2024ನೇ ಸಾಲಿನ ಸಿನಿಮಾಗಳಿಗೆ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿದೆ. ಗುಜರಾತ್‌ನ ಕೆವಾಡಿಯಾದ ಏಕ್ತಾ ನಗರದಲ್ಲಿ 'ಸ್ಟ್ಯಾಚ್ಯೂ ಆಫ್ ಯೂನಿಟಿ' ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಿರಿಯ ನಟ ಅನಂತ್ ನಾಗ್ ಅವರು ಜೀವಮಾನ ಸಾಧನೆಗೆ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಆರಂಭದಲ್ಲೇ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ ಕಾರ್ಯಕ್ರಮಕ್ಕೆ ನಟ ಅನಂತ್ ನಾಗ್ ಅವರನ್ನು ಸ್ವಾಗತಿಸಿದರು. ಇದೇ ವೇಳೆ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸುವಂತೆ ಮನವಿ ಮಾಡಿದರು. ಪತ್ನಿ ಗಾಯತ್ರಿ ನಾಗ್ ಕೂಡ ಜೊತೆಗಿದ್ದರು. ಬ್ರಹ್ಮಯುಗಂ ಚಿತ್ರದಲ್ಲಿನ ಅಭಿನಯಕ್ಕಾಗಿ ಮಮ್ಮುಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದರು. ಇದು ಅವರಿಗೆ ಸಿಕ್ಕ 4ನೇ ರಾಷ್ಟ್ರಪ್ರಶಸ್ತಿ ಆಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ವೇದಿಕೆಯಲ್ಲಿ ನಟ ಅನಂತ್ ನಾಗ್ ತಮ್ಮ ಜರ್ನಿಯನ್ನು ನೆನಪಿಸಿಕೊಂಡರು. ನಾನು ಚಿಕ್ಕಂದಿನಲ್ಲಿ 12-13 ವರ್ಷ ನಾನು ಮಠದಲ್ಲಿ ಇದ್ದೆ. ನಂತರ ಮುಂಬೈಗೆ ಹೋಗುವಂತಾಯಿತು. ಚೈತನ್ಯ ಮಹಾಪ್ರಭು ಕುರಿತಾದ ನಾಟಕದಲ್ಲಿ ನಟಿಸಿದೆ. ಅದೇ ನನ್ನ ಮೊದಲ ನಾಟಕ. ಉದರನಿಮಿತ್ತಂ ಬಹುಕೃತ ವೇಷಂ ಅದೇ ರೀತಿ ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎನ್ನುವಂತೆ ಹೊಟ್ಟೆಪಾಡಿಗಾಗಿ ಬಣ್ಣ ಹಚ್ಚಲು ಆರಂಭಿಸಿದೆ. ಐದು ವರ್ಷಗಳಲ್ಲಿ 50 ನಾಟಕಗಳಲ್ಲಿ ನಟಿಸಿದೆ. ಅಲ್ಲಿಂದ ಮುಂದೆ ಸಿನಿಮಾ ಅವಕಾಶಗಳು ಸಿಕ್ತು ಎಂದು ಮೆಲುಕು ಹಾಕಿದ್ದಾರೆ.
ಮೊದಲಿಗೆ ಕನ್ನಡ ಅವಕಾಶಗಳನ್ನು ಒಪ್ಪಿಕೊಂಡೆ. ಬಳಿಕ ಹಿಂದಿ ಸಿನಿಮಾಗಳಲ್ಲಿ ಕೂಡ ನಟಿಸಿದ್ದೆ. ಕರ್ನಾಟಕಕ್ಕೆ ಮರಳಿ ಹೋದೆ. ಕರ್ನಾಟಕವೇ ನನ್ನ ಕರ್ಮಭೂಮಿ ಆಯ್ತು ಎಂದು ಅನಂತ್ ನಾಗ್ ಹೇಳಿದ್ದಾರೆ. ಬಳಿಕ ನಾನಾ ಭಾಷೆಯ ಸಿನಿಮಾಗಳಲ್ಲಿ ಬಣ್ಣ ಹಚ್ಚಿದೆ. ನನಗೆ ಕನ್ನಡ ಚಿತ್ರಗಳಲ್ಲಿ ಹೆಚ್ಚು ಅವಕಾಶ ಸಿಕ್ತು. ಕನ್ನಡ ಪ್ರೇಕ್ಷಕರೇ ನನ್ನ ಒಪ್ಪಿಕೊಂಡ್ರು. ಕಳೆದ ವರ್ಷ ಶ್ರೀಮತಿ ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ ಸ್ವೀಕರಿಸಿದ್ದೆ. ಈಗ ದಾದಾ ಸಾಹೇಬ್ ಪ್ರಶಸ್ತಿ ಬಹಳ ಖುಷಿ ಆಗ್ತಿದೆ ಎಂದು ಹಿರಿಯ ನಟ ಮಾತನಾಡಿದ್ದಾರೆ.
Honourable President Droupadi Murmu presents the prestigious Dadasaheb Phalke Award to Anant Nag Sir for his contribution to Indian Cinema ❤️ #AnantNag #DadaSahebPhalke pic.twitter.com/Eln9spgugm
— Hemanth Shaiva (@HemanthShaiva) September 22, 2026