ಬಾಲಿವುಡ್ನಲ್ಲಿ ವೆಬ್ ಸೀರಿಸ್ ಸಂಖ್ಯೆ ಹೆಚ್ಚು. ಇದೀಗ ಮಹಿಳಾ ಗ್ಯಾಂಗ್ಸ್ಟರ್ಗಳ ನಡುವಿನ ಜಿದ್ದಾಜಿದ್ದಿನ ಕಥೆ ಸರಣಿ ರೂಪದಲ್ಲಿ ವೀಕ್ಷಕರ ಮುಂದೆ ಬರ್ತಿದೆ. ಕೀರ್ತಿ ಸುರೇಶ್ ಹಾಗೂ ರಾಧಿಕಾ ಆಪ್ಟೆ ಮಹಿಳಾ ಗ್ಯಾಂಗ್ಸ್ಟರ್ಗಳಾಗಿ ಅಬ್ಬರಿಸಿದ್ದಾರೆ.
'ಅಕ್ಕ' ಹೆಸರಿನಲ್ಲಿ ಈ ವೆಬ್ ಸೀರಿಸ್ ಅಕ್ಟೋಬರ್ 30ರಿಂದ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಗ್ಯಾಂಗ್ ಲೀಡರ್ 'ಅಕ್ಕ' ಆಗಿ ಕೀರ್ತಿ ಸುರೇಶ್ ದರ್ಶನ ಕೊಟ್ಟಿದ್ದಾರೆ. ಆಕೆಯ ಗ್ಯಾಂಗ್ ಅನ್ನು ಮಟ್ಟ ಹಾಕಲು ರಾಧಿಕಾ ಆಪ್ಟೆ ಬರುವ ಕಥೆ ಇಲ್ಲಿದೆ. 1985ರಲ್ಲಿ ಪೆರ್ನೂರು ಎಂಬ ಜಾಗದಲ್ಲಿ ಕಥೆ ನಡೆಯಲಿದೆ.
ತನ್ವಿ ಅಜ್ಮಿ, ಮಹೇಶ್ ಮಂಜ್ರೇಕರ್, ಅಂಶುಮಾನ್ ಪುಷ್ಕರ್ ಮತ್ತು ಮೋನಿಕಾ ಪನ್ವಾರ್ ಕೂಡ 'ಅಕ್ಕ' ವೆಬ್ ಸೀರಿಸ್ ತಾರಾಗಣದಲ್ಲಿದ್ದಾರೆ. ಮಹಿಳಾ ಪ್ರಧಾನ ಸಮಾಜವೊಂದನ್ನು ಆಳುವ ಪ್ರಭಾವಶಾಲಿ ಭವಾನಿ(ಕೀರ್ತಿ ಸುರೇಶ್) ಗ್ಯಾಂಗ್ ಸುತ್ತಾ ಕಥೆ ಸಾಗಲಿದೆ. ಹೊರಗಿನಿಂದ ಬರುವ ರುದ್ರ(ರಾಧಿಕಾ ಆಪ್ಟೆ) ಹೇಗೆ ಆ ಗ್ಯಾಂಗ್ಗೆ ಕಂಟಕವಾಗುತ್ತಾಳೆ ಎನ್ನುವುದನ್ನು ನೋಡಬಹುದು.