ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಪ್ರಚಾರ ಜೋರಾಗುತ್ತಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಚಾರ ಆರಂಭಿಸಿದ್ದ ಚಿತ್ರತಂಡ ನಿನ್ನೆ(ಅಕ್ಟೋಬರ್ 20) ಹೈದರಾಬಾದ್‌ನಲ್ಲಿ ಪ್ರೀ-ರಿಲೀಸ್ ಈವೆಂಟ್ ನಡೆಸಿತ್ತು. ಕಾರ್ಯಕ್ರಮಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ರಣ್‌ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಸೇರಿ ಇಡೀ ಚಿತ್ರತಂಡ ಕಾರ್ಯಕ್ರಮಕ್ಕೆ ಹಾಜರಾಗಿತ್ತು. ವೇದಿಕೆಯಲ್ಲಿ ಯಶ್ ಆಡಿದ ಅದೊಂದು ಮಾತು ಸಖತ್ ವೈರಲ್ ಆಗ್ತಿದೆ.
'ರಾಮಾಯಣ' ಚಿತ್ರದಲ್ಲಿ VFX ರೀತಿಯ ಸಣ್ಣಪುಟ್ಟ ದೋಷಗಳನ್ನು ಹುಡುಕಲು ಪ್ರಯತ್ನಿಸಬೇಡಿ ಎಂದು ಯಶ್ ಹೇಳಿದ್ದಾರೆ. ಆದರೆ ಯಾಕೆ ಈ ಮಾತು ಹೇಳಿದ್ರು ಎನ್ನುವುದನ್ನು ಬಿಟ್ಟು ಈ ವಿಚಾರವನ್ನು ಮಾತ್ರ ಹೈಲೆಟ್ ಮಾಡಿ ಟ್ರೋಲ್ ಮಾಡಲಾಗ್ತಿದೆ. 'ರಾಮಾಯಣ' ಸಿನಿಮಾ ಹೇಗಿರಬಹುದು, ಏನೆಲ್ಲಾ ಟೀಕೆಗಳು ಎದುರಾಗಬಹುದು ಎನ್ನುವುದನ್ನು ಮನಗಂಡು ಯಶ್ ಈ ಮಾತು ಹೇಳುತ್ತಿದ್ದಾರೆ. ಚಿತ್ರದಲ್ಲಿ ತಪ್ಪುಗಳು ಇರುತ್ತೆ ಹುಡುಕಬೇಡಿ ಎಂದು ಮೊದಲೇ ಕೇಳಿಕೊಳ್ಳುತ್ತಿದ್ದಾರೆ ಎಂದು ಕಾಮೆಂಟ್ ಮಾಡ್ತಿದ್ದಾರೆ.
ಅಸಲಿಗೆ ಯಶ್ ಹೇಳಿದ್ದೆ ಬೇರೆ. "ಭಾರತೀಯರಾಗಿ ನಾವು ನಮಿತ್ ಮಲ್ಹೋತ್ರಾ ರೀತಿಯ ವ್ಯಕ್ತಿಗಳನ್ನು ಉಳಿಸಿಕೊಳ್ಳಬೇಕು. ಇದು ನಮ್ಮ ಕರ್ತವ್ಯ.. ಅವ್ರು ಯಾವ ಸ್ಥಾನದಲ್ಲಿದ್ದಾರೆ, ಹೇಗೆ ಬ್ಯುಸಿನೆಸ್ ಮಾಡ್ತಾರೆ ಅಂತ ನನಗೆ ಗೊತ್ತು. ಅವ್ರಿಗೆ ನಮ್ಮ ಸಿನಿಮಾವನ್ನು ದೊಡ್ಡಮಟ್ಟಕ್ಕೆ ಕೊಂಡೊಯ್ಯುವ ಆಸೆಯಿದೆ. ಅವ್ರ ಸಂಸ್ಥೆಗೆ ಆಸ್ಕರ್ ಪ್ರಶಸ್ತಿಗಳು ಬಂದ್ರು, ಭಾರತೀಯ ಚಿತ್ರಗಳನ್ನು ಆಸ್ಕರ್ ವೇದಿಕೆಯಲ್ಲಿ ನೋಡುವ ಹಂಬಲ ಅವರಿಗಿದೆ. ಅದಕ್ಕೆ ನಾವು ಅವ್ರ ಜೊತೆ ಕೈ ಜೋಡಿಸಿದೆ. ಸರಿ ನಮಿತ್ ಮಾಡೋಣ ಅಂದೆ, ನಾನು ರಾವಣ ಪಾತ್ರ ಮಾಡ್ತೀನಿ, ಸಿನಿಮಾ ನಿರ್ಮಾಣಕ್ಕೂ ಕೈಜೋಡಿಸ್ತೀನಿ ಏನಾಗುತ್ತೋ ನೋಡೋಣ ಎಂದೆ" ಅಂತ ಯಶ್ ಹೇಳಿದ್ದಾರೆ.
ಸೋನಿ ಪಿಕ್ಚರ್ಸ್ ನಮ್ಮ ಸಿನಿಮಾ ವಿತರಣೆ ಮಾಡಿಬಿಟ್ರೆ ಏನು ದೊಡ್ಡ ವಿಷಯನಾ? ಎಂದು ಕೆಲವರು ಕೇಳ್ತಾರೆ. ಆದ್ರೆ ಅದು ಅಷ್ಟು ಸುಲಭವಲ್ಲ, ನಮ್ಮನ್ನೆಲ್ಲಾ ಅವ್ರು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಅವ್ರು ನಮ್ಮ ಸಿನಿಮಾ ತಗೋಬೇಕು ಅಂದ್ರೆ, ಇಂತಹವರು ಅಲ್ಲಿಗೆ ಹೋಗಿ ಹಣ ಸುರಿದು ಗ್ಯಾಂಬಲ್ ಮಾಡಬೇಕು.. ಸಿನಿಮಾ ನೋಡಿ ಚೆನ್ನಾಗಿದ್ರೆ, ಒಪ್ಪಿಕೊಳ್ಳಿ.. ಆದ್ರೆ VFX ರೀತಿಯ ಸಣ್ಣ ಪುಟ್ಟ ತಪ್ಪುಗಳನ್ನು ಹುಡುಕಬೇಡಿ.. ಇಂತಹ ಸಿನಿಮಾ ಮತ್ತೆ ಮಾಡೋಕೆ ಆಗಲ್ಲ. ಇಂತಹ ವ್ಯಕ್ತಿಗಳನ್ನು ಕಳೆದುಕೊಂಡ್ರೆ, ಮತ್ತೆ ಬಹಳ ಹಿಂದಕ್ಕೆ ಹೋಗ್ತೀವಿ. ಹಾಗಾಗಿ ಮುಕ್ತಮನಸ್ಸಿನಿಂದ ನೋಡಿ.. ಕನ್ನಡ ಮಾತ್ರವಲ್ಲ ಎಲ್ಲಾ ಭಾಷಿಕರು ಸಿನಿಮಾ ನೋಡಿ ಹರಸಿ" ಎಂದಿದ್ದಾರೆ.
ನಮಿತ್ ಮಲ್ಹೋತ್ರಾ ಬಗ್ಗೆ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. ಸಣ್ಣಪುಟ್ಟ ತಪ್ಪು ಹುಡುಕುವುದು ಬಿಟ್ಟು ನಮ್ಮ ಪ್ರಯತ್ನವನ್ನು ನೋಡಿ ಎಂದಿದ್ದಾರೆ. ಆದರೆ ಕೆಲವರು "ತಪ್ಪು ಹುಡುಕಬೇಡಿ" ಎಂದು ಹೇಳಿದ್ದನ್ನೇ ದೊಡ್ಡದು ಮಾಡಿ ಕಾಮೆಂಟ್ ಮಾಡ್ತಿದ್ದಾರೆ.
#YASH:
— Gulte (@GulteOfficial) October 19, 2026
“Please don’t try to find small faults, like VFX in #Ramayana.
If we lose people like Namit Malhotra, it will take us backwards by years.
Watch the film with an open mind. I request fans across all industries to come together and take Indian cinema to the world.” pic.twitter.com/GdqfIhkKsu