ಕಾಫಿ ವಿತ್ ಕರಣ್ ಶೋನಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಭಾಗಿ ಆಗಿದ್ದು ನೆಗೆಟಿವ್ ಆಗಿ ಟ್ರೋಲ್ ಆಗ್ತಿದೆ. ಕೆಲ ವೈಯಕ್ತಿಕ ಪ್ರಶ್ನೆಗಳಿಗೆ ಇಬ್ಬರ ಪ್ರತಿಕ್ರಿಯೆ ಕಂಡ ಕೆಲವರು ಟೀಕಿಸಲು ಆರಂಭಿಸಿದರು. ರಶ್ಮಿಕಾ ಮೇಲೆಬಿದ್ದು ಹೋಗಿ ವಿಜಯ್ ದೇವರಕೊಂಡನ ಪ್ರೀತಿಸಿ ಮದುವೆ ಆಗಿದ್ದಾರೆ. ಈ ಸಂಬಂಧ ಬಹಳ ದಿನ ಉಳಿಯಲ್ಲ ಎನ್ನುಂತೆ ಕೆಲವರು ಕಾಮೆಂಟ್ ಮಾಡಿದ್ದರು. ಇದಕ್ಕೆ ಇಬ್ಬರೂ ಪ್ರತಿಕ್ರಿಯಿಸಿದ್ದಾರೆ.

ಟ್ರೋಲ್ಸ್ ಬಗ್ಗೆ ರಶ್ಮಿಕಾ ಸುದೀರ್ಘ ಪತ್ರ ಬರೆದಿದ್ದಾರೆ. ವಿಜಯ್ ಅಂದ್ರೆ ನನಗೆ ಹುಚ್ಚು.. 100 ಸಲ ಅಲ್ಲ, 1000 ಸಲ ಬೇಕಿದ್ರು ನನ್ನ ಪ್ರೀತಿಸ್ತೀಯಾ ಅಂತ ಕೇಳ್ತೀನಿ ನಿಮಗೇನು ಸಮಸ್ಯೆ ಎಂದು ರಶ್ಮಿಕಾ ತಿರುಗೇಟು ನೀಡಿದ್ದಾರೆ. ಇತ್ತ ವಿಜಯ್ ದೇವರಕೊಂಡ ಕೂಡ ಟ್ರೋಲ್ ಮಾಡುವವರಿಗೆ ತೀಷ್ಣವಾಗಿ ಉತ್ತರಿಸಿದ್ದಾರೆ. ರಶ್ಮಿಕಾ ಜೊತೆಗಿನ ಮದುವೆ ಫೋಟೊ ಹಾಗೂ ಕ್ಯೂಟ್ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ರಶ್ಮಿಕಾ.. ನನ್ನ ಬೆಸ್ಟ್ ಫ್ರೆಂಡ್, ನನ್ನ ಹೆಂಡ್ತಿ, ನನ್ನ ಸಂಗಾತಿ. ನನ್ನ ಜೀವನದ ಅತ್ಯಂತ ಸುಂದರವಾದ ಭಾಗಗಳಲ್ಲಿ ಒಂದು. ಇದರಲ್ಲಿ ನಾನು ಸಂಪೂರ್ಣವಾಗಿ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದೇನೆ.. ನಮ್ಮ ಬಗ್ಗೆ ಕಾಳಜಿ ವಹಿಸುವ ಎಲ್ಲರಿಗೂ ತಿಳಿಸುವುದೇನೆಂದರೆ, ನಾವಿಬ್ಬರೂ ಅತ್ಯಂತ ಸಂತೋಷವಾಗಿದ್ದೇವೆ. ನಾನು ನಿಜಕ್ಕೂ ಅದೃಷ್ಟವಂತ. ಒಂದು ವೇಳೆ ಇಡೀ ಜಗತ್ತೇ ನಮ್ಮ ವಿರುದ್ಧ ನಿಂತರೂ ಸರಿ, ನಾವಿಬ್ಬರೂ ಒಟ್ಟಿಗೆ ಇರುತ್ತೇವೆ" ಎಂದು ವಿಜಯ್ ಬರೆದುಕೊಂಡಿದ್ದಾರೆ.

ಪ್ರೀತಿಯನ್ನು ಹಾಗೂ ಸರಳವಾಗಿ, ಸಂತೋಷದಿಂದ ಬದುಕುವುದನ್ನು ಸಂಭ್ರಮಿಸುವ ಎಲ್ಲರಿಗೂ ನನ್ನ ಪ್ರೀತಿಪೂರ್ವಕ ಶುಭಾಶಯಗಳು. ಇನ್ನು, ಉಳಿದವರ ವಿಷಯಕ್ಕೆ ಬಂದ್ರೆ ಅವರ ಬಗ್ಗೆ ನನಗೆ ಕಿಂಚಿತ್ತೂ ಗೌರವವಾಗಲಿ, ಮರ್ಯಾದೆಯಾಗಲಿ ಇಲ್ಲ.. ಅವರೆಲ್ಲರೂ ಹೋಗಿ **** .. ಎಂದು ವಿಜಯ್ ದೇವರಕೊಂಡ ಕೆಟ್ಟ ಪದ ಬಳಸಿ ಬೈದಿದ್ದಾರೆ..