ಒಂದು ಸಿನಿಮಾದಿಂದ ಸ್ಫೂರ್ತಿ ಪಡೆಯೋದು ಪ್ರೇರಣೆಗೊಂಡು ತಮ್ಮ ಸಿನಿಮಾಗಳಲ್ಲಿ ಅಳವಡಿಸಿಕೊಳ್ಳುವುದು ಸರ್ವೇಸಾಮಾನ್ಯ. ಅತಿಯಾದ್ರೆ ಅಮೃತ ಕೂಡ ವಿಷ ಎನ್ನುವುದನ್ನು ಮರೆಯಬಾರದು. ಪ್ರೇರಣೆ ಎನ್ನುವುದು ಪ್ರತಿಬಾರಿ ವರ್ಕ್ ಔಟ್ ಆಗಲ್ಲ. ಕೆಲವೊಮ್ಮೆ ಹುಚ್ಚಾಟ ಎನಿಸಿಬಿಡುತ್ತೆ.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಸಿನಿಮಾ ಯಾರಿಗ್ ಗೊತ್ತಿಲ್ಲ ಹೇಳಿ. ಕರಾವಳಿ ಭಾಗದ ಜನರ ಜೀವನ, ಅಲ್ಲಿನ ಆಚರಣೆ, ಸಂಪ್ರದಾಯ, ದೈವವನ್ನು ತೆರೆಗೆ ತಂದು ರಿಷಬ್ ಸಕ್ಸಸ್ ಕಂಡಿದ್ದರು. ಮೊದಲ ಭಾಗದ ಕ್ಲೈಮ್ಯಾಕ್ಸ್ನಲ್ಲಿ ಗುಳಿಗ ಹಾಗೂ ಪಂಜರ್ಲಿ ದೈವಗಳ ವಿಚಾರವನ್ನು ಸೊಗಸಾಗಿ ತೋರಿಸಿದ್ದರು. ಗುಳಿಗ ದೈವ ಆವಾಹನೆ ರಿಷಬ್ ಶೆಟ್ಟಿ ಪ್ರಯತ್ನಕ್ಕೆ ಕನ್ನಡ ಸಿನಿರಸಿಕರು ಮಾತ್ರವಲ್ಲ ಪರಭಾಷಿಕರು ಫಿದಾ ಆಗಿದ್ದರು.
ಕರಾವಳಿಯ ಮತ್ತಷ್ಟು ದೈವಗಳನ್ನು ತೆರೆಮೇಲೆ ತೋರಿಸುವ ಪ್ರಯತ್ನ ನಡೀತಿದೆ. ಸ್ವತಃ ರಿಷಬ್ ಶೆಟ್ಟಿ 'ಕಾಂತಾರ-1' ಚಿತ್ರದಲ್ಲಿ ಕರಾವಳಿ ದೈವಗಳ ಬಗ್ಗೆ ಮತ್ತಷ್ಟು ಆಳವಾಗಿ ಕಥೆ ಹೇಳಿದ್ದರು. ಗುಳಿಗ ದೈವದ ಆವಾಹನೆಯನ್ನು ಚೆನ್ನಾಗಿ ತೆರೆಮೇಲೆ ತಂದಿದ್ದರು. ಆದರೆ ಈಗ ಸಾಕಷ್ಟು ಸಿನಿಮಾಗಳಲ್ಲಿ ಇದನ್ನು ಕಾಪಿ ಮಾಡಲಾಗ್ತಿದೆ. ನಿನ್ನೆ(ಅಕ್ಟೋಬರ್ 16) ಬಂದ 'ರಣಬಾಲಿ' ಚಿತ್ರದಲ್ಲಿ ಕೂಡ ಇದನ್ನು ನೋಡಬಹುದು. ಪ್ರೇಕ್ಷಕರಂತೂ 'ಕಾಂತಾರ' ಕಾಪಿ ಮಾಡೋದು ಬಿಟ್ಟುಬಿಡ್ರೋ ಎಂದು ಬೇಡಿಕೊಳ್ಳುವಂತಾಗಿಬಿಟ್ಟಿದೆ.
'ರಣಬಾಲಿ' ಮಾತ್ರವಲ್ಲ ಕೆಲ ದಿನಗಳ ಹಿಂದೆ ನಾನಿ ನಟಿಸಿದ 'ದಿ ಪ್ಯಾರಡೈಸ್' ಚಿತ್ರದಲ್ಲಿ ಕೂಡ ಇಂಥದ್ದೇ ಅಂಶಗಳನ್ನು ನೋಡಬಹುದು. ತಮಿಳಿನ 'ಕರುಪ್ಪು' ಚಿತ್ರದಲ್ಲಿ ಸ್ವತಃ ಚಿತ್ರತಂಡವೇ 'ಕಾಂತಾರ' ಚಿತ್ರದಿಂದ ಪ್ರೇರಣೆಗೊಂಡು ಅಂತಹ ಸನ್ನಿವೇಶಗಳನ್ನು ಕಟ್ಟಿಕೊಟ್ಟಿದ್ದಾಗಿ ಹೇಳಿತ್ತು. ಅದು ಕರುಪ್ಪು ಸ್ವಾಮಿಯ ಕುರಿತಾದ ಕಥೆ. ದೇವರೇ ಭೂಮಿಗೆ ಬರುವಂತಹ ಕಥೆ. ಸಿನಿಮಾ ಹಿಟ್ ಆಗಿತ್ತು. ಸೂರ್ಯ ಕರುಪ್ಪು ಸ್ವಾಮಿಯಾಗಿ ನಟಿಸಿ ಗೆದ್ದಿದ್ದರು. 'ಪುಷ್ಪ- 2' ಚಿತ್ರದಲ್ಲಿ ಕೂಡ 'ಕಾಂತಾರ' ಕಾಪಿ ಮಾಡುವ ಪ್ರಯತ್ನ ಮಾಡಲಾಗಿತ್ತು. ಅದು ಹೇಗೋ ವರ್ಕ್ಔಟ್ ಆಗಿ ಬಿಟ್ಟಿತ್ತು. ಆದರೆ 'ದಿ ಪ್ಯಾರಡೈಸ್' ಹಾಗೂ 'ರಣಬಾಲಿ' ಚಿತ್ರಗಳಲ್ಲಿ ಇದು ಅತಿಯಾಯ್ತು ಎನಿಸದೇ ಇರದು. ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ.
ಚಿತ್ರದಲ್ಲಿ ನಾಯಕ ರಣಬಾಲಿ ಮೈಮೇಲೆ ಭದ್ರಾದ್ರಿ ಮಲ್ಲನ್ನ ಸ್ವಾಮಿ ಆವಾಹನೆಯಾಗುವ ಸನ್ನಿವೇಶದ ಬಗ್ಗೆ ಸಾಕಷ್ಟು ಕಾಮೆಂಟ್ಸ್ ಬರ್ತಿದೆ. ವಿಜಯ್ ಕೋಳಿ ಕುತ್ತಿಗೆಯನ್ನು ಬಾಯಿಯಿಂದಲೇ ಕಚ್ಚುವ ದೃಶ್ಯ ವೈರಲ್ ಆಗ್ತಿದೆ. ಇದನ್ನೆಲ್ಲಾ ನೋಡಿ ದಯವಿಟ್ಟು ಸೌತ್ ಫಿಲ್ಮ್ ಮೇಕರ್ಸ್ 'ಕಾಂತಾರ' ಗುಂಗಿನಿಂದ ಹೊರಬಂದುಬಿಡಿ ಎಂದು ಕೇಳಿಕೊಳ್ಳುವಂತಾಗಿದೆ.
Ranabaali Review:
— 𝐇𝐞𝐦𝐚𝐧𝐭𝐡 🔱 (@hemanth_dhfm_) October 16, 2026
Vijay acting & Rashmika chemistry are major pluses! 🔥@TheDeverakonda ❤️🔥
Second half aithe MAD MAD MAD undi 🔥 Emotional depth & peak climax 💥
Second half itself is totally worth your ticket . Kachhitanga big screen lo chudalsina cinema! 🎬💯#ranabaali pic.twitter.com/EMCR3NbBfQ