ರಣ್ಬೀರ್ ಕಪೂರ್, ಸಾಯಿಪಲ್ಲವಿ ಹಾಗೂ ಯಶ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ರಾಮಾಯಣ' ಸಿನಿಮಾ ಎರಡು ಭಾಗಗಳಾಗಿ ತೆರೆಗೆ ಬರ್ತಿದೆ. ದೀಪಾವಳಿ ಸಂಭ್ರಮದಲ್ಲಿ ಮೊದಲ ಭಾಗ ಬಿಡುಗಡೆ ಆಗ್ತಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಇದೆಲ್ಲದರ ನಡುವೆ ಓಟಿಟಿ ಡೀಲ್ ಬಗ್ಗೆ ಚರ್ಚೆ ನಡೀತಿದೆ.
ಯಾವುದೇ ಸಿನಿಮಾ ತೆರೆಕಂಡ ಒಂದು ತಿಂಗಳ ಬಳಿಕ ಓಟಿಟಿಗೆ ಬರುತ್ತದೆ. ಉತ್ತರ ಭಾರತದಲ್ಲಿ ಮಾತ್ರ ಎರಡು ತಿಂಗಳ ಬಳಿಕ ಸ್ಟ್ರೀಮಿಂಗ್ ಮಾಡುವ ನಿಯಮ ಇದೆ. ನವೆಂಬರ್ 5ರಂದು ಸಿನಿಮಾ ತೆರೆಗಪ್ಪಳಿಸಲಿದೆ. ಹಾಗಾದ್ರೆ ಓಟಿಟಿಗೆ ಬರುವುದು ಯಾವಾಗ ಎನ್ನುವ ಕುತೂಹಲ ಮೂಡಿದೆ.
ಓಟಿಟಿ ಡೀಲ್
ಬರೋಬ್ಬರಿ 450 ಕೋಟಿ ರೂ.ಗೆ 'ರಾಮಾಯಣ' ಚಿತ್ರದ ಮೊದಲ ಭಾಗದ ಓಟಿಟಿ ರೈಟ್ಸ್ ಮಾರಾಟವಾಗಿದೆ ಎನ್ನಲಾಗ್ತಿದೆ. ಜಿಯೋ ಹಾಟ್ಸ್ಟರ್ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ರಾಮಾಯಣ ನಮ್ಮ ಕಥೆ. ಹಾಗಾಗಿ ಅಬಾಲವೃದ್ಧರಾಗಿ ಎಲ್ಲವೂ ಸಿನಿಮಾ ನೋಡಲು ಬಯಸುತ್ತಾರೆ. ಚಿತ್ರಮಂದಿರಗಳಲ್ಲಿ ನೋಡದವರು ಓಟಿಟಿಯಲ್ಲಿ ವೀಕ್ಷಿಸಲು ಬಯಸುತ್ತಾರೆ. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದೆ.
ಪೇ ಫಾರ್ ವೀವ್
ಓಟಿಟಿಗೆ ಬಂದ ಕೂಡಲೇ ಚಂದಾದಾರರು ಎಲ್ಲರೂ ಉಚಿತವಾಗಿ 'ರಾಮಾಯಣ' ಸಿನಿಮಾ ನೋಡಲು ಸಾಧ್ಯವಿಲ್ಲ. ಆರಂಭದಲ್ಲಿ ಹಣ ಕೊಟ್ಟು ಬಾಡಿಗೆಗೆ ಪಡೆದು ಸಿನಿಮಾ ನೋಡಬೇಕು. ಕೆಲ ದಿನಗಳ ಬಳಿಕ ಉಚಿತವಾಗಿ ಸಿನಿಮಾ ವೀಕ್ಷಿಸುವಅವಕಾಶ ಸಿಗಲಿದೆ. ದೊಡ್ಡ ಸಿನಿಮಾಗಳನ್ನು ಓಟಿಟಿಗೆ ತರುವಾಗ ಇಂತಹ ಪ್ರಯತ್ನ ನಡೆಯುತ್ತದೆ. ಇದು ಯಶಸ್ಸು ಕೂಡ ಪಡೆದಿದೆ. 'ರಾಮಾಯಣ' ಚಿತ್ರದ ವಿಚಾರದಲ್ಲಿ ಕೂಡ ಇದೇ ನಿಮಯ ಪಾಲಿಸಲಾಗ್ತಿದೆ. ಅದೇ ಕಾರಣಕ್ಕೆ ಜಿಯೋ ಹಾಟ್ಸ್ಟರ್ 450 ಕೋಟಿ ರೂ.ಗೆ ಡೀಲ್ ಕುದುರಿಸಿದೆ ಎನ್ನಲಾಗ್ತಿದೆ.
2ನೇ ಭಾಗ ಯಾವಾಗ ?
ದೀಪಾವಳಿಗೆ 'ರಾಮಾಯಣ' ಚಿತ್ರದ ಮೊದಲ ಭಾಗ ಬಿಡುಗಡೆ ಆಗಲಿದೆ. ಎರಡನೇ ಭಾಗ ನೋಡಲು ಮುಂದಿನ ದೀಪಾವಳಿವರೆಗೂ ಕಾಯಬೇಕು. ಆ ಚಿತ್ರದ ಓಟಿಟಿ ರೈಟ್ಸ್ ಯಾರ ಪಾಲಾಗುತ್ತೋ ಕಾದು ನೋಡಬೇಕು. ಮೊದಲ ಭಾಗದಲ್ಲಿ ಸೀತಾಪಹರಣದವರೆಗಿನ ಕಥೆ ಮಾತ್ರ ಇರಲಿದೆ. ಈಗಾಗಲೇ ಸೆನ್ಸಾರ್ ಮುಗಿದಿದ್ದು 3 ಗಂಟೆ 15 ನಿಮಿಷ ಕಾಲಾವಧಿಯ ಸಿನಿಮಾ ಎಂದು ಗೊತ್ತಾಗಿದೆ.