'ರಾಮಾಯಣ' ಸಿನಿಮಾ ಪ್ರಮೋಷನ್ ಜೋರಾಗಿದೆ. ಗ್ಲೋಬಲ್ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗ್ತಿದೆ. ಮುಖ್ಯವಾಗಿ ದಕ್ಷಿಣದ ಭಾಷೆಗಳಿಗೆ ಡಬ್ ಆಗಿ ಬರ್ತಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಚಿತ್ರತಂಡ ಎರಡು ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ನಡೆದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಭಾಗಿ ಆಗಿದ್ದರು. ನಿನ್ನೆ ಕೊಲ್ಕತ್ತಾದಲ್ಲಿ ನಡೆದ ದಸರಾ ಸಂಭ್ರಮಾಚರಣೆಯಲ್ಲಿ ಚಿತ್ರತಂಡ ಭಾಗಿ ಆಗಿತ್ತು. ಇಂದು(ಅಕ್ಟೋಬರ್ 21) ಚೆನ್ನೈನಲ್ಲಿ ಚಿತ್ರದ ಆಡಿಯೋ ಲಾಂಚ್ ಮಾಡಲಾಗಿದೆ.

ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಡೀ 'ರಾಮಾಯಣ' ಚಿತ್ರತಂಡ ಭಾಗಿ ಆಗಿತ್ತು. ದಸರಾ, ವಿಜಯದಶಮಿ ಸಮಯದಲ್ಲಿ ಕೂಡ ಯಶ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಪತಿಯ ಅನುಪಸ್ಥಿತಿಯಲ್ಲಿ ರಾಧಿಕಾ ಪಂಡಿತ್ ಮಕ್ಕಳ ಜೊತೆ ಹಬ್ಬ ಆಚರಿಸಿದ್ದಾರೆ. ಇತ್ತೀಚೆಗೆ ಫೋಟೊಗಳನ್ನು ಹಂಚಿಕೊಂಡಿದ್ದರು. ಚೆನ್ನೈ ಕಾರ್ಯಕ್ರಮದ ವೇಳೆ ಕನ್ನಡದಲ್ಲೇ ಯಶ್ ಕರುನಾಡಿನ ಜನತೆಗೆ ಹಬ್ಬದ ಶುಭಾಶಯ ಕೋರಿದ್ದಾರೆ. ಆ ವೀಡಿಯೋ ವೈರಲ್ ಆಗ್ತಿದೆ.

"ಎಲ್ಲರಿಗೂ ನಾಡಹಬ್ಬ ದಸರಾ ಶುಭಾಶಯಗಳು.. ವಿಜಯದಶಮಿ ಶುಭಾಶಯಗಳು. ಇಲ್ಲಿಂದಲೇ ನಿಮ್ಮೆಲ್ಲರಿಗೂ ಶುಭಾಶಯ ತಿಳಿಸ್ತಿದ್ದೀನಿ.. ಕೆಲ್ಸ ಮಾಡ್ತಿದ್ದೀನಿ" ಎಂದು ಯಶ್ ಹೇಳಿದ್ದಾರೆ. 'ರಾಮಾಯಣ' ಚಿತ್ರಕ್ಕೆ ಎ. ಆರ್ ರಹಮಾನ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈಗಾಗಲೇ ಹಾಡುಗಳು ಬಂದು ಸದ್ದು ಮಾಡ್ತಿದೆ. ನಾನು ನಿಮ್ಮ ದೊಡ್ಡ ಅಭಿಮಾನಿ ಸರ್ ಎಂದು ಯಶ್ ಮತ್ತೊಮ್ಮೆ ಎ. ಆರ್ ರಹಮಾನ್ ಅವರನ್ನು ಕೊಂಡಾಡಿದ್ದಾರೆ.

ನನಗೆ ಡ್ಯಾನ್ಸ್ ಅಂದ್ರೆ ಬಹಳ ಇಷ್ಟ. ಚಿಕ್ಕಂದಿನಲ್ಲಿ ಸಿನಿಮಾ ಹಾಡುಗಳಿಗೆ ಡ್ಯಾನ್ಸ್ ಮಾಡ್ತಿದ್ದೆ. 'ಜಂಟಲ್‌ಮ್ಯಾನ್' ಸಿನಿಮಾ ಸಾಂಗ್ಸ್ ಮರೆಯೋಕೆ ಆಗ್ತಿಲ್ಲ. ನಿಮ್ಮ ಹಾಡುಗಳನ್ನು ಕೇಳಿ ನಾನು ತಮಿಳು ಮಾತನಾಡಲು ಕಲಿತೆ. 'ಲಗಾನ್', 'ರಂಗೀಲಾ' ಚಿತ್ರದ ಹಾಡುಗಳನ್ನು ಕೇಳಿ ಹಿಂದಿ ಅರ್ಥ ಮಾಡಿಕೊಳ್ಳಲು ಆರಂಭಿಸಿದೆ. ಇವತ್ತು ನನ್ನ ಚಿತ್ರಕ್ಕೆ ನೀವು ಸಂಗೀತ ಸಂಯೋಜನೆ ಮಾಡಿದ್ದೀರಾ. ದೊಡ್ಡದಾಗಿ ಕನಸು ಕಾಣಬೇಕು ಎಂದು ಅದಕ್ಕೆ ಕೇಳುವುದು ಎಂದು ಯಶ್ ಹೇಳಿದ್ದಾರೆ.

ತಮಿಳು ಜನ ಅಷ್ಟು ಸುಲಭವಾಗಿ ಯಾವುದನ್ನು ಒಪ್ಪಿಕೊಳ್ಳುವುದಿಲ್ಲ. ನೀವು ನಮಗೆ ಪ್ರೀತಿ ಕೊಟ್ಟಿದ್ದೀರಾ. ಅದನ್ನು ಮರೆಯೋಕೆ ಸಾಧ್ಯವಿಲ್ಲ, ಅದನ್ನು ಉಳಿಸಿಕೊಳ್ತೀನಿ ಎಂದು ಯಶ್ ಹೇಳಿದ್ದಾರೆ. ನವೆಂಬರ್ 5ರಂದು 'ರಾಮಾಯಣ' ಸಿನಿಮಾ ತೆರೆಗೆ ಬರ್ತಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.