ತೆಲುಗು ನಟ ಮಹೇಶ್ ಬಾಬು ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗ್ತಿದ್ದಾರೆ. ರಾಜಮೌಳಿ ನಿರ್ದೇಶನದ 'ವಾರಣಾಸಿ' ಸಿನಿಮಾ ಅಂತರಾಷ್ಟ್ರೀಯಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗ್ತಿದೆ. ಚಿತ್ರದಲ್ಲಿ ಹೀರೊ ಆಗಿ ಮಹೇಶ್ ಬಾಬು ಬಣ್ಣ ಹಚ್ಚಿದ್ದಾರೆ. ಚಿತ್ರೀಕರಣ ಭರದಿಂದ ಸಾಗ್ತಿದೆ. ಇದೆಲ್ಲದರ ನಡುವೆ ಮಹೇಶ್ ಬಾಬು ಹೊಸ ಫೋಟೊ ವೈರಲ್ ಆಗ್ತಿದೆ.
ರಾಜಮೌಳಿ ಪುತ್ರ ಎಸ್.ಎಸ್ ಕಾರ್ತಿಕೇಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಮಹೇಶ್ ಬಾಬು ಫೋಟೊ ಹಂಚಿಕೊಂಡಿದ್ದಾರೆ. ಕಾರ್ತಿಕೇಯ ಜೊತೆ ಮಾತನಾಡುತ್ತಿರುವ ಫೋಟೊ ಅದಾಗಿದ್ದು ಕಾಲ್ ಮೇಲೆ ಕಾಲ್ ಆಗಿ ಮಹೇಶ್ ಬಾಬು ಕೂತಿದ್ದಾರೆ. ಸರಿಯಾಗಿ ಗಮನಿಸಿದರೆ ಅವರ ಕಾಲುಗಳು ಒಣಗಿ ಸಣ್ಣಗಾಗಿವೆ. ಅಯ್ಯೋ ಫಿಟ್ನೆಸ್ ಹೆಸರಿನಲ್ಲಿ ಡಯೆಟ್ ಮಾಡಿ ಇಷ್ಟು ಸಣ್ಣ ಆಗಿಬಿಟ್ಟಿದ್ದೀರಾ? ಬೇಡ ಬಾಸ್ ? ಸ್ವಲ್ಪ ಏನಾದ್ರು ತಿನ್ನಿ ನೋಡೋಕೆ ಆಗ್ತಿಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡ್ತಿದ್ದಾರೆ.
ಮಹೇಶ್‌ಬಾಬು ಫಿಟ್ನೆಸ್ ಫ್ರೀಕ್.. ಪ್ರತಿದಿನ ಕಸರತ್ತು ತಪ್ಪಿಸುವುದಿಲ್ಲ. ಆಗಾಗ್ಗೆ ಅವರ ಜಿಮ್ ವರ್ಕೌಟ್ ವೀಡಿಯೋ ವೈರಲ್ ಆಗುತ್ತದೆ. 'ವಾರಣಾಸಿ' ಚಿತ್ರಕ್ಕಾಗಿ ವಿಶೇಷವಾಗಿ ವರ್ಕೌಟ್ ಮಾಡಿ ದೇಹ ಹುರಿಗೊಳಿಸಿದ್ದರು. ಅದಕ್ಕಾಗಿ ವಿದೇಶಕ್ಕೆ ಹೋಗಿ ವಿಶೇಷ ತರಬೇತಿ ಪಡೆದಿದ್ದರು. ಚಿತ್ರದ ಕೆಲ ಮೇಕಿಂಗ್ ಫೋಟೊಗಳಲ್ಲಿ ಹುರಿಗಟ್ಟಿದ ಸ್ನಾಯುಗಳನ್ನು ಪ್ರದರ್ಶಿಸಿ ಖಡಕ್ ಅವತಾರದಲ್ಲಿ ಟಾಲಿವುಡ್ ಪ್ರಿನ್ಸ್ ಕಾಣಿಸಿಕೊಂಡಿದ್ದರು. ಆದರೆ ಈ ಫೋಟೊದಲ್ಲಿ ಅವರನ್ನು ನೋಡೋಕೆ ಆಗ್ತಿಲ್ಲ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ.
ದೇಶ ವಿದೇಶಗಳ ಭಾಷೆಗಳಲ್ಲಿ 'ವಾರಣಾಸಿ' ಸಿನಿಮಾ ಏಪ್ರಿಲ್ 7ರಂದು ತೆರೆಗೆ ಬರ್ತಿದೆ. ಐಮ್ಯಾಕ್ಸ್ ಸ್ಕ್ರೀನ್‌ಗಾಗಿ ಸಿನಿಮಾ ಕಟ್ಟಿಕೊಡಲಾಗ್ತಿದೆ. ಪ್ರಿಯಾಂಕ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗ್ತಿದ್ದು ಕೆ.ಎಲ್ ನಾರಾಯಣ ಜೊತೆ ಸೇರಿ ರಾಜಮೌಳಿ ಮಗ ಕಾರ್ತಿಕೇಯ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. ಸಿನಿಮಾ ಬಜೆಟ್ ಸಾವಿರ ಕೋಟಿ ರೂ.ಗೂ ಹೆಚ್ಚು ಅನ್ನಲಾಗ್ತಿದೆ.
Happy Birthday Karth…. 🤗🤗🤗 Here's to bigger dreams, bigger wins and a year that gives back everything you put in…. Always rooting for you!!! ♥️♥️♥️ @ssk1122 pic.twitter.com/HWvF4M8IEQ
— Mahesh Babu (@urstrulyMahesh) November 22, 2026