ನೆಲ್ಸನ್ ನಿರ್ದೇಶನದಲ್ಲಿ ರಜನಿಕಾಂತ್ ನಟನೆಯ 'ಜೈಲರ್'- 2 ಓಟಿಟಿ ಸ್ಟ್ರೀಮಿಂಗ್ ಖಚಿತವಾಗಿದೆ. 1000 ಕೋಟಿ ರೂ. ಬಾಕ್ಸಾಫೀಸ್ ಕಲೆಕ್ಷನ್ ಲೆಕ್ಕಾಚಾರ ಸುಳ್ಳಾಗಿದೆ. ಅಂದಾಜು 160 ಕೋಟಿ ರೂ.ಗೆ ಅಮೇಜಾನ್ ಪ್ರೈಂ ವೀಡಿಯೋ ಸಿನಿಮಾ ರೈಟ್ಸ್ ಕೊಂಡುಕೊಂಡಿದೆ ಎನ್ನಲಾಗ್ತಿದೆ. ಬಾಕ್ಸಾಫೀಸ್ನಲ್ಲಿ ಸಿನಿಮಾ 800 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ.
3 ವರ್ಷಗಳ ಹಿಂದೆ ಬಂದಿದ್ದ 'ಜೈಲರ್' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಹಾಗಾಗಿ ಅದೇ ಕಾಂಬಿನೇಷನ್ನಲ್ಲಿ ಕಥೆಯನ್ನು ಮುಂದುವರೆಸಿ ಗೆದ್ದಿದೆ ಚಿತ್ರತಂಡ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿತ್ತು. ಅನಿರುದ್ಧ್ ಸಂಗೀತದಲ್ಲಿ ಸಾಂಗ್ಸ್ ಅಷ್ಟಾಗಿ ಸದ್ದು ಮಾಡಿದಿದ್ದರೂ ಬಿಜಿಎಂ ಚಿತ್ರಕ್ಕೆ ಪ್ಲಸ್ ಆಗಿದೆ. ಇನ್ನು ಶಿವರಾಜ್ಕುಮಾರ್, ಮೋಹನ್ ಲಾಲ್ ಹಾಗೂ ಹೃತಿಕ್ ರೋಷನ್ ಗೆಸ್ಟ್ ಅಪಿಯರೆನ್ಸ್ ಚಿತ್ರಕ್ಕೆ ಹೆಚ್ಚಿನ ಬಲ ತುಂಬಿತ್ತು.
ಓಟಿಟಿ ಅಪ್ಡೇಟ್
ನಿರೀಕ್ಷೆ ಮಾಡಿದಂತೆ ನವೆಂಬರ್ 12ರಂದು 'ಜೈಲರ್'- 2 ಓಟಿಟಿಗೆ ಬರ್ತಿದೆ. ಅಧಿಕೃತವಾಗಿ ಪ್ರೈಂ ವೀಡಿಯೋ ಈ ಬಗ್ಗೆ ಮಾಹಿತಿ ನೀಡಿದೆ. ತಮಿಳು, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಹಿಂದಿಯಲ್ಲಿ ಎರಡು ತಿಂಗಳ ಬಳಿಕ ಓಟಿಟಿ ಸ್ಟ್ರೀಮಿಂಗ್ ನಿಯಮವಿದೆ. ಇದನ್ನು ಚಿತ್ರತಂಡ ಒಪ್ಪಲಿಲ್ಲ. ಹಾಗಾಗಿ ಉತ್ತರಭಾರತದಲ್ಲಿ ಪಿವಿಆರ್ ಹಾಗೂ ಐನಾಕ್ಸ್ ಸಿನಿಮಾ ಬಿಡುಗಡೆಗೆ ಹಿಂದೇಟು ಹಾಕಿತ್ತು.
1000 ಕೋಟಿ ರೂ. ಗುರಿ
ತಮಿಳಿನಲ್ಲಿ ಈವರೆಗೆ ಯಾವುದೇ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡಿಲ್ಲ. ಈ ಸಾಧನೆಯನ್ನು 'ಜೈಲರ್'- 2 ಸಿನಿಮಾ ಮಾಡಬಹುದು ಎಂದು ಕೆಲವರು ಭಾವಿಸಿದ್ದರು. ಆದರೆ ಆ ನಿರೀಕ್ಷೆ ಸುಳ್ಳಾಗಿದೆ. ಉತ್ತರ ಭಾರತದಲ್ಲಿ ಸಿನಿಮಾ ಬಿಡುಗಡೆ ಆಗದೇ ಇರುವುದೇ ಇದಕ್ಕೆ ಕಾರಣ. ಸದ್ಯ ವಿಶ್ವದಾದ್ಯಂತ 800 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ಸಿನಿಮಾ ಗಮನ ಸೆಳೆದಿದೆ. ದೀಪಾವಳಿ ವೀಕೆಂಡ್ ಒಳ್ಳೆ ಗಳಿಕೆ ಲೆಕ್ಕಾಚಾರ ಶುರುವಾಗಿದೆ. ಇನ್ನು ತಮಿಳುನಾಡಿನಲ್ಲೇ 200 ಕೋಟಿ ರೂ. ಕಲೆಕ್ಷನ್ ಮಾಡಿರುವ ಅಂದಾಜಿದೆ.
ರಜನಿಕಾಂತ್ ದರ್ಬಾರ್
ವಯಸ್ಸು 75 ದಾಟಿದ್ರು, ರಜನಿಕಾಂತ್ ಕ್ರೇಜ್ ಕಮ್ಮಿ ಆಗಿಲ್ಲ. ಈ ವಯಸ್ಸಲ್ಲೂ 800 ಕೋಟಿ ರೂ. ಕಲೆಕ್ಷನ್ ತಮಾಷೆ ಮಾತಲ್ಲ. ಆಕ್ಷನ್ ಮಾಡದೇ, ಡ್ಯಾನ್ಸ್ ಮಾಡದೇ ಬರೀ ತಮ್ಮ ಡೈಲಾಗ್ ಹಾಗೂ ಸ್ಟೈಲ್ ಮೂಲಕ ತಲೈವಾ ಗೆದ್ದಿದ್ದಾರೆ.
TIGER MUTHUVEL PANDIAN is back. RELOADED 🔥#Jailer2OnPrime, Nov 12@rajinikanth @Nelsondilpkumar @anirudhofficial @Mohanlal @vidya_balan @sunpictures @iam_SJSuryah #MithunChakraborty #SurajVenjaramoodu @meramyakrishnan @iYogiBabu pic.twitter.com/AgpP66EEwT
— prime video IN (@PrimeVideoIN) November 5, 2026