ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಂಪತಿ ನಟನೆಯ 'ರಣಬಾಲಿ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣ್ತಿದೆ. ಮಿಶ್ರಪ್ರತಿಕ್ರಿಯೆ ನಡುವೆಯೂ ಸಿನಿಮಾ ಅಭಿಮಾನಿಗಳನ್ನು ಸೆಳೆಯುತ್ತಿದೆ. ಇನ್ನು 'ಕಾಫಿ ವಿತ್ ಕರಣ್' ಶೋನಲ್ಲಿ ವಿಜಯ್- ರಶ್ಮಿಕಾ ದಂಪತಿ ಭಾಗಿ ಆಗಿದ್ದರು. ಇಬ್ಬರಲ್ಲಿ ಯಾರು ಮೊದಲು ಪ್ರಪೋಸ್ ಮಾಡಿದ್ದು ಎನ್ನುವ ಪ್ರಶ್ನೆಗೆ ಇಬ್ಬರ ಉತ್ತರ ವೈರಲ್ ಆಗ್ತಿದೆ.
ನಾನು ಮದುವೆಗೆ ಹಿಂದಿನ ದಿನ ರಶ್ಮಿಕಾಗೆ ಪ್ರಪೋಸ್ ಮಾಡಿದ್ದೆ ಎಂದು ವಿಜಯ್ ಹೇಳಿದ್ದಾರೆ. ನಾನು ಮದುವೆ ಆಗುವಂತೆ ಒಂದು ವರ್ಷ ವಿಜಯ್ ಬಳಿ ಕೇಳುತ್ತಲೇ ಇದ್ದೆ ಎಂದು ರಶ್ಮಿಕಾ ತಿಳಿಸಿದ್ದಾರೆ. ಆ ವೀಡಿಯೋ ಸಖತ್ ವೈರಲ್ ಆಗ್ತಿದೆ. ಅಷ್ಟೆಲ್ಲಾ ಕಾಡಿಬೇಡುವಂಥದ್ದು ಏನಿತ್ತು ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. 'ಗೀತಾಗೋವಿಂದಂ' ಚಿತ್ರದಲ್ಲಿ ಮೊದಲ ಬಾರಿಗೆ ಇಬ್ಬರೂ ನಟಿಸಿದ್ದರು. ಆಗ ಶುರುವಾಗಿದ್ದ ಪರಿಚಯ ಬಳಿಕ ಸ್ನೇಹಕ್ಕೆ ತಿರುಗಿತ್ತು. ಇತ್ತ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮದುವೆ ಎಂಗೇಜ್‌ಮೆಂಟ್ ಸಹ ನಡೆದಿತ್ತು. ಆ ಸಿನಿಮಾ ಬಳಿಕ ಎಂಗೇಜ್‌ಮೆಂಟ್ ಮುರಿದುಬಿದ್ದಿತ್ತು.
'ಗೀತಾಗೋವಿಂದಂ' ಬಳಿಕ 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ಜೋಡಿ ಒಟ್ಟಿಗೆ ನಟಿಸಿತ್ತು. ಕೆಲ ದಿನಗಳಿಂದ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಗುಲ್ಲಾಗಿತ್ತು. ಆದರೆ ಇಬ್ಬರೂ ಅದನ್ನು ಒಪ್ಪಿಕೊಂಡಿರಲಿಲ್ಲ. ಆದರೆ ಈ ವರ್ಷ ಫೆಬ್ರವರಿಯಲ್ಲಿ ಮದುವೆ ಹಸೆಮಣೆ ಏರಿದ್ದರು. 'ಕಾಫಿ ವಿತ್ ಕರಣ್' ಶೋ ಪ್ರಪೋಸ್ ವಿಚಾರ ಪ್ರಸ್ತಾಪಿಸುತ್ತಿದ್ದಂತೆ "ನಾವು ಫೆಬ್ರವರಿಯಲ್ಲಿ ಮದುವೆ ಆಗಿದ್ದು. ಅದಕ್ಕೂ ಮುನ್ನ ಡಿಸೆಂಬರ್‌ನಲ್ಲಿ ಇಟಲಿಗೆ ಹೋಗಿದ್ದೆವು. ಅಲ್ಲೇ ಪ್ರಪೋಸ್ ಮಾಡಲು ಬಯಸಿದ್ದೆ. ಆದ್ರೆ ಸಾಧ್ಯವಾಗಲಿಲ್ಲ" ಎಂದಿದ್ದಾರೆ.
ರಶ್ಮಿಕಾ ನಾವಿಬ್ಬರೂ ಮದುವೆ ಆಗೋಣ ಅಂದಾಗ ನಾನು, "ಸರಿ, ನೀನು ಇದನ್ನು ನೂರಾರು ಬಾರಿ ಈಗಾಗಲೇ ಕೇಳಿದ್ದೀಯಾ" ಅಂದೆ.. "ನಾವು ಮದುವೆ ಆಗೋಣ" ಎಂದು ನಾನು ಒಂದು ವರ್ಷ ಕೇಳುತ್ತಲೇ ಇದ್ದೆ" ಎಂದು ರಶ್ಮಿಕಾ ಹೇಳಿದ್ದರು. "ಹಾಗಂತ ನಾನೇನು ಅಷ್ಟು ಕೆಟ್ಟವನಲ್ಲ" ಎಂದು ವಿಜಯ್ ವಿವರಿಸಿದ್ದಾರೆ. ನಮ್ಮ ಮದುವೆ ಸಂಗೀತ್ ಕಾರ್ಯಕ್ರಮದ ದಿನ ಸ್ನೇಹಿತರನ್ನೆಲ್ಲಾ ಕರೆದು ಅವ್ರ ಸಮ್ಮುಖದಲ್ಲಿ ಮೊಣಕಾಲುವೂರಿ ರಶ್ಮಿಕಾಗೆ ಪ್ರಪೋಸ್ ಮಾಡಿದ್ದೆ ಎಂದು ವಿಜಯ್ ವಿವರಿಸಿದ್ದಾರೆ.
Now she’ll have to hear “Rashmika forced me to marry her” for rest of her life.
— Priyanka Choudhary (@Priyank92678508) October 20, 2026
Love really makes women ignore the loudest red flags. 🚩 pic.twitter.com/UV4Q5EuHdH