ವಿಜಯಲಕ್ಷ್ಮಿ ದರ್ಶನ್ ಮಾರ್ಮಿಕ ಪೋಸ್ಟ್ ಬೆನ್ನಲ್ಲೇ ಧನ್ವೀರ್ ಗೌಡ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದಾರೆ. ಆದರೆ ಯಾರಿಗೆ ಎನ್ನುವುದು ಗೊತ್ತಾಗದೇ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ವಿಜಯಲಕ್ಷ್ಮಿ ಪೋಸ್ಟ್ ಮಾಡಿ ಧನ್ವೀರ್‌ಗೆ ತಿವಿದಿದ್ದರು. ಅದಕ್ಕೆ ಧನ್ವೀರ್ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ.
ಚಾಮರಾಜನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ "ಯಾವ ನಾಯಿ-ನರಿಗಳು ಎಷ್ಟೇ ಕುತಂತ್ರ ಮಾಡಿದ್ರೂ ಅವರನ್ನು (ದರ್ಶನ್) ಏನೂ ಮಾಡೋಕೆ ಆಗಲ್ಲ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಅವರ ಮೇಲಿದೆ. ದರ್ಶನ್ ಅವ್ರು ಜೈಲಿನಿಂದ ಹೊರಗಡೆ ಬಂದೇ ಬರ್ತಾರೆ" ಎಂದು ಧನ್ವೀರ್ ಹೇಳಿದ್ದರು. ಅದರ ಬೆನ್ನಲ್ಲೇ ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮಾಡಿ "ನಿಮ್ಮ ಡಿ ಬಾಸ್ ಹೆಸರು ಮೆಚ್ಚುಗೆಗಿರಲಿ, ಟೀಕೆಗಿರಲಿ, ಸ್ವಹಿತ ಸಾಧನೆಯ ಸಾಧನವಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಅಭಿಪ್ರಾಯದಲ್ಲಿ ಪ್ರಾಮಾಣಿಕತೆ ಇರಲಿ, ಮಾತಿನಲ್ಲಿ ಗೌರವವಿರಲಿ. ಎಲ್ಲರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು" ಎಂದು ಬರೆದುಕೊಂಡಿದ್ದರು.
ಇದೀಗ ಧನ್ವೀರ್ ಗೌಡ ಪೋಸ್ಟ್ ಮಾಡಿ "ಕೆಲವರಿರುತ್ತಾರೆ ಶಕುನಿ ಅಂತವರು ಕೊನೆವರೆಗೂ ಆಟವಾಡಿ ಕೊನೆಗೆ ತಾವೆ ಸಂತ್ರಸ್ತರಂತೆ ನಟಿಸುತ್ತಾರೆ. ಸತ್ಯಕ್ಕೆ ಯಾವತ್ತೂ ಸಾಕ್ಷಿ ಬೇಕಾಗಿಲ್ಲ, ಕಾಲವೇ ಉತ್ತರ ಕೊಡುತ್ತೆ" ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ ಹೆಸರು ಹೇಳದೇ ಹೀಗೆ ವಿಜಯಲಕ್ಷ್ಮಿ ದರ್ಶನ್ ಹಾಗೂ ಧನ್ವೀರ್ ಯಾರಿಗೆ ಟಾಂಗ್ ಕೊಡಲು ಯತ್ನಿಸುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ.
ಕೆಲ ದಿನಗಳ ಹಿಂದೆ ದರ್ಶನ್ ಹಾಗೂ ಧನ್ವೀರ್ ನಡುವೆ ಮನಸ್ತಾಪ ಇದೆ ಎಂದು ಗುಲ್ಲಾಗಿತ್ತು. ಆದರೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ದರ್ಶನ್ ಭೇಟಿ ಮಾಡಿ ಬಂದು ಅದಕ್ಕೆ ಸ್ಪಷ್ಟನೆ ನೀಡಿದ್ದರು. ಭಿನ್ನಾಭಿಪ್ರಾಯ ಎನ್ನುವುದೆಲ್ಲಾ ಸುಳ್ಳು ಎಂದಿದ್ದರು.
#Dhanveer : ಅಣ್ಣ ನಮ್ಮೂನಾದರೂ ಅತ್ತಿಗೆ ನಮ್ಮೊಲ್ಲಾ #Darshan #bbk13 #premadaOorali https://t.co/N0mzi7ElQA pic.twitter.com/poeKh8tr1i
— Abinaya Chakravarthy (@sudeepXsanchith) October 20, 2026