ಎಲ್ಲೆಲ್ಲೂ ಬೆಳಕಿನ ಹಬ್ಬದ ಸಡಗರ ಸಂಭ್ರಮ ಕಳೆ ಕಟ್ಟಿದೆ. ಬಾಲಿವುಡ್ ಆದಿಯಾಗಿ ಎಲ್ಲಾ ಚಿತ್ರರಂಗದ ತಾರೆಯರ ಮನೆ ಮನಗಳಲ್ಲಿ ಹಬ್ಬದ ಸಂಭ್ರಮ ಮೂಡಿದೆ. ತಾರೆಯರು ಫ್ಯಾಮಿಲಿ ಜೊತೆ ಹಬ್ಬ ಆಚರಿಸಿ ಖುಷಿಪಡುತ್ತಿದ್ದಾರೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಂಪತಿ ಫ್ಯಾಮಿಲಿ ಜೊತೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ.

ಕಳೆದೆರಡು ದಿನಗಳಿಂದ ಜಪಾನ್‌ನಲ್ಲಿ ವಿಜಯ್ ಫ್ಯಾಮಿಲಿ ಬೀಡು ಬಿಟ್ಟಿದೆ. ಅತ್ತೆ, ಮಾವ ಹಾಗೂ ಮೈದುನನ ಹಾಗೂ ಪತಿ ಜೊತೆ ರಶ್ಮಿಕಾ ಅಲ್ಲಿನ ಸುಂದರ ತಾಣಗಳಲ್ಲಿ ವಿಹರಿಸುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮದುವೆಗೂ ಮುನ್ನ ವಿಜಯ್ ಮನೆಯಲ್ಲಿ ರಶ್ಮಿಕಾ ಹಬ್ಬಗಳನ್ನು ಆಚರಿಸುತ್ತಿದ್ದರು. ಒಮ್ಮೆ ವಿಜಯ್ ಫ್ಯಾಮಿಲಿ ಜೊತೆ ದುಬೈ ಪ್ರವಾಸ ಕೈಗೊಂಡಿದ್ದರು. ಆದರೆ ಅದನ್ನು ಗುಟ್ಟಾಗಿ ಇಟ್ಟಿದ್ದರು.

'ಡಿಯರ್ ಕಾಮ್ರೆಡ್' ಚಿತ್ರದ ಸಮಯದಿಂದ ವಿಜಯ್ ಫ್ಯಾಮಿಲಿ ಹಾಗೂ ಫ್ರೆಂಡ್ ಜೊತೆ ರಶ್ಮಿಕಾ ಬೆರತು ಹೋಗಿದ್ದರು. ಮದುವೆ ಬಳಿಕ ವಿಜಯ್ ಜೊತೆ ಬಡ್ಡಿಮೂನ್ ಪ್ರವಾಸಕ್ಕೆ ಥಾಯ್ಲೆಂಡ್‌ಗೆ ಹೋಗಿದ್ದರು. ವಿಜಯ್ ಕೆಲ ಸ್ನೇಹಿತರು ಸಾಥ್ ಕೊಟ್ಟಿದ್ದರು. ಮದುವೆ ನಂತರ ಫ್ಯಾಮಿಲಿ ಜೊತೆ ಇದು ಮೊದಲ ಪ್ರವಾಸ ಎನ್ನಲಾಗ್ತಿದೆ. "ಜಪಾನ್‌ನಲ್ಲಿ ದೀಪಾವಳಿಯ ಸಂಭ್ರಮದ ನಡುವೆ 'ಹೋಮ' (GOMA) ನೆರವೇರಿಸಲು ದಾರಿ ಕಂಡುಕೊಂಡಾಗ.. ದೇವರಕೊಂಡ ಕುಟುಂಬದ ವತಿಯಿಂದ ನಿಮಗೂ ಹಾಗೂ ನಿಮ್ಮೆಲ್ಲಾ ಕುಟುಂಬದವರಿಗೂ ಅಪಾರ ಪ್ರೀತಿ, ಆತ್ಮೀಯ ಅಪ್ಪುಗೆ ಮತ್ತು ದೀಪಾವಳಿ ಹಬ್ಬದ ಶುಭಾಶಯಗಳು" ಎಂದು ವಿಜಯ್ ದೇವರಕೊಂಡ ಟ್ವೀಟ್ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ ವೀಡಿಯೋ ಮಾಡಿ ದೀಪಾವಳಿ ಶುಭಾಶಯ ಕೋರಿದ್ದಾರೆ. ಇತ್ತೀಚೆಗೆ ಜೋಡಿ ಒಟ್ಟಿಗೆ ನಟಿಸಿದ್ದ 'ರಣಬಾಲಿ' ಸಿನಿಮಾ ತೆರೆಕಂಡಿತ್ತು. ಪ್ರೇಕ್ಷಕರಿಂದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. 'ಗೀತಗೋವಿಂದಂ', 'ಡಿಯರ್ ಕಾಮ್ರೆಡ್' ಬಳಿಕ ಇದು ಜೋಡಿಯ ಮೂರನೇ ಸಿನಿಮಾ.. ಮದುವೆ ನಂತರ ಜೋಡಿ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. 'ಮೈಸಾ' ಚಿತ್ರದ ಮೂಲಕ ರಶ್ಮಿಕಾ ಶೀಘ್ರದಲ್ಲೇ ಮತ್ತೆ ತೆರೆಮೇಲೆ ಬರ್ತಿದ್ದಾರೆ. ಮತ್ತಷ್ಟು ಇಂಟ್ರೆಸ್ಟಿಂಗ್ ಪ್ರಾಜೆಕ್ಟ್ಸ್ ಆಕೆಯ ಕೈಯಲ್ಲಿವೆ. ಇತ್ತೀಚೆಗೆ 'ಕಾಫಿ ವಿತ್ ಕರಣ್' ಶೋನಲ್ಲಿ ಜೋಡಿ ಭಾಗಿ ಆಗಿತ್ತು. ಇಬ್ಬರ ಕೆಲ ಹೇಳಿಕೆ ವಿವಾಹದ ಸ್ವರೂಪ ಪಡೆದಿತ್ತು.