ಎಲ್ಲೆಡೆ ದೀಪಾವಳಿ ಸಡಗರ ಮನೆ ಮಾಡಿದೆ. ಬಿಗ್ಬಾಸ್ ಮನೆಯಲ್ಲಿ ಕೂಡ ಬೆಳಕಿನ ಹಬ್ಬದ ಸಂಭ್ರಮ ಶುರುವಾಗಿದೆ. ಇದೇ ಹೊತ್ತಲ್ಲಿ ಮನೆ ಮಂದಿಗೆ ಬಿಗ್ಬಾಸ್ ಅಚ್ಚರಿಯ ಸರ್ಪ್ರೈಸ್ ಕೊಟ್ಟಿದ್ದಾರೆ. ಮಾಡ್ರನ್ ಮಹಾಕವಿ ಮಂಜ ರೀಎಂಟ್ರಿ ಕೊಟ್ಟಿದ್ದಾರೆ.
ನಿಯಮ ಉಲ್ಲಂಘನೆ ಮತ್ತು ಅಶ್ಲೀಲ ಭಾಷೆಯ ಬಳಕೆಯಿಂದಾಗಿ ರೆಡ್ ಕಾರ್ಡ್ ಪಡೆದು ಮಂಜ ಎಲಿಮಿನೇಟ್ ಆಗಿ ಹೊರ ಬಂದಿದ್ದರು. ಅಕ್ಟೋಬರ್ 11, 2026 ರಂದು ಮನೆಯಿಂದ ಹೊರಗೆ ಬಂದಿದ್ದ ಮಂಜ ಇವತ್ತು(ನವೆಂಬರ್ 8) ಮತ್ತೆ ವಾಪಸ್ ಮನೆ ಒಳಗೆ ಹೋಗಿದ್ದಾರೆ. ಕಿಚ್ಚ ಸುದೀಪ್ ವೀಕೆಂಡ್ ಎಪಿಸೋಡ್ನಲ್ಲಿ ಸ್ವತಃ ಮಂಜನನ್ನು ಬರಮಾಡಿಕೊಂಡು ಮನೆ ಒಳಗೆ ಕಳುಹಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ವೈರಲ್ ಆಗ್ತಿದೆ.
ಬಿಗ್ಬಾಸ್ ಸ್ಪರ್ಧಿಗಳಿಗೆ ದೀಪಾವಳಿ ವಿಶೇಷವಾಗಿ ಸ್ವೀಟ್ ಜೊತೆ ಸ್ವಲ್ಪ ಖಾರ ಕಳಿಸೋಣ ಎಂದು ಮಂಜನನ್ನು ಸುದೀಪ್ ವೇದಿಕೆಗೆ ಬರಮಾಡಿಕೊಂಡಿದ್ದಾರೆ. "ಮಾಡಿದ ತಪ್ಪಿಗೆ ನನ್ನ ಒಪ್ಪಿಗೆಯಿದೆ. ಈ ಸಲ ನನ್ನ ಕಣ್ಣು ಬಿಗ್ಬಾಸ್ ಕಪ್ಪಿಗೆ ಅಣ್ಣ" ಎಂದು ಮಂಜು ತನ್ನದೇ ಸ್ಟೈಲ್ನಲ್ಲಿ ಡೈಲಾಗ್ ಹೊಡೆದಿದ್ದಾರೆ. ಒಳಗೆ ಹೋಗಿ ಏನೆಲ್ಲಾ ಮಾಡ್ತೀರಾ ಎನ್ನುವ ಪ್ರಶ್ನೆಗೆ "ದೀಪಾವಳಿಗೆ ಕಳಿಸ್ತಿದ್ದೀರಾ ಅಣ್ಣ, ಪಟಾಕಿ ಎಲ್ಲಾ ರೆಡಿ ಮಾಡಿ ಇಟ್ಕೊಂಡಿದ್ದಾರೆ. ಅಂಟಿಸಿಬಿಡ್ತೀನಿ" ಎನ್ನುವ ಮಂಜನ ಡೈಲಾಗ್ ವೈರಲ್ ಆಗ್ತಿದೆ.
ಕಾಮನ್ಮ್ಯಾನ್ ಕೋಟಾದಲ್ಲಿ ಅಗ್ನಿ ಪರೀಕ್ಷೆ ಎದುರಿಸಿ ಮಂಜ ದೊಡ್ಮನೆ ಒಳಗೆ ಹೋಗಿದ್ದರು. ಅಬ್ಬರದ ಆಟದ ಮೂಲಕ ವೀಕ್ಷಕರ ಮನಗೆದ್ದಿದ್ದರು. ಮನೆ ಸದಸ್ಯರ ವೈಯಕ್ತಿಕ ವಿಚಾರಗಳನ್ನಿಟ್ಟುಕೊಂಡು ನಿಂದಿಸಿ ಎಡವಟ್ಟು ಮಾಡಿಕೊಂಡಿದ್ದರು. ಅಸಭ್ಯ ಪದ ಬಳಕೆ ಮಾಡಿದ್ದರು. ಎಷ್ಟೇ ಎಚ್ಚರಿಕೆ ಕೊಟ್ಟರೂ ತಿದ್ದಿಕೊಳ್ಳದೇ ಇದ್ದಾಗ ಎಲಿಮಿನೇಷನ್ ಶಿಕ್ಷೆ ಕೊಡಲಾಗಿತ್ತು. ಮಂಜ ಎಲಿಮಿನೇಟ್ ಆಗಿದ್ದನ್ನು ಯಶಸ್ ಸೆಲೆಬ್ರೇಟ್ ಮಾಡಿದ್ದರು.
ಈಗಾಗಲೇ ಬಿಗ್ಬಾಸ್ ಕನ್ನಡ ಸೀಸನ್ 13 ಶೋ 60 ದಿನ ಪೂರೈಸಿ ಮುಂದುವರೆಯುತ್ತಿದೆ. ಕಳೆದ ವಾರ ಕುಮಾರಿ ಎಲಿಮಿನೇಟ್ ಆಗಿದ್ದರು. ಈ ವಾರ ದೀಪಾವಳಿ ಹಿನ್ನಡೆಲೆ ಎಲಿಮಿನೇಷನ್ ಇಲ್ಲ ಎನ್ನಲಾಗ್ತಿದೆ. ಸೌಂದರ್ಯ ಶೆಟ್ಟಿ ಶೋನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.
ದೀಪಾವಳಿ mode on!
— Colors Kannada (@ColorsKannada) November 8, 2026
Super Sunday With ಬಾದ್ಷಾ ಸುದೀಪ | ಇಂದು ರಾತ್ರಿ 9
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo pic.twitter.com/2uxYIvOXA4