ಈ ಬಾರಿ ಬಿಗ್ಬಾಸ್ ಮನೆಗೆ ನಟಿ ಸೋನಿಕಾ ಗೌಡ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ. ಬಹಳ ಸಿಂಪಲ್ ಆಗಿ ಮನೆಯಲ್ಲಿ ಒಳ್ಳೆ ಆಟದ ಮೂಲಕ ಆಕೆ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ. ತಮ್ಮತನವನ್ನು ದೊಡ್ಮನೆಯಲ್ಲಿ ಕೂಡ ಮುಂದುವರೆಸಿದ್ದಾರೆ. ಶ್ರೀಮಂತ ಕುಟುಂಬದ ಹಿನ್ನೆಲೆ ಇರುವ ಸೋನಿಕಾ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ಸಂಗತಿ ಇಲ್ಲಿದೆ.
ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ ಬಳಿಕ ಬ್ಯುಸಿನೆಸ್ ಕಡೆ ಸೋನಿಕಾ ಗೌಡ ಮುಖ ಮಾಡಿದ್ದಾರೆ. ALEMARI AMITH ಯೂಟ್ಯೂಬ್ ಚಾನಲ್ನಲ್ಲಿ ಸೋನಿಕಾ ಗೌಡ ಮನೆ ಹೋಂ ಟೂರ್ ಮಾಡಲಾಗಿದೆ. ಅದಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸೋನಿಕಾ ಅವರ ತಾಯಿ ರೂಪ ತಮ್ಮ ನಾಲ್ಕು ಅಂತಸ್ತಿನ ಐಷಾರಾಮಿ ಮನೆಯ ಪರಿಚಯ ಮಾಡಿಸಿದ್ದಾರೆ. ದೊಡ್ಮನೆ ಒಳಗೆ ಇರುವಂತೆ ಮನೆಯಲ್ಲಿ ಕೂಡ ಮಗಳು ಸೈಲೆಂಟ್ ಎಂದು ಮಾಹಿತಿ ನೀಡಿದ್ದಾರೆ.
ಎರಡ್ಮೂರು ವರ್ಷಗಳಿಂದ ಈ ಮನೆಯಲ್ಲಿ ಇದ್ದೀವಿ. ಮನೆಯ ಕಂಪ್ಲೀಟ್ ಪ್ಲ್ಯಾನ್, ಒಳಾಂಗಣ ವಿನ್ಯಾಸ ಎಲ್ಲವೂ ಸೋನಿಕಾ ಇಷ್ಟದಂತೆ ಮಾಡಲಾಗಿದೆ. ಆಕೆ ಬಹಳ ಚೂಸಿ, ತನಗೆ ಹೇಗೆ ಬೇಕೋ ಆ ರೀತಿ ಇರ್ತಾಳೆ. ಅಡುಗೆ ಮಾಡಲ್ಲ, ಕಿಚನ್ಗೆ ಬರಲ್ಲ. ಬಿಗ್ಬಾಸ್ ಮನೆಯಲ್ಲಿ ಬೇರೆ ಕೆಲಸ ಕೊಡ್ತಾರೆ ಅಂತ ಕಿಚನ್ ಅಲ್ಲಿ ಇರ್ತಾಳೆ ಅನ್ನಿಸುತ್ತೆ ಎಂದಿದ್ದಾರೆ. ಸೋನಿಕಾ ತಂದೆ ಅವರದ್ದು ಎಕ್ಸ್ಪೋರ್ಟ್ ಬ್ಯುಸಿನೆಸ್. ನಮ್ಮದು ಸಲೂನ್ ಇದೆ. ಸಿಕ್ಕಾಪಟ್ಟೆ ಶಾಪಿಂಗ್ ಮಾಡ್ತಾಳೆ.. ಥರ್ಡ್ ಫ್ಲೋರ್ ಪೂರ್ತಿ ಅವಳದ್ದೇ.. ಮೂರು ಲಕ್ಷದ ಹ್ಯಾಂಡ್ಬ್ಯಾಗ್ ಕೂಡ ಇದೆ ಎಂದು ತೋರಿಸಿದ್ದಾರೆ.
ಸಾಕು ನಾಯಿ ಚೂಟು ಅಂದ್ರೆ ಸೋನಿಕಾಗೆ ಬಹಳ ಇಷ್ಟ. ಬಿಗ್ಬಾಸ್ ಮನೆಯಲ್ಲಿ ನನ್ನನ್ನು ಮಿಸ್ ಮಾಡಿಕೊಳ್ತಾಳೋ ಇಲ್ವೊ, ನಾಯಿಯನ್ನು ಮಿಸ್ ಮಾಡಿಕೊಳ್ತಾಳೆ ಎಂದು ಸೋನಿಕಾ ತಾಯಿ ರೂಪ ವಿವರಿಸಿದ್ದಾರೆ. ಬಟ್ಟೆ, ಬ್ಯಾಗ್, ಚಪ್ಪಲ್ ಹುಚ್ಚು ಜಾಸ್ತಿ. ಸಾಕಷ್ಟು ಬಟ್ಟೆ ತಗೊಂಡು ಹೋಗಿದ್ದಾಳೆ. ವೀಕೆಂಡ್ ನಾವು ಒಂದಷ್ಟು ಕೊಟ್ಟು ಕಳುಹಿಸುತ್ತೇವೆ. 'ಶತಾಯ ಗತಾಯ' ಸೋನಿಕಾ ನಟಿಸಿದ ಮೊದಲ ಸಿನಿಮಾ. 'ನಾನೇ ರಾಜ' ಎರಡನೇ ಸಿನಿಮಾ. ಒಂದು ತೆಲುಗು ಸಿನಿಮಾ ಅರ್ಧಕ್ಕೆ ನಿಂತು ಹೋಯ್ತು. ಭೋಜ್ಪುರಿ ಭಾಷೆಯಲ್ಲಿ ಎರಡು ಸಿನಿಮಾ ಮಾಡಿದ್ಲು. ಬಳಿಕ ನಟನೆ ಬಿಟ್ಟು ಬ್ಯುಸಿನೆಸ್ ಕಡೆ ಮುಖ ಮಾಡಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.
ಆಕೆಯ ಹೆಸರು ಸೋನು ಗೌಡ. ಆದರೆ ಇಂಡಸ್ಟ್ರಿಯಲ್ಲಿ ಇಬ್ಬರು ಮೂವರು ಸೋನು ಗೌಡ ಇದ್ರು. ಕನ್ಫ್ಯೂಸ್ ಆಗೋದು ಬೇಡ ಅಂತ ಸೋನಿಕಾ ಗೌಡ ಎಂದು ಹೆಸರು ಬದಲಿಸಿದೆವು. ಎರಡು ವರ್ಷಗಳಿಂದ ಸೋನಿಕಾ ಗೌಡ ಮುದ್ದಿನ ಸಾಕು ನಾಯಿ ಹಾಸಿಗೆ ಹಿಡಿದಿದ್ದಾನೆ. ನಿರಂತರವಾಗಿ ವೈದ್ಯರು ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ರೂಪ ಮಾಹಿತಿ ನೀಡಿದ್ದಾರೆ.