಿಗೆ ವಿಚಿತ್ರ ಪ್ರಶ್ನೆ ಎದುರಾಗಿತ್ತು.

ಚಿತ್ರದಲ್ಲಿ ಸಿಕ್ಕಾಪಟ್ಟೆ ರಗಡ್ ಅವತಾರದಲ್ಲಿ ನಾನಿ ನಟಿಸಿದ್ದಾರೆ. 'ಆಯಾ ಶೇರ್' ಸಾಂಗ್ ಸೂಪರ್ ಹಿಟ್ ಆಗಿ ಸಿನಿಮಾ ಮೇಲೆ ನಿರೀಕ್ಷೆ ಮೂಡಿಸಿದೆ. ಮುಖ್ಯವಾಗಿ ಚಿತ್ರದಲ್ಲಿ ನಾನಿ ಎರಡು ಜಡೆಗಳನ್ನು ಯಾಕೆ ಹಾಕಿಕೊಂಡಿದ್ದಾರೆ. ಅದಕ್ಕೆ ಕಾರಣ ಏನು ? ಎಂದು ತಿಳಿದುಕೊಳ್ಳಲು ಕಾಯುತ್ತಿದ್ದಾರೆ.

ನಾನಿ ಮಾತನಾಡಿ ಬರ್ತಾ ಬರ್ತಾ ಹೆಣ್ಣುಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಗೆ ಒಗ್ಗಿಕೊಂಡಿರುವುದರಿಂದ ಜಡೆ ಹಾಕುವುದನ್ನು ನಿಲ್ಲಿಸಿದ್ದಾರೆ. ನಾವು ಶಾಲೆಗೆ ಹೋಗುವಾಗ ಹೆಣ್ಣುಮಕ್ಕಳು ಎರಡು ಜಡೆ ಹಾಕಿಕೊಂಡು ಬರ್ತಿದ್ರು.. ಹೆಣ್ಣು ಮಕ್ಕಳು ಜಡೆ ಹಾಕಿಕೊಂಡ್ರೆ ಸಂಪ್ರದಾಯಬದ್ಧವಾಗಿ ಮತ್ತು ಸುಂದರವಾಗಿ ಕಾಣುತ್ತಾರೆ. ನೀನು ಜಡೆ ಹಾಕಿಕೊಂಡ್ರೆ ಚೆನ್ನಾಗಿರುತ್ತೆ ಎಂದು ಪತ್ರಕರ್ತೆಯೊಬ್ಬರಿಗೆ ನಾನಿ ಸಲಹೆ ನೀಡಿದ್ದಾರೆ. ಕೂಡಲೇ ಪತ್ರಕರ್ತೆ ಒಬ್ಬರು "ಸಾರ್ ನೀವು ಕೂದಲು ಬೆಳೆಸಿ ಜಡೆ ಹಾಕಿಕೊಂಡ್ರೆ, ಸರಿ ಅಂತಿದ್ವಿ.. ವಿಗ್ ಇಟ್ಕೊಂಡು ಬಂದು ನಮ್ಗೆ ಹೇಳಿದ್ರೆ ಹೆಂಗೆ ?" ಕೇಳಿದ್ದಾರೆ.

ಪ್ರತಿಕ್ರಿಯಿಸಿದ ನಾನಿ "ನಾನು ಯಾರು ನಟ.. ವಿಗ್ ಹಾಕಿಕೊಂಡು ನಟಿಸಿದ್ದೀನಿ.. ನಾನು ಸಿನಿಮಾದಲ್ಲಿ ಅಳುವಂತೆ ನಾಟಕ ಮಾಡ್ತೀನಿ.. ನೀವು ಜೀವನದಲ್ಲಿ ನಿಜವಾಗಿ ಅಳ್ತೀರಾ ಅಲ್ವಾ.. ಅದೇ ರೀತಿ ನಾನು ಸಿನ್ಮಾದಲ್ಲಿ ವಿಗ್ ಇಟ್ಕೊಂಡಿದ್ದೀನಿ. ನಿಜ ಜೀವನದಲ್ಲಿ ಅದನ್ನು ಅನುಸರಿಸಿ ಎಂದು ನಿಮಗೆ ಹೇಳ್ತಿದ್ದೀನಿ" ಎಂದಿದ್ದಾರೆ. ಆ ವೀಡಿಯೋ ವೈರಲ್ ವೈರಲ್ ಆಗ್ತಿದೆ. ಜಡೆ ಹಾಕಿಕೊಳ್ಳುವ ಎಷ್ಟು ಕಷ್ಟ ಎನ್ನುವುದು ಈಗ ಗೊತ್ತಾಯ್ತು" ಎಂದು ತಿಳಿಸಿದ್ದಾರೆ.

ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ..