ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದ 'ಹನುಮಾನ್ ಅಂಶ್' ಸಿನಿಮಾ ಓಟಿಟಿಗೆ ಬರುವ ಸಮಯ ಹತ್ತಿರವಾಗಿದೆ. ಕೇವಲ 2 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಬಯೋಪಿಕ್ ಸಿನಿಮಾ ದಾಖಲೆಯ 440 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಸ್ವಂಭು ಮೀಡಿಯಾ ನೆಟ್‌ವರ್ಕ್ ಹಾಗೂ ಹೋಲಿ ಕೌ ಹೋಮ್ ಪ್ರೊಡಕ್ಷನ್ಸ್ ಸಂಸ್ಥೆಗಳು ಜಂಟಿಯಾಗಿ 'ಹನುಮಾನ್ ಅಂಶ್' ಸಿನಿಮಾ ನಿರ್ಮಾಣ ಮಾಡಿದ್ದಾರೆ. ವಿಶಾಲ್ ಚತುರ್ವೇದಿ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದ ಸಿನಿಮಾ ಬಾಕ್ಸಾಫೀಸ್ ದೋಚಿತ್ತು. ಸಂತ ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಆಧ್ಯಾತ್ಮಿಕ ಪಯಣವನ್ನು ಆಧರಿಸಿ ಸಿನಿಮಾ ತೆರೆಗೆ ತರಲಾಗಿದೆ. ನೀಮ್ ಕರೋಲಿ ಬಾಬಾ ಪಾತ್ರದಲ್ಲಿ ಶೋಭಿನಾವ್ ಸತ್ಯ ನಟಿಸಿ ಮೋಡಿ ಮಾಡಿದ್ದಾರೆ.
ಯಾವುದೇ ನಿರೀಕ್ಷೆ ಇಲ್ಲದೇ ಆಗಸ್ಟ್ 7ರಂದು 'ಹನುಮಾನ್ ಅಂಶ್' ಸಿನಿಮಾ ಬಿಡುಗಡೆ ಆಗಿತ್ತು. ನಿಧಾನವಾಗಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲು ಆರಂಭಿಸಿತು. ನೋಡ್ತಾ ನೋಡ್ತಾ ಜನ ಸಾಗರೋಪಾದಿಯಾಗಿ ಸಿನಿಮಾ ನೋಡಲು ಮುಗಿಬಿದ್ದರು. ಉತ್ತರ ಭಾರತದಲ್ಲಿ ಸಿನಿಮಾ ಚಮತ್ಕಾರ ಮಾಡಿಬಿಟ್ಟಿತ್ತು. ಕೇವಲ 2 ಕೋಟಿ ರೂಪಾಯಿ ವ್ಯಯಿಸಿ ನಿರ್ಮಿಸಿದ ಸಿನಿಮಾ 440 ಕೋಟಿ ರೂ. ಕೊಳ್ಳೆ ಹೊಡೆಯುವುದು ತಮಾಷೆಯ ಮಾತಲ್ಲ.
ಓಟಿಟಿ ಸ್ಟ್ರೀಮಿಂಗ್
ಎರಡು ತಿಂಗಳ ಬಳಿಕ ಹಿಂದಿ ಸಿನಿಮಾಗಳನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಬೇಕು ಎನ್ನುವ ನಿಯಮ ಇದೆ. ಆಗಸ್ಟ್ 7ರಂದು ತೆರೆಕಂಡ 'ಹನುಮಾನ್ ಅಂಶ್' ನವೆಂಬರ್ 27ರಂದು ಡಿಜಿಟಲ್ ಸ್ಟ್ರೀಮಿಂಗ್ ಮಾಡಲಾಗ್ತಿದೆ. ಸೋನಿ ಲಿವ್ ಓಟಿಟಿ ವೇದಿಕೆಯಲ್ಲಿ ಸಿನಿಮಾ ವೀಕ್ಷಿಸಬಹುದು. ಹಿಂದಿ ಬಳಿಕ ತೆಲುಗಿಗೆ ಸಿನಿಮಾ ಡಬ್ ಆಗಿ ಬಿಡುಗಡೆ ಆಗಿತ್ತು. ಓಟಿಟಿಯಲ್ಲಿ ದಕ್ಷಿಣದ ಭಾಷೆಗಳಲ್ಲಿ ಚಿತ್ರ ಸ್ಟ್ರೀಮಿಂಗ್ ಆಗುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ಬಾಕ್ಸಾಫೀಸ್ ದಾಖಲೆ
ಮೊದಲ ವಾರ ಕೇವಲ 250 ಸ್ಕ್ರೀನ್‌ಗಳಲ್ಲಿ 'ಹನುಮಾನ್ ಅಂಶ್' ಸಿನಿಮಾ ತೆರೆಕಂಡು 90 ಲಕ್ಷ ರೂಪಾಯಿ ಮಾತ್ರ ಕಲೆಕ್ಷನ್ ಮಾಡಿತ್ತು. ಬಳಿಕ ಮೌತ್ ಟಾಕ್ ಮೂಲಕವೇ ಜನ ಚಿತ್ರಮಂದಿರಗಳಿಗೆ ಬರಲು ಆರಂಭಿಸಿದರು. ಆರಂಭದಲ್ಲಿ ಇಂತಾದೊಂದು ಸಿನಿಮಾ ಬಿಡುಗಡೆ ಆಗಿರುವುದು ಯಾರಿಗೂ ಗೊತ್ತಿರಲಿಲ್ಲ. ಆದರೆ ಪ್ರೇಕ್ಷಕರ ಪ್ರಚಾರ ಮಾಡಿ ಸಿನಿಮಾವನ್ನು ಬ್ಲಾಕ್‌ಬಸ್ಟರ್ ಹಿಟ್ ಮಾಡಿಬಿಟ್ಟರು.
Not just a story, but a journey of faith, devotion, and miracles that touched a billion hearts 🙏✨
— Sony LIV (@SonyLIV) November 6, 2026
Watch the most loved film of the year - Hanuman Ansh, arriving on 27th Nov only on Sony LIV#SitaRam
[Hanuman Ansh, Neeb Karori Baba, Sony LIV] pic.twitter.com/jjYBUVa11e