ಈ ಬಾರಿ ಮೈಸೂರು ದಸರಾ ಜಂಬೂಸವಾರಿ ಅದ್ಧೂರಿಯಾಗಿ ನೆರವೇರಿದೆ. ಪ್ರಶಾಂತ ಆನೆ ಮೊದಲ ಬಾರಿ ಅಂಬಾರಿ ಹೊತ್ತು ಯಶಸ್ವಿಯಾಗಿದೆ. ಸಾವಿರಾರು ಜನ ಈ ಮೆರವಣಿಗೆ ಕಣ್ತುಂಬಿಕೊಂಡರು. ಈ ಬಾರಿ ದಸರಾಗೆ ತಾರಾ ಮೆರುಗು ನೀಡಲಾಗಿತ್ತು. ಕನ್ನಡ ಸಿನಿಮಾ ತಾರೆಯರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ನಟರಾದ ರವಿಚಂದ್ರನ್, ಸುದೀಪ್, ಗಣೇಶ್, ದೊಡ್ಡಣ್ಣ, ಧನಂಜಯ್ ನಟಿಯರಾದ ರುಕ್ಮಿಣಿ ವಸಂತ್, ಸಪ್ತಮಿ ಗೌಡ ಸೇರಿ ಹಲವರು ಅಭಿಮಾನಿಗಳ ಗಮನ ಸೆಳೆದರು.
ತೆರೆದ ವಾಹನಗಳಲ್ಲಿ ತಾರೆಯರು ಮೆರವಣಿಗೆಯಲ್ಲಿ ಕಾಣಿಸಿಕೊಂಡರು. ಜನ ಕಡೆ ಕೈ ಬೀಸುತ್ತಾ ನಿಂತಲ್ಲೇ ಮೈ ಕುಣಿಸುತ್ತಾ ಮಿಂಚು ಹರಿಸಿದರು. ಕೆಲ ಅಭಿಮಾನಿಗಳು ನಟ, ನಟಿಯರನ್ನು ಇಂಪ್ರೆಸ್ ಮಾಡುವ ಪ್ರಯತ್ನ ಮಾಡಿದ್ದರು. ನೀಲಿ ಬಣ್ಣದ ಸೀರೆ ಉಟ್ಟು ರುಕ್ಮಿಣಿ ವಸಂತ್ ಅಭಿಮಾನಿಗಳ ಮನಗೆದ್ದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರುಕ್ಕು ಕ್ರೇಜ್ ಹೇಗಿದೆ ಎನ್ನುವುದನ್ನು ಬಿಡಿಸಿ ಹೇಳುವುದು ಬೇಕಿಲ್ಲ. ಮೆರವಣಿಗೆ ವೇಳೆ ಅಭಿಮಾನಿಯೊಬ್ಬ ಆಕೆಯ ಕಡೆ ಪ್ರೀತಿಯ ಬಾಣ ಬಿಟ್ಟು ಗಮನ ಸೆಳೆಯುವ ಮನಸ್ಸು ಮಾಡಿದ್ದಾನೆ. ಅದಕ್ಕೆ ಆಕೆ ಕೂಡ ಪ್ರತಿಕ್ರಿಯಿಸಿರುವುದು ವಿಶೇಷ. ವೀಡಿಯೋ ವೈರಲ್ ಆಗ್ತಿದೆ.
'ಕಾಂತಾರ'-1 ಚಿತ್ರದ 'ಮದನ ಮನ ಮೋಹಿನಿ' ಹಾಡಿನಲ್ಲಿ ರಿಷಬ್ ಹಾಗೂ ರುಕ್ಮಿಣಿಗೆ ಬಾಣ ಬಿಡುವುದನ್ನು ಕಲಿಸುವ ಸನ್ನಿವೇಶ ಇದೆ. ಮೈಸೂರು ದಸರಾದಲ್ಲಿ ತಾರೆಯರು ಇದ್ದ ವಾಹನ ಎದುರಿಗೆ ಬರುತ್ತಿದ್ದಂತೆ ಯುವಕನೊಬ್ಬ ರುಕ್ಮಿಣಿ ಕಡೆ ನೋಡಿ ಬಾಣ ಬಿಡುವಂತೆ ಸನ್ನೆ ಮಾಡಿದ್ದಾನೆ. ಕೂಡಲೇ ಪಕ್ಕಕ್ಕೆ ಸರಿದ ರುಕ್ಮಿಣಿ ಬಾಣ ಗುರಿ ತಪ್ಪಿಹೋಯ್ತು ಎನ್ನುವುದು ಪ್ರತಿಕ್ರಿಯಿಸಿದ್ದಾರೆ. ವೀಡಿಯೋ ಸಖತ್ ವೈರಲ್ ಆಗ್ತಿದೆ.
ಇನ್ಸ್ಟಾಗ್ರಾಮ್ನಲ್ಲಿ ಈ ಪೋಸ್ಟ್ ಬಗ್ಗೆ ತರಹೇವಾರಿ ಕಾಮೆಂಟ್ಸ್ ಬರ್ತಿದೆ. "ಈಶ್ವರನ ಹೂದೋಟ ಹುಷಾರು ಕಣ್ಣಪ್ಪ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಮಿಂಚುಳ ಅಂತ ಹೋಗ್ಬೇಡ ದಾರಿ ತಪ್ಪುತ್ತೆ" ಎಂದು ಮತ್ತೊಂದು ಕಾಮೆಂಟ್ ಮಾಡಿರುವುದು ನೋಡಬಹುದು. "ಇಷ್ಟು ಸಣ್ಣ ಬಾಣಕ್ಕೆ ಬೀಳೋ ಹಕ್ಕಿ ಅಲ್ಲ ಅದು" ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ.
ಸಪ್ತಸಾಗರದಾಚೆ ಎಲ್ಲೋ ಸರಣಿ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದ್ದ ರುಕ್ಮಿಣಿ 'ಕಾಂತಾರ'-1 ಚಿತ್ರದ ಕನಕವತಿ ಪಾತ್ರದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರ್ತಿಸಿಕೊಂಡರು. ತಮಿಳು, ತೆಲುಗಿನಿಂದ ಸಾಕಷ್ಟು ಅವಕಾಶಗಳು ಬರ್ತಿವೆ. ಈಗಾಗಲೇ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದು ಶೀಘ್ರದಲ್ಲೇ ಬಾಲಿವುಡ್ ಅಂಗಳ ಪ್ರವೇಶಿಸಲಿದ್ದಾರೆ.
#RukminiVasanth 💘 😍😍 pic.twitter.com/fSdiKJtXaK
— Gokul Cine Update 🗿 (@2024Gokul) October 22, 2026