ಮುಂಬೈನಲ್ಲಿ ನಿನ್ನೆ(ಅಕ್ಟೋಬರ್ 18) ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಸದ್ಯ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಘಟನೆ ಬೆನ್ನಲ್ಲೇ ಜಾಕಿಶ್ರಾಫ್ ಕುಟುಂಬಕ್ಕೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ.

ಘಟನೆಯಲ್ಲಿ ನಟ ಟೈಗರ್ ಶ್ರಾಫ್ ಕೂಡ ಗಾಯಗೊಂಡಿದ್ದಾರೆ. ಮೊದಲಿಗೆ ಅವರಿಗೆ ಯಾವುದೇ ಪೆಟ್ಟು ಆಗಿರಲಿಲ್ಲ ಎನ್ನಲಾಗಿತ್ತು. ಆದರೆ ಗಾಯಕೊಂಡು ಚಿಕಿತ್ಸೆ ಪಡೆದಿದ್ದಾರೆ. ಇನ್ನು ದಾಳಿ ನಡೆಸಿದ ಆಗಂತುಕರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯರು ಎಂದು ವರದಿಯಾಗಿದೆ. ಸಲ್ಮಾನ್ ಖಾನ್ ಜೊತೆ ಟೈಗರ್ ಶ್ರಾಫ್ ನಟಿಸಿದ್ದೇ ತಪ್ಪು. ನಾವು ಈ ಬಗ್ಗೆ ಎಚ್ಚರಿಕೆ ನೀಡಿದರೂ ಕೇಳಲಿಲ್ಲ. ಅದಕ್ಕೆ ಬುದ್ಧಿ ಕಲಿಸಿದ್ದೇವೆ ಎಂದು ಬಿಷ್ಣೋಯ್ ತಂಡದಿಂದ ಹೇಳಿಕೆ ನೀಡಲಾಗಿದೆ.

ರಾಜಸ್ಥಾನದ ಕೋಟಾ ರೈಲ್ವೆ ನಿಲ್ದಾಣದಲ್ಲಿ ದಾಳಿಗೆ ಸಂಬಂಧಿಸಿದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮುಂಬೈ ಪೊಲೀಸರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ನಿನ್ನೆ ಸಂಜೆ ನಟ ಟೈಗರ್ ಶ್ರಾಫ್ ಫುಟ್‌ಬಾಟ್ ಆಡಿ ಮನೆಗೆ ವಾಪಸಾಗುತ್ತಿದ್ದರು. ಮೈದಾನದ ಬಳಿ ಅಭಿಮಾನಿಗಳು, ಛಾಯಾಗ್ರಾಹಕರು ಜಮಾಯಿಸಿದ್ದರು. ಅವರಿಗೆ ಬಾಯ್ ಹೇಳಿ ನಟ ಟೈಗರ್ ಶ್ರಾಫ್ ಕಾರ್ ಏರಿದ್ದರು. ಕೆಲವೇ ಕ್ಷಣಗಳಲ್ಲಿ ಮೂವರು ಕಾರಿನ ಮೇಲೆ ಗುಂಡಿನ ಮಳೆ ಸುರಿಸಲು ಆರಂಭಿಸಿದರು. ಮೊದಲಿಗೆ ಇದು ಪಟಾಕಿ ಗನ್ ಎಂದು ಕೆಲವರಿಗೆ ಅನಿಸಿತ್ತು. ಕಾರಣ ಅಷ್ಟು ಸುಲಭವಾಗಿ ಯಾರು ಕಾರಿನ ಮೇಲೆ ಗುಂಡು ಹಾರಿಸುತ್ತಾರೆ ಎಂದುಕೊಂಡಿದ್ದರು. ಕೆಲವೇ ಕ್ಷಣಗಳಲ್ಲಿ ಅದರ ಗಂಭೀರತೆ ಅರಿವಾಗಿತ್ತು.

ಘಟನೆಯಲ್ಲಿ ಟೈಗರ್ ಶ್ರಾಫ್ ಕಾರಿನ ಚಾಲಕ ಹಾಗೂ ಅಲ್ಲೇ ಪಕ್ಕದಲ್ಲಿ ಇದ್ದ ಆಟೋ ಚಾಲಕನಿಗೆ ಪೆಟ್ಟಾಗಿದೆ. ಗುಂಡಿನ ದಾಳಿ ನಡೆಯುತ್ತಿದ್ದಂತೆ ಕಾರಿನ ಚಾಲಕ ಫಿರ್ದೌಸ್‌ ಗಾಯಗೊಂಡಿದ್ದರು. ಜಾಕಿ ಶ್ರಾಫ್ ತಮ್ಮ ಕೈಗೆ ಪೆಟ್ಟಾಗಿದ್ದರೂ ಹೆದರದೆ ಸಮಯಪ್ರಜ್ಞೆಯಿಂದ ಚಾಲಕನ ಸೀಟಿಗೆ ಹೋಗಿ ಕುಳಿತಿದ್ದಾರೆ. ಕೂಡಲೇ ಚಾಲಕನಿಗೆ ಚಿಕಿತ್ಸೆ ಕೊಡಿಸಲು ಕಾರನ್ನು ನಾನಾವತಿ ಆಸ್ಪತ್ರೆ ಕಡೆ ತಿರುಗಿಸಿದ್ದಾರೆ.