ನೆಲ್ಸನ್ ನಿರ್ದೇಶನದಲ್ಲಿ ರಜನಿಕಾಂತ್ ನಟನೆಯ 'ಜೈಲರ್- 2' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. ಈಗಾಗಲೇ 500 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಸಿನಿಮಾ ಶೀಘ್ರದಲ್ಲೇ 1000 ಕೋಟಿ ರೂ. ಕ್ಲಬ್ ಸೇರುತ್ತೆ ಎನ್ನಲಾಗ್ತಿದೆ. ಚಿತ್ರದಲ್ಲಿ ಹೃತಿಕ್ ರೋಷನ್ ಅತಿಥಿ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಮುಂದೆ ಹೃತಿಕ್ ಹೀರೊ ಆಗಿ ನಟಿಸೋ ಚಿತ್ರಕ್ಕೆ ನೆಲ್ಸನ್ ಆಕ್ಷನ್ ಕಟ್ ಹೇಳ್ತಾರೆ ಎನ್ನಲಾಗ್ತಿದೆ.
ಸ್ಟಾರ್ ನಟರನ್ನು ಹ್ಯಾಂಡಲ್ ಮಾಡುವಲ್ಲಿ ನೆಲ್ಸನ್ ಪದೇ ಪದೆ ಸಕ್ಸಸ್ ಕಾಣುತ್ತಿದ್ದಾರೆ. ಲಾಜಿಕ್ ಬಿಟ್ಟು ಮ್ಯಾಜಿಕ್ ಮಾಡಿ ಪ್ರೇಕ್ಷಕರನ್ನು ರಂಜಿಸೋ ಪ್ರತಿಭೆ ಅವರಿಲ್ಲಿದೆ ಎನ್ನುವ ಚರ್ಚೆ ನಡೀತಿದೆ. ಇದೇ ಕಾರಣಕ್ಕೆ ಕಮಲ್ ಹಾಸನ್ ಹಾಗೂ ರಜನಿಕಾಂತ್ ನಟನೆಯ ಮಲ್ಟಿಸ್ಟಾರರ್ ಚಿತ್ರಕ್ಕೆ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 'ಜೈಲರ್- 2' ಸಿನಿಮಾ ಶಿವರಾಜ್ಕುಮಾರ್ ಹೀರೊ ಆಗಿ ನೆಲ್ಸನ್ ಸಿನಿಮಾ ಮಾಡಿದ್ರೆ ಚೆನ್ನಾಗಿರುತ್ತೆ ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ. ಅದೇ ರೀತಿ ಹೃತಿಕ್ ಹೀರೊ ಆಗಿ ನೆಲ್ಸನ್ ನಿರ್ದೇಶನದಲ್ಲಿ ಸಿನಿಮಾ ಬಂದ್ರೆ ಬಾಕ್ಸಾಫೀಸ್ ಶೇಕ್ ಆಗುತ್ತದೆ ಎನ್ನುವವರು ಇದ್ದಾರೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ಹೃತಿಕ್ ರೋಷನ್ ಈಗಾಗಲೇ ಕಾಲ್ಶೀಟ್ ಕೊಟ್ಟಿದ್ದಾರೆ. ಆ ಚಿತ್ರಕ್ಕೆ ನಿರ್ದೇಶಕರು ಯಾರು ಎನ್ನುವುದು ಖಚಿತವಾಗಿಲ್ಲ. ಆದರೆ ಹೃತಿಕ್ ಜೊತೆ ಸಿನಿಮಾ ಖಚಿತಪಡಿಸಿಕೊಂಡಿದೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ. ಹೃತಿಕ್ ಹಾಗೂ ಹೊಂಬಾಳೆ ಕಾಂಬೋ ಚಿತ್ರವನ್ನು ನೆಲ್ಸನ್ ನಿರ್ದೇಶನ ಮಾಡ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೂ ಇಂತಾದೊಂದು ಪ್ರಯತ್ನ ಯಾಕೆ ಆಗಬಾರದು ಎನ್ನುವವರು ಇದ್ದಾರೆ. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ಕಲಾವಿದರು, ತಂತ್ರಜ್ಞರು ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡ್ತಿದ್ದಾರೆ.
ಬಾಲಿವುಡ್ ನಟರಿಗೆ ತಮಿಳು ನಿರ್ದೇಶಕರು ಆಕ್ಷನ್ ಕಟ್ ಹೇಳುವುದು ಹೊಸದೇನು ಅಲ್ಲ. ಪ್ರಭುದೇವಾ, ಎ. ಆರ್ ಮುರುಗದಾಸ್, ಅಟ್ಲಿ ಹೀಗೆ ಕೆಲ ಕಾಲಿವುಡ್ ಫಿಲ್ಮ್ ಮೇಕರ್ಸ್ ಬಾಲಿವುಡ್ ಅಂಗಳದಲ್ಲಿ ಸಕ್ಸಸ್ ಕಂಡಿದ್ದಾರೆ. ಅದೇ ಹಾದಿಯಲ್ಲಿ ನೆಲ್ಸನ್ ಹೆಜ್ಜೆ ಇಟ್ಟರೂ ಅಚ್ಚರಿಪಡಬೇಕಿಲ್ಲ. ಸದ್ಯಕ್ಕೆ ರಜನಿ-ಕಮಲ್ ಸಿನಿಮಾವನ್ನು ಅವರು ಮುಗಿಸಬೇಕಿದೆ. ಮುಂದೆ ತೆಲುಗಿನಲ್ಲಿ ಸಿತಾರಾ ಎಂಟರ್ಟೈನ್ಮೆಂಟ್ಸ್ ಸಂಸ್ಥೆ ಜೊತೆ ಸಿನಿಮಾ ಮಾಡ್ತಾರೆ ಎನ್ನಲಾಗ್ತಿದೆ. ಜ್ಯೂ. ಎನ್ಟಿಆರ್ ಚಿತ್ರದಲ್ಲಿ ನಟಿಸಬಹುದು ಎಂದು ಸುಳಿವು ಸಿಕ್ತಿದೆ. ಇದೆಲ್ಲದರ ನಡುವೆ ಹೊಂಬಾಳೆ- ಹೃತಿಕ್ ಚಿತ್ರಕ್ಕೆ ನೆಲ್ಸನ್ ಆಕ್ಷನ್ ಕಟ್ ಹೇಳ್ತಾರೆ ಎನ್ನುವ ವಿಚಾರ ಗುಲ್ಲಾಗಿದೆ.
ಸದ್ಯ ಇಂಡಿಯನ್ ಸಿನಿಮಾ ಎನ್ನುವ ಟ್ರೆಂಡ್ ನಡೀತಿದೆ. ದೊಡ್ಡ ಬಜೆಟ್ನಲ್ಲಿ ನಾನಾ ಭಾಷೆಯ ಕಲಾವಿದರು, ತಂತ್ರಜ್ಞರು ಒಟ್ಟಿಗೆ ಸಿನಿಮಾ ಮಾಡ್ತಿದ್ದಾರೆ. 'ಕೆಜಿಎಫ್' ಸರಣಿ ಬಳಿಕ 'ಕಾಂತಾರ' ಹಾಗೂ 'ಸಲಾರ್' ಸರಣಿಯನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ತೆರೆಗೆ ತಂದಿದೆ. ಪ್ರಭಾಸ್ ಜೊತೆಗೆ ಇನ್ನು ಮೂರು ಸಿನಿಮಾ ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ 'ಕಾಂತಾರ-1' ಬಳಿಕ ಯಾವುದೇ ಚಿತ್ರವನ್ನು ಸಂಸ್ಥೆ ಆರಂಭಿಸಿಲ್ಲ. ಒಂದು ವೇಳೆ ಹೃತಿಕ್ ಹಾಗೂ ನೆಲ್ಸನ್ ಕಾಂಬಿನೇಷನ್ನಲ್ಲಿ ಸಿನಿಮಾ ಮಾಡಿದ್ರು, ಅದು ಸದ್ಯಕ್ಕೆ ಸಾಧ್ಯವಿಲ್ಲ.