ಎಲ್ಲೆಲ್ಲೂ 'ರಾಮಾಯಣ' ಸಿನಿಮಾ ಬಗ್ಗೆ ಟಾಕ್ ನಡೀತಿದೆ. ಬಾಕ್ಸಾಫೀಸ್ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿದೆ. ಸರಿ ತಪ್ಪುಗಳ ಲೆಕ್ಕಾಚಾರದ ನಡುವೆ ಸಿನಿಮಾ 1000 ಕೋಟಿ ಕಲೆಕ್ಷನ್ ಕಡೆ ದಾಪುಗಾಲು ಇಟ್ಟಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಸಿನಿಮಾ ಕಲೆಕ್ಷನ್ 800 ಕೋಟಿ ದಾಟಿದೆ.
ಮೌತ್ ಟಾಕ್ 'ರಾಮಾಯಣ' ಚಿತ್ರಕ್ಕೆ ವರವಾಗಿದೆ. ಪ್ರೇಕ್ಷಕರೇ ಸಿನಿಮಾವನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವ ಪ್ರಯತ್ನ ಮಾಡ್ತಿದ್ದಾರೆ. ಫ್ಯಾಮಿಲಿ ಸಮೇತ ಬಂದು ಜನ ಸಿನಿಮಾ ನೋಡ್ತಿದ್ದಾರೆ. ತ್ರೀಡಿ, ಐಮ್ಯಾಕ್ಸ್ ವರ್ಷನ್ಗಳಲ್ಲಿ ದೃಶ್ಯವೈಭವ ಕಂಡು ಬೆರಗಾಗುತ್ತಿದ್ದಾರೆ. ಸಿನಿಮಾ ಕ್ರೇಜ್ ಹೇಗಿದೆ ಅಂದ್ರೆ 6ನೇ ದಿನ ಉತ್ತರ ಭಾರತದಲ್ಲಿ ಸಿನಿಮಾ ಮಧ್ಯರಾತ್ರಿ ಶೋಗಳಿಗೆ ಬೇಡಿಕೆ ಬಂದಿತ್ತು.
6 ದಿನದ ಕಲೆಕ್ಷನ್
5ನೇ ದಿನ(ಸೋಮವಾರ) ಹಾಗೂ 6ನೇ ದಿನ(ಮಂಗಳವಾರ) 'ರಾಮಾಯಣ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದೆ. ದೀಪಾವಳಿ ಹಬ್ಬದ ರಜೆಗೆ ಜನ ಮುಗಿಬಿದ್ದು ಸಿನಿಮಾ ನೋಡಿದ್ದಾರೆ. ಎಲ್ಲೆಲ್ಲೂ ಹೌಸ್ಫುಲ್ ಪ್ರದರ್ಶನ ಕಂಡು ಗಳಿಕೆ ಹೆಚ್ಚಾಗಿದೆ. ಮೊದಲ 6 ದಿನಕ್ಕೆ 823 ಕೋಟಿ ರೂ. ಕೊಳ್ಳೆ ಹೊಡೆದು ಸಿನಿಮಾ ಸಂಚಲನ ಸೃಷ್ಟಿಸಿದೆ. ಮಂಗಳವಾರ ಸಿನಿಮಾ 94 ಕೋಟಿ ರೂ. ಬಾಚಿಕೊಂಡಿದೆ.
ಮಧ್ಯರಾತ್ರಿ ಶೋ
ಕರ್ನಾಟಕದಲ್ಲೇ 'ರಾಮಾಯಣ' ಸಿನಿಮಾ ಗಳಿಕೆ ಚೆನ್ನಾಗಿದೆ. ಇನ್ನುಳಿದಂತೆ ಉತ್ತರ ಭಾರತದ ಕೆಲವೆಡೆ ಕ್ರೇಜ್ ಜೋರಾಗಿದೆ. ಅಹಮದಾಬಾದ್ನಲ್ಲಿ 6ನೇ ದಿನ ಮಧ್ಯರಾತ್ರಿ ಶೋಗಳಿಗೆ ಡಿಮ್ಯಾಂಡ್ ಶುರುವಾಗಿದೆ. ಅಷ್ಟರಮಟ್ಟಿಗೆ ಸಿನಿಮಾ ಅಲ್ಲಿ ಸದ್ದು ಮಾಡ್ತಿದೆ. ಭಾರತದಲ್ಲಿ ಮಾತ್ರ ಈ ಸಿನಿಮಾ 440.45 ಕೋಟಿ ರೂ. ನೆಟ್ ಕಲೆಕ್ಷನ್ ಜೊತೆಗೆ ₹526.50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ Sacnilk ವೆಬ್ ಸೈಟ್ ವರದಿ ಮಾಡಿದೆ.
ಓವರ್ಸೀಸ್ ಕಲೆಕ್ಷನ್
ಗ್ಲೋಬಲ್ ಮಟ್ಟದಲ್ಲಿ 'ರಾಮಾಯಣ' ಸಿನಿಮಾ ತೆರೆಗಪ್ಪಳಿಸಿದೆ. ವಿದೇಶಗಳಲ್ಲಿ ಕೂಡ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. 297 ಕೋಟಿ ರೂ. ಓವರ್ಸೀಸ್ ಮಾರ್ಕೆಟ್ ಪಾಲು ಎಂದು ಹೇಳಲಾಗ್ತಿದೆ. ಅಂದಾಜು 1200 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಶೀಘ್ರದಲ್ಲೇ ಲಾಭದತ್ತ ಸಿನಿಮಾ ಸಾಗುವ ನಿರೀಕ್ಷೆಯಿದೆ.