ನೆಲ್ಸನ್ ನಿರ್ದೇಶನದ 'ಜೈಲರ್- 2' ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಮೋಹನ್ ಲಾಲ್, ಶಿವರಾಜ್‌ಕುಮಾರ್, ಹೃತಿಕ್ ರೋಷನ್, ಜಾಕಿ ಶ್ರಾಫ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ವಿದ್ಯಾಬಾಲನ್ ಹಾಗೂ ಮಿಥುನ್ ಚಕ್ರವರ್ತಿಗೆ ಒಳ್ಳೆ ಪಾತ್ರಗಳು ಸಿಕ್ಕಿವೆ. ವಿಜಯ್ ಸೇತುಪತಿ ಕೂಡ ಸಣ್ಣದಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಇವರೆಲ್ಲರ ನಡುವೆ ಕನ್ನಡ ನಟಿ ಮೇಘನಾ ರಾಜ್ ಕೂಡ ಮಿಂಚಿದ್ದಾರೆ.
ಮಂಡ್ಯದ ಡಾನ್ ನರಸಿಂಹ ಆಗಿ ಶಿವರಾಜ್‌ಕುಮಾರ್ 'ಜೈಲರ್' ಸರಣಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಸೀಕ್ವೆಲ್‌ನಲ್ಲಿ ನರಸಿಂಹನ ಮಡದಿ ಪಾತ್ರದಲ್ಲಿ ಮೇಘನಾ ರಾಜ್ ಬಣ್ಣ ಹಚ್ಚಿದ್ದಾರೆ. ಆಕ್ಷನ್ ಹಾಗೂ ಎಮೋಷನಲ್ ಸನ್ನಿವೇಶಗಳಲ್ಲಿ ಅವರ ದರ್ಶನ ಆಗುತ್ತದೆ. ರಜನಿಕಾಂತ್ ಅವರ ದೊಡ್ಡ ಅಭಿಮಾನಿ ಆಗಿದ್ದರು ಚಿರಂಜೀವಿ ಸರ್ಜಾ. 'ಜೈಲರ್'-2 ಚಿತ್ರದಲ್ಲಿ ತಲೈವಾ ಜೊತೆ ಮೇಘನಾ ತೆರೆಹಂಚಿಕೊಂಡಿದ್ದು ವಿಶೇಷ. ಮಗನ ಜೊತೆ ತಲೈವಾ ಭೇಟಿ ಮಾಡಿದ್ದ ವಿಚಾರವನ್ನು ಕೆಲ ದಿನಗಳ ಹಿಂದೆ ಮೇಘನಾ ಹಂಚಿಕೊಂಡಿದ್ದರು.
ಸದ್ಯ 'ಜೈಲರ್'-2 ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ತೆರೆಮೇಲೆ ರಜನಿಕಾಂತ್ ಜೊತೆ ಮೇಘನಾ ರಾಜ್ ಅವರನ್ನು ನೋಡಿ ಪ್ರೇಕ್ಷಕರು ಹುಬ್ಬೇರಿಸಿದ್ದಾರೆ. ತಮ್ಮ ಪಾತ್ರದ ಬಗ್ಗೆ ತಮಿಳು ಸಂದರ್ಶನವೊಂದರಲ್ಲಿ ಮೇಘನಾ ಮಾತನಾಡಿದ್ದಾರೆ. ಮೊದಲಿಗೆ ಅವಕಾಶ ಬಂದಾಗ ಅನುಮಾನ ಮೂಡಿತ್ತು. ನನ್ನ ಕೆಲ ದೃಶ್ಯಗಳಿಗೆ ಕತ್ತರಿ ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ.
'ಜೈಲರ್'-2 ಚಿತ್ರತಂಡದಿಂದ ಭಾರ್ಗವಿ ಎಂಬುವವರ ಫೋನ್ ಮಾಡಿದ್ರು. ಹೀಗಿ ಚಿತ್ರದಲ್ಲಿ ಒಂದಯ ಪಾತ್ರ ಇದೆ ಅಂದ್ರು.. ಸರಿ ಓಕೆ, ರಜನಿಕಾಂತ್ ಸರ್ ಜೊತೆ ಇರುವಂತಹ ಪಾತ್ರ ಬೇಕು, ಆದ್ರೆ ಸುಮ್ನೆ ಒಂದು ಮೂಲೆಯಲ್ಲಿ ನಿಂತುಕೊಳ್ಳುವ ಪಾತ್ರ ಇದ್ರೆ ಬೇಡ ಎಂದೆ. ಇಲ್ಲ ಮೇಡಂ ರಜನಿ ಸರ್ ಜೊತೆ ಇರುವ ಪಾತ್ರ ಅಂದ್ರು.. ಆದ್ರು ಯಾರಾದ್ರು ಫ್ರಾಂಕ್ ಮಾಡ್ತಿದ್ದಾರಾ ಅಂತ ಅನುಮಾನ ಬಂತು.. ಸರಿ ಹೇಳ್ತೀನಿ ಇರಿ, ಎಂದು ಫೋನ್ ಕಟ್ ಮಾಡಿಬಿಟ್ಟೆ ಎಂದು ಮೇಘನಾ ರಾಜ್ ನಕ್ಕಿದ್ದಾರೆ.
ನಮ್ಮ ತಂದೆಗೆ ಫೋನ್ ಮಾಡಿ ಹೇಳ್ದೆ. ಅಪ್ಪ ಹೀಗೆ ಅವಕಾಶ ಬಂದಿದೆ. ಇದು ನಿಜಾನಾ ಎನ್ನುವ ಅನುಮಾನ ನನಗೆ. ಒಮ್ಮೆ ಶಿವಣ್ಣನಿಗೆ ಫೋನ್ ಮಾಡಿ ಕೇಳಿ, ಯಾರಾದರೂ ಭಾರ್ಗವಿ ಎನ್ನುವವರು 'ಜೈಲರ್- 2' ತಂಡದಲ್ಲಿ ಇದ್ದಾರಾ ಅಂತ ಎಂದು ಹೇಳಿದ್ದೆ. ಅವ್ರು ಶಿವಣ್ಣನಿಗೆ ಫೋನ್ ಮಾಡಿ ಕೇಳಿದಾಗ ಖಚಿತವಾಯ್ತು. ಕೂಡಲೇ ಭಾರ್ಗವಿ ಅವರಿಗೆ ಫೋನ್ ಮಾಡಿ ನಾನು ಆ ಪಾತ್ರ ಮಾಡ್ತೀನಿ ಎಂದು ಹೇಳಿದ್ದೆ. ಹೀಗೆ ಅವಕಾಶ ಸಿಕ್ತು ಎಂದು ನೆನಪಿಸಿಕೊಂಡಿದ್ದಾರೆ.
35 ದಿನಗಳ ಕಾಲ 'ಜೈಲರ್- 2' ಚಿತ್ರಕ್ಕಾಗಿ ನಾನು ಕೆಲಸ ಮಾಡಿದ್ದೆ. ರಜನಿಕಾಂತ್ ಸರ್ ಜೊತೆ ಇರುವ ಅವಕಾಶ ಸಿಕ್ಕಿತ್ತು. ಇನ್ನು ಸಾಕಷ್ಟು ಸನ್ನಿವೇಶಗಳಿತ್ತು. ಆದ್ರೆ ಅದಕ್ಕೆಲ್ಲಾ ಕತ್ತರಿ ಹಾಕಿದ್ದಾರೆ. ಕ್ರಿಯೇಟಿವ್ ಕಾರಣಕ್ಕೆ ಹೀಗೆ ಮಾಡಿದ್ದಾರೆ ಪರವಾಗಿಲ್ಲ. ಆದರೂ ರಜನಿಕಾಂತ್ ಸರ್ ಜೊತೆ 30 ದಿನಗಳ ಕಾಲ ನಟಿಸೋ ಅವಕಾಶ ಸಿಕ್ಕಿತ್ತು ಎನ್ನುವ ಹೆಮ್ಮೆಯಿದೆ ಎಂದು ಮೇಘನಾ ರಾಜ್ ವಿವರಿಸಿದ್ದಾರೆ.
#MeghanaRaj reveals how she joined #Jailer2!
— CineBuzzMedia (@CineBuzzMedia) October 21, 2026
Her condition was clear: she wanted to share screen space with Superstar #Rajinikanth, not just be used as a set property! After her father verified the film with Shivanna, she confirmed her role. Meghana says she worked for 35 days… pic.twitter.com/I3VTfpZ3pD