'ರಾಮಾಯಣ' ಸಿನಿಮಾ ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರ ಭರ್ಜರಿ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ. ದೀಪಾವಳಿ ಹಬ್ಬದ ರಜೆ ಚಿತ್ರದ ಗಳಿಕೆಗೆ ವರವಾಗಿ ಪರಿಣಮಿಸಿತ್ತು. ವೀಕೆಂಡ್ ಜೊತೆ ಸೋಮವಾರ ಹಾಗೂ ಮಂಗಳವಾರ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಬುಧವಾರ ಕೂಡ ಗಳಿಕೆ ಚೆನ್ನಾಗಿತ್ತು.

ನಿರೀಕ್ಷಿತ ಮಟ್ಟದಲ್ಲಿ ಓಪನಿಂಗ್ ಸಿಗದೇ ಇದ್ದರೂ 'ರಾಮಾಯಣ' ಸಿನಿಮಾ ಬಳಿಕ ಒಳ್ಳೆ ಕಲೆಕ್ಷನ್ ಮಾಡಿ ಗಮನ ಸೆಳೆದಿದೆ. ಕರ್ನಾಟಕದಲ್ಲಿ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿರುವುದು ವಿಶೇಷ. ಕನ್ನಡದಲ್ಲೇ ಸಾಕಷ್ಟು ಜನ ಸಿನಿಮಾ ನೋಡಿ ಕೊಂಡಾಡುತ್ತಿದ್ದಾರೆ. ಫ್ಯಾಮಿಲಿ ಸಮೇತ ಜನ ಚಿತ್ರಮಂದಿರಗಳಿಗೆ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ.

ವಾರದ ಕಲೆಕ್ಷನ್

ವಿಶ್ವದಾದ್ಯಂತ ಮೊದಲ 7 ದಿನಕ್ಕೆ 'ರಾಮಾಯಣ' ಸಿನಿಮಾ 934.55 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿದೆ. ಇನ್ನೆರಡು ದಿನಗಳಲ್ಲಿ ಸಿನಿಮಾ 1000 ಕೋಟಿ ರೂ. ಗಡಿ ದಾಟುವ ನಿರೀಕ್ಷೆಯಿದೆ. ಇನ್ನು ಭಾರತದಲ್ಲೇ 500 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ಸಿನಿಮಾ ಸಂಚಲನ ಸೃಷ್ಟಿಸಿದೆ. ಬುಧವಾರ ಭಾರತದಲ್ಲಿ ಸಿನಿಮಾ 70 ಕೋಟಿ ರೂ. ಕೊಳ್ಳೆ ಹೊಡೆದು ದಾಖಲೆ ಬರೆದಿದೆ.

ಮಲಯಾಳಂ ರೆಸ್ಪಾನ್ಸ್

ಐದು ಭಾಷೆಗಳಲ್ಲಿ 'ರಾಮಾಯಣ' ಸಿನಿಮಾ ತೆರೆಗೆ ಬಂದಿದೆ. ಎಲ್ಲಾ ಭಾಷೆಗಳಲ್ಲೂ ಡಬ್ಬಿಂಗ್ ಸೊಗಸಾಗಿದೆ. ಎಐ ತಂತ್ರಜ್ಞಾನ ಬಳಸಿ ಆಯಾ ಭಾಷೆಯಲ್ಲಿ ಕಲಾವಿದರು ಮಾತನಾಡಿದಂತೆ ಲಿಪ್ ಸಿಂಕ್ ಮಾಡಲಾಗಿದೆ. ಮಲಯಾಳಂನಲ್ಲಿ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಗಲ್ಫ್ ದೇಶಗಳಲ್ಲಿ ಹೆಚ್ಚು ಜನ ಸಿನಿಮಾ ನೋಡಲು ಮುಗಿಬಿದ್ದಿರುವುದೇ ಇದೇ ಕಾರಣ ಎನ್ನಲಾಗ್ತಿದೆ.

ಕನ್ನಡ ವರ್ಷನ್ ದಾಖಲೆ

ಯಶ್ ಬಿಟ್ಟು ಬಹುತೇಕ ಹಿಂದಿ ಕಲಾವಿದರೇ 'ರಾಮಾಯಣ' ಚಿತ್ರದಲ್ಲಿ ನಟಿಸಿದ್ದಾರೆ. ಇದನ್ನು ಬಾಲಿವುಡ್ ಸಿನಿಮಾ ಎಂದೇ ಪರಿಗಣಿಸಲಾಗಿದೆ. ಆದರೂ ಕನ್ನಡ ವರ್ಷನ್ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. 7 ದಿನಕ್ಕೆ ಕನ್ನಡದಲ್ಲಿ 50 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿದೆ. ಡಬ್ಬಿಂಗ್ ಚಿತ್ರವೊಂದು ಕನ್ನಡದಲ್ಲಿ ಗಳಿಸಿರುವ ಅತಿಹೆಚ್ಚು ಮೊತ್ತ ಇದಾಗಿದೆ. ಕರ್ನಾಟಕದಲ್ಲಿ ಕನ್ನಡದಲ್ಲೇ ಜನ ಸಿನಿಮಾ ನೋಡಲು ಆಸಕ್ತಿ ತೋರಿಸಿದ್ದಾರೆ.

1200 ಕೋಟಿ ರೂ. ಬಜೆಟ್

'ರಾಮಾಯಣ' ಸಿನಿಮಾ ಲಾಭ ನೋಡಲು ಮತ್ತಷ್ಟು ದಿನ ಕಾಯಬೇಕಿದೆ. ಅಂದಾಜು 4000 ಕೋಟಿ ರೂ. ಬಜೆಟ್‌ನಲ್ಲಿ ಈ ಸರಣಿ ಸಿನಿಮಾಗಳನ್ನು ತೆರೆಗೆ ತರುತ್ತಿರುವುದಾಗಿ ನಮಿತ್ ಮಲ್ಹೋತ್ರಾ ಹೇಳಿದ್ದರು. ಮೊದಲ ಭಾಗಕ್ಕೆ 1200 ಕೋಟಿ ರೂ. ಬಜೆಟ್ ಎನ್ನಲಾಗ್ತಿದೆ. 934 ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದರೂ ನೆಟ್ ಕಲೆಕ್ಷನ್ 600-700 ಕೋಟಿ ರೂ. ಮಾತ್ರ ಎನ್ನಲಾಗ್ತಿದೆ. ಆ ಲೆಕ್ಕದಲ್ಲಿ ಸಿನಿಮಾ ಬಜೆಟ್ ಮೀರಿ ಲಾಭ ನೋಡಲು ಇನ್ನು ಸಾಕಷ್ಟು ಗಳಿಕೆ ಕಾಣಬೇಕಿದೆ.