ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಮದುವೆ ನಿಶ್ಚಯವಾಗಿದೆ ಎಂದು ಗುಲ್ಲಾಗಿದೆ. ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಸದ್ದಿಲ್ಲದೇ ಮದುವೆ ತಯಾರಿ ನಡೀತಿದ್ದು ಈಗಾಗಲೇ ಅತಿಥಿಗಳಿಗೆ ಆಮಂತ್ರಣ ನೀಡುತ್ತಿದ್ದಾರೆ ಎನ್ನಲಾಗ್ತಿದೆ.
ಕಾವ್ಯಾ ಮಾರನ್ ತಂದೆ ಕಲೈನಿಧಿ ಮಾರನ್ ಇತ್ತೀಚೆಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದಾರೆ. ಮಗಳು ಕಾವ್ಯಾ ಮದುವೆಗೆ ಅವರನ್ನು ಆಹ್ವಾನಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ರಜನಿಕಾಂತ್ ನಟನೆಯ 'ಜೈಲರ್-2' ಸಿನಿಮಾ ಸಖತ್ ಸದ್ದು ಮಾಡ್ತಿದೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲೈನಿಧಿ ಮಾರನ್ ನಿರ್ಮಾಣ ಮಾಡಿದ್ದಾರೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಅನಿ ಬಿಜಿಎಂ ಚಿತ್ರಕ್ಕೆ ಪ್ಲಸ್ ಆಗಿದೆ.
ರಜನಿಕಾಂತ್ ಕುಟುಂಬಕ್ಕೂ ಅನಿರುದ್ದ್ ರವಿಚಂದರ್ ದೂರದ ಸಂಬಂಧಿ. ಹಾಗಾಗಿ ಸ್ವತಃ ತಲೈವಾ ಮುಂದೆ ನಿಂತು ಇಬ್ಬರ ಮದುವೆ ಮಾಡಿಸುತ್ತಿದ್ದಾರೆ ಎನ್ನುವ ಮಾತುಗಳು ಸಹ ಕೇಳಿಬಂದಿತ್ತು. ಚೆನ್ನೈನಲ್ಲಿ ನವೆಂಬರ್ 21ರಂದು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡದ ಮಾಲಕಿ ಕಾವ್ಯಾ ಮಾರನ್ ಮದುವೆ ಆರತಕ್ಷತೆ ಕಾರ್ಯಕ್ರಮ ನಡೆಯುತ್ತದೆ ಎನ್ನಲಾಗ್ತಿದೆ. ದೇಶದ ಗಣ್ಯಾತಿಗಣ್ಯರು ಈ ಸಂಭ್ರಮದಲ್ಲಿ ಭಾಗಿ ಆಗುತ್ತಾರೆ ಎನ್ನಲಾಗ್ತಿದೆ.
ಹೈದರಾಬಾದ್ ಜುಬಿಲಿ ಹಿಲ್ಸ್ನಲ್ಲಿರುವ ನಿವಾಸದಲ್ಲಿ ಸಿಎಂ ರೇವಂತ್ ರೆಡ್ಡಿ ಮತ್ತು ಅವರ ಪತ್ನಿಯನ್ನು ಕಲಾನಿಧಿ ಮಾರನ್ ಹಾಗೂ ಅವರ ಪತ್ನಿ ಭೇಟಿ ಮಾಡಿದ್ದಾರೆ. ಮಗಳ ಮದುವೆಗೆ ಆಹ್ವಾನ ನೀಡಿದ್ದಾರೆ ಎಂದು ವರದಿಯಾಗಿದೆ. ನವೆಂಬರ್ 11ರಂದು ಗ್ರೀಸ್ ದೇಶದಲ್ಲಿ ಕೆಲವೇ ಆಪ್ತರ ಸಮ್ಮುಖದಲ್ಲಿ ಮದುವೆ ನಡೆಯುತ್ತದೆ ಎನ್ನಲಾಗ್ತಿದೆ. ರಜನಿಕಾಂತ್ ಸೇರಿದಂತೆ ಕೆಲವೇ ಸ್ನೇಹಿತರು, ಕುಟುಂಬಸ್ಥರು ಈ ಸಂಭ್ರಮದಲ್ಲಿ ಭಾಗಿ ಆಗುವ ನಿರೀಕ್ಷೆಯಿದೆ. ಆ ಬಳಿಕ ಚೆನ್ನೈನಲ್ಲಿ ರಿಸೆಪ್ಷನ್ ಪಾರ್ಟಿ ಎಂದು ಹೇಳಲಾಗ್ತಿದೆ.
ಅನಿರುದ್ಧ್ ಹಾಗೂ ಕಾವ್ಯಾ ಮದುವೆ ವದಂತಿ ಹೊಸದೇನಲ್ಲ. ಈ ಹಿಂದೆ ಇಬ್ಬರೂ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದರು. ಇದೆಲ್ಲಾ ಸುಳ್ಳು ವದಂತಿ ಎನ್ನುವಂತೆ ಮಾತನಾಡಿದ್ದರು. ಆದರೆ ನ್ಯೂಯಾರ್ಕ್ನಲ್ಲಿ ಇಬ್ಬರೂ ಒಟ್ಟಿಗೆ ಸುತ್ತಾಡುತ್ತಿರುವ ಫೋಟೊಗಳು ವೈರಲ್ ಆಗಿತ್ತು. ಆಗ ಇಬ್ಬರ ಡೇಟಿಂಗ್ ಬಗ್ಗೆ ಗುಸುಗುಸು ಮತ್ತಷ್ಟು ಹೆಚ್ಚಾಗಿತ್ತು. ಅಂತಿಮವಾಗಿ ಇಬ್ಬರ ಮದುವೆ ಆರತಕ್ಷತೆ ಫಿಕ್ಸ್ ಆಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.
Sun Group Chairman Kalanithi Maran and Wife Invite CM Revanth Reddy to Daughter Kavya Maran - Anirudh Wedding Reception@anirudhofficial @sungroupwp pic.twitter.com/NCUSGpc5Kk
— Congress Voice (@CongressVoiceIN) October 16, 2026