ದಕ್ಷಿಣ ಭಾರತದಲ್ಲಿ ಕನ್ನಡ ನಟಿ ರುಕ್ಮಿಣಿ ವಸಂತ್ ಬಹುಬೇಡಿಕೆಯ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಶೀಘ್ರದಲ್ಲೇ ಬಾಲಿವುಡ್ ಅಂಗಳಕ್ಕೂ ಎಂಟ್ರಿ ಕೊಡಲಿದ್ದಾರೆ. ಕನ್ನಡ ಬಿಟ್ಟು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಇದೀಗ ಆಕೆ ನಟಿಸುತ್ತಿರುವ ಮತ್ತೊಂದು ಸಿನಿಮಾ ಘೋಷಣೆಯಾಗಿದೆ.
ಇನ್ನು ಹೆಸರಿಡದ ಚಿತ್ರದಲ್ಲಿ ತಾರ ಎಂಬ ಪಾತ್ರದಲ್ಲಿ ರುಕ್ಮಿಣಿ ವಸಂತ್ ನಟಿಸ್ತಿದ್ದಾರೆ. ಶ್ರೀ ಕಾರ್ತಿಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶೂಟಿಂಗ್ ಸೆಟ್ಗೆ ಹೋಗಿ ಕಾರ್ತಿಕ್ ಆಕೆಗೆ ಕಥೆ ಹೇಳಿ ಒಪ್ಪಿಸಿದಂತೆ ಒಂದು ಪ್ರಮೋಷನಲ್ ವೀಡಿಯೋ ಶೂಟ್ ಮಾಡಲಾಗಿದೆ. ಮ್ಯಾಡ್ಬಾಯ್ಸ್ ಎಂಟರ್ಟೈನ್ಮೆಂಟ್ ಮತ್ತು ಸಿರುನಿ ಸೈನ್ ಕಾರ್ಪೊರೇಷನ್ ಬ್ಯಾನರ್ಗಳ ಅಡಿಯಲ್ಲಿ ನಿರ್ಮಾಣ ಮಾಡಲಾಗ್ತಿದೆ. ದೇವ್ ರಾಮನಾಥ್ ಮತ್ತು ವಿನಯ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
'ಒಕೆ ಒಕ ಜೀವಿತಂ' ಎಂಬ ಚಿತ್ರವನ್ನು ಕಾರ್ತಿಕ್ ಕಟ್ಟಿಕೊಟ್ಟು ಸಕ್ಸಸ್ ಕಂಡಿದ್ದರು. ಇದೀಗ ಹೊಸ ಸಿನಿಮಾ ಮೂಲಕ ಕಮಾಲ್ ಮಾಡಲು ಬರ್ತಿದ್ದಾರೆ. ಇದೊಂದು ರೋಡ್ ಟ್ರಿಪ್ ಕಥೆ ಆಧರಿಸಿದ ಸಿನಿಮಾ ಎನ್ನುವುದು ಗೊತ್ತಾಗ್ತಿದೆ. 'ಏಸ್' ಹಾಗೂ 'ಮದರಾಸಿ' ಸಿನಿಮಾಗಳಲ್ಲಿ ನಟಿಸಿದ್ದ ರುಕ್ಮಿಣಿ ನಟನೆಯ ಮೂರನೇ ತಮಿಳು ಸಿನಿಮಾ ಇದು. ಇತ್ತೀಚೆಗೆ ಮೈಸೂರು ದಸರಾ ಉತ್ಸವದಲ್ಲಿ ರುಕ್ಕು ಭಾಗಿ ಆಗಿದ್ದರು. ನೀಲಿ ಬಣ್ಣದ ಸೀರೆ ಉಟ್ಟು ಗಮನ ಸೆಳೆದಿದ್ದರು.