ನಮಿತ್ ಮಲ್ಹೋತ್ರಾ ಹಾಗೂ ಯಶ್ ನಿರ್ಮಾಣದ 'ರಾಮಾಯಣ' ಚಿತ್ರದ ಮೊದಲ ಭಾಗ ದೀಪಾವಳಿಗೆ ಬಿಡುಗಡೆ ಆಗಲಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಸದ್ಯ ಸೆನ್ಸಾರ್ ಮುಗಿದಿದ್ದು ಚಿತ್ರದ ಕಾಲಾವಧಿ ಕೂಡ ಬಹಿರಂಗವಾಗಿದೆ.
ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಯು' ಸರ್ಟಿಫಿಕೇಟ್ ಸಿಕ್ಕಿದ್ದು ಚಿತ್ರದ ಕಾಲಾವಧಿ 3 ಗಂಟೆ 15 ನಿಮಿಷ ಎಂದು ವರದಿಯಾಗಿದೆ. ಇತ್ತೀಚೆಗೆ 3 ಗಂಟೆ ರನ್ಟೈಮ್ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳೇ 3 ಗಂಟೆ ಪ್ರೇಕ್ಷಕರನ್ನು ರಂಜಿಸುತ್ತಿವೆ. ಸಿನಿಮಾ ಚೆನ್ನಾಗಿದ್ರೆ ಮೂರುವರೆ ಗಂಟೆ ಕೂಡ ನೋಡಬಹುದು. ಆದರೆ ಕೊಂಚ ಹೆಚ್ಚು ಕಮ್ಮಿ ಆಗಿಬಿಟ್ರೆ ಅದೇ ಚಿತ್ರಕ್ಕೆ ಮೈನಸ್ ಆಗಿಬಿಡುತ್ತೆ.
'ಟಾಕ್ಸಿಕ್' ಸೋಲಿನ ಭಯ
ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ಕಾಲಾವಧಿ ಬಗ್ಗೆ ಬಹಳ ಚರ್ಚೆ ಆಗಿತ್ತು. ಸಿನಿಮಾ ಸೋಲಲು ಅದು ಒಂದು ಕಾರಣ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಎಷ್ಟೇ ಚೆನ್ನಾಗಿದ್ದರೂ 3 ಗಂಟೆ ಸಿನಿಮಾ ಅಂದ್ರೆ ಕೊಂಚ ರಿಸ್ಕ್ ಎಂದೇ ಭಾವಿಸಲಾಗುತ್ತದೆ. 'ರಾಮಾಯಣ' ಸಿನಿಮಾ. ಹಾಗಾಗಿ ಎಲ್ಲಾ ಪಾತ್ರಗಳನ್ನು ಪರಿಚಯಿಸಬೇಕು. ಅದಕ್ಕೆ ಹೆಚ್ಚಿನ ಕಾಲಾವಕಾಶ ಬೇಕಾಗುತ್ತದೆ.
ಎರಡು ಭಾಗಗಳಾಗಿ ಸಿನಿಮಾ
ಇದು ಕೇವಲ ಮೊದಲ ಭಾಗ ಅಷ್ಟೇ. ಸೀತಾಪಹರಣದವರೆಗಿನ ಕಥೆಯನ್ನು ಮಾತ್ರ ಇದರಲ್ಲಿ ಹೇಳಲಾಗ್ತಿದೆ. ಆದ್ರೆ ಶ್ರೀರಾಮ, ಸೀತೆ ಹಾಗೂ ರಾವಣನ ಕುರಿತು ಸಾಕಷ್ಟು ವಿಚಾರಗಳನ್ನು ಕಟ್ಟಿಕೊಡಲಾಗ್ತಿದೆ. ರಾವಣ ತಪ್ಪಸ್ಸು ಮಾಡಿದ್ದರು. ದೇವತೆಗಳ ವಿರುದ್ಧ ಯುದ್ಧ ಮಾಡಿ ಗೆದ್ದಿದ್ದು ವಿದ್ಯುತ್ಜಿವನ ಜೊತೆ ಸೆಣಸಾಡಿದ್ದು ಹೀಗೆ ಸಾಕಷ್ಟು ಸಂಗತಿಗಳಿವೆ. ಇನ್ನು ಶ್ರೀರಾಮ ಹಾಗೂ ಪರಶುರಾಮ ಎದುರುಬದಿರಾಗುವ ಸನ್ನಿವೇಶವನ್ನು ಸೇರಿಸಲಾಗಿದೆ. ಹಾಗಾಗಿ ಸಹಜವಾಗಿ ಕಾಲಾವಧಿ ಹೆಚ್ಚಿರಬಹುದು. ಮೊದಲ ಭಾಗ ಈ ದೀಪಾವಳಿಗೆ ಬಂದ್ರೆ ಎರಡನೇ ಭಾಗ ಮುಂದಿನ ಬೆಳಕಿನ ಹಬ್ಬಕ್ಕೆ ತೆರೆಗಪ್ಪಳಿಸಲಿದೆ.
ಚಿತ್ರಕ್ಕೆ ಟ್ಯಾಕ್ಸ್ ಫ್ರೀ
'ರಾಮಾಯಣ' ಪೌರಾಣಿಕ ಸಿನಿಮಾ. ಹಾಗಾಗಿ ಎಲ್ಲರೂ ನೋಡಬೇಕು ಎನ್ನುವ ಕಾರಣಕ್ಕೆ ಕೆಲ ರಾಜ್ಯಗಳಲ್ಲಿ ಚಿತ್ರಕ್ಕೆ ತೆರಿಗೆ ವಿನಾಯ್ತು ಘೋಷಿಸಲು ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಬಳಿಕ ಹೈದರಾಬಾದ್ನಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೀತು. ಕೊಲ್ಕತ್ತಾದಲ್ಲಿ ನಡೆದ ದಸರಾ ಸಂಭ್ರಮಾಚರಣೆಯಲ್ಲಿ ಚಿತ್ರತಂಡ ಭಾಗಿ ಆಗಿತ್ತು. ಇದೀಗ ಚೆನ್ನೈನಲ್ಲಿ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗ್ತಿದೆ.